ದೇಶ

ಹಾರ್ಮುಜ್ ದಾಟಿದ LPG ಹೊತ್ತ ಭಾರತದ ಎರಡು ಹಡಗು; ದಾಳಿಯಿಂದ ಮುಳುಗಿದ ಮತ್ತೊಂದು ಟ್ಯಾಂಕರ್‌!

ಎಲ್‌ಪಿಜಿ ಟ್ಯಾಂಕರ್ ಸಿಮಿ, ಮೇ 13 ರಂದು ಜಲಸಂಧಿಯ ಮೂಲಕ ಸಾಗಿತು. ಅಲ್ಲದೆ ಎನ್‌ವಿ ಸನ್‌ಶೈನ್ ಗುರುವಾರ ಜಲಮಾರ್ಗವನ್ನು ಸುರಕ್ಷಿತವಾಗಿ ದಾಟಿತು.

ಹಾರ್ಮುಜ್ ದಾಟಿದ LPG ಹೊತ್ತ ಭಾರತದ ಎರಡು ಹಡಗು; ದಾಳಿಯಿಂದ ಮುಳುಗಿದ ಮತ್ತೊಂದು ಟ್ಯಾಂಕರ್‌!
ಹಾರ್ಮುಜ್ ಜಲಸಂಧಿ ದಾಟಿದ ಭಾರತದ ಹಡಗು (ಸಂಗ್ರಹ ಚಿತ್ರ) — online desk
Published On :

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಭಾರತಕ್ಕೆ ಬರುತ್ತಿದ್ದ ಎರಡು ದ್ರವೀಕೃತ ಪೆಟ್ರೋಲಿಯಂ ಅನಿಲ(LPG) ಹೊತ್ತ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿವೆ. ಆದರೆ ಭಾರತದ ಧ್ವಜ ಹೊಂದಿದ್ದ ಮತ್ತೊಂದು ಹಡಗು ಆಯಕಟ್ಟಿನ ಹಡಗು ಕಾರಿಡಾರ್ ಬಳಿ ಡಿಕ್ಕಿ ಹೊಡೆದು ಮುಳುಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಎಲ್‌ಪಿಜಿ ಟ್ಯಾಂಕರ್ ಸಿಮಿ, ಮೇ 13 ರಂದು ಜಲಸಂಧಿಯ ಮೂಲಕ ಸಾಗಿತು. ಅಲ್ಲದೆ ಎನ್‌ವಿ ಸನ್‌ಶೈನ್ ಗುರುವಾರ ಜಲಮಾರ್ಗವನ್ನು ಸುರಕ್ಷಿತವಾಗಿ ದಾಟಿತು.

ಇದರೊಂದಿಗೆ ಎರಡು ತಿಂಗಳ ಹಿಂದೆ ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಂತರ ಟೆಹ್ರಾನ್ ಪ್ರತೀಕಾರ ತೀರಿಸಿಕೊಳ್ಳಲು ಹಾರ್ಮುಜ್ ಮುಚ್ಚಲ್ಪಟ್ಟ ನಂತರ ಆ ಜಲ ಮಾರ್ಗವನ್ನು ದಾಟಿದ ಒಟ್ಟು ಭಾರತೀಯ ಹಡಗುಗಳ ಸಂಖ್ಯೆ 13 ಕ್ಕೆ ತಲುಪಿದೆ.

ಪ್ರತ್ಯೇಕ ಘಟನೆಯಲ್ಲಿ, ಸೊಮಾಲಿಯಾದಿಂದ ಯುಎಇಯ ಶಾರ್ಜಾಗೆ ಪ್ರಯಾಣಿಸುತ್ತಿದ್ದ ಭಾರತೀಯ ಧೋವ್ ಅಥವಾ ಯಾಂತ್ರಿಕೃತ ನೌಕಾಯಾನ ಹಡಗು(MSV) ಹಾಜಿ ಅಲಿ ಬುಧವಾರ ಬೆಳಗ್ಗೆ ಒಮಾನಿ ನೀರಿನಲ್ಲಿ ದಾಳಿಗೆ ಒಳಗಾಗಿದೆ. ದಾಳಿ ನಂತರ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದು ಮುಳುಗಲು ಕಾರಣವಾಯಿತು ಎಂದು ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮುಖೇಶ್ ಮಂಗಲ್ ಹೇಳಿದ್ದಾರೆ.

"(ಹಾಜಿ ಅಲಿ) ಹಡಗಿನಲ್ಲಿದ್ದ ಎಲ್ಲಾ 14 ಸಿಬ್ಬಂದಿಯನ್ನು ಒಮಾನಿ ಕರಾವಳಿ ಕಾವಲು ಪಡೆ ಸುರಕ್ಷಿತವಾಗಿ ರಕ್ಷಿಸಿದೆ ಮತ್ತು ಅವರು ಒಮಾನ್‌ನ ದಿಬ್ಬಾ ಬಂದರನ್ನು ತಲುಪಿದ್ದಾರೆ. ಸಿಬ್ಬಂದಿ ಸುರಕ್ಷಿತರಾಗಿದ್ದಾರೆಂದು ವರದಿಯಾಗಿದೆ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಅಗತ್ಯ ಔಪಚಾರಿಕತೆಗಳು ಪೂರ್ಣಗೊಂಡಿವೆ" ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.