ದೇಶ

ಹಾರ್ಮುಜ್ ಎಲ್ಲಾ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಮುಕ್ತ, ಆದರೆ...: ಇರಾನ್ ವಿದೇಶಾಂಗ ಸಚಿವ ಅರಘ್ಚಿ

ಇಂದು ನವದೆಹಲಿಯಲ್ಲಿ ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಗೆ ಮುಂಚಿತವಾಗಿ ಪ್ರೆಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ, "ಅಮೆರಿಕದ ಆಕ್ರಮಣ ಮತ್ತು ತನ್ನ ಮೇಲೆ ವಿಧಿಸಿರುವ ದಿಗ್ಬಂಧನದಿಂದ ಹಾರ್ಮುಜ್ ಜಲಸಂಧಿಯು ಈಗ ಎಲ್ಲಕ್ಕಿಂತ ಹೆಚ್ಚಾಗಿ ಬಳಲುತ್ತಿದೆ" ಎಂದರು.

ಹಾರ್ಮುಜ್ ಎಲ್ಲಾ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಮುಕ್ತ, ಆದರೆ...: ಇರಾನ್ ವಿದೇಶಾಂಗ ಸಚಿವ ಅರಘ್ಚಿ
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ
Published On :

ನವದೆಹಲಿ: ಹಾರ್ಮುಜ್ ಜಲಸಂಧಿಯು ಎಲ್ಲಾ ವಾಣಿಜ್ಯ ಹಡಗುಗಳಿಗೆ ಮುಕ್ತವಾಗಿದೆ ಎಂದು ಗುರುವಾರ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಅವರು ಹೇಳಿದ್ದಾರೆ. ಆದರೆ ಹೆಚ್ಚಿದ ಪ್ರಾದೇಶಿಕ ಉದ್ವಿಗ್ನತೆ ಮತ್ತು ಅಮೆರಿಕ ವಿಧಿಸಿರುವ "ಅಕ್ರಮ ದಿಗ್ಬಂಧನ"ದ ನಡುವೆಯೂ ಹಡಗುಗಳು ಆಯಕಟ್ಟಿನ ಜಲಮಾರ್ಗದ ಮೂಲಕ ಹಾದುಹೋಗಲು ಇರಾನ್ ನೌಕಾ ಪಡೆಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.

ಇಂದು ನವದೆಹಲಿಯಲ್ಲಿ ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಗೆ ಮುಂಚಿತವಾಗಿ ಪ್ರೆಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ, "ಅಮೆರಿಕದ ಆಕ್ರಮಣ ಮತ್ತು ತನ್ನ ಮೇಲೆ ವಿಧಿಸಿರುವ ದಿಗ್ಬಂಧನದಿಂದ ಹಾರ್ಮುಜ್ ಜಲಸಂಧಿಯು ಈಗ ಎಲ್ಲಕ್ಕಿಂತ ಹೆಚ್ಚಾಗಿ ಬಳಲುತ್ತಿದೆ" ಎಂದು ಅರಘ್ಚಿ ತಿಳಿಸಿದರು.

"ನಮ್ಮ ಅಭಿಪ್ರಾಯದಲ್ಲಿ, ಹಾರ್ಮುಜ್ ಜಲಸಂಧಿಯು ಎಲ್ಲಾ ವಾಣಿಜ್ಯ ಹಡಗುಗಳಿಗೆ ಮುಕ್ತವಾಗಿದೆ. ಆದರೆ ಅವು ನಮ್ಮ ನೌಕಾ ಪಡೆಗಳೊಂದಿಗೆ ಸಹಕರಿಸಬೇಕು" ಎಂದು ಅವರು ಹೇಳಿದರು.

ಜಾಗತಿಕ ತೈಲ ಸಾಗಣೆಯ ಗಮನಾರ್ಹ ಭಾಗವು ಹಾದುಹೋಗುವ ಕಾರ್ಯತಂತ್ರದ ಪ್ರಮುಖ ಜಲಮಾರ್ಗದಲ್ಲಿ ಟೆಹ್ರಾನ್ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿಲ್ಲ ಎಂದು ಇರಾನಿನ ವಿದೇಶಾಂಗ ಸಚಿವರು ಪ್ರತಿಪಾದಿಸಿದರು.

"ನಾವು ಯಾವುದೇ ಅಡೆತಡೆಗಳನ್ನು ಸೃಷ್ಟಿಸಿಲ್ಲ; ದಿಗ್ಬಂಧನವನ್ನು ಸೃಷ್ಟಿಸಿದ್ದು ಅಮೆರಿಕ ಮತ್ತು ಅಮೆರಿಕ ವಿಧಿಸಿರುವ ಈ ಅಕ್ರಮ ದಿಗ್ಬಂಧನವನ್ನು ತೆಗೆದುಹಾಕುವುದರೊಂದಿಗೆ ಈ ಸಮಸ್ಯೆ ಕೊನೆಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಅರಘ್ಚಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.