ಎರಡು ವರ್ಷದವರೆಗಿನ 'ಸಮ್ಮತಿಯ ಲೈಂಗಿಕ ಸಂಬಂಧ' ಅತ್ಯಾಚಾರವೇ? ಕೋರ್ಟ್ ಹೇಳಿದ್ದೇನು!
ಖಾನ್ ಥಾಣೆಯ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರು ಹೆಣ್ಣುಮಕ್ಕಳಿರುವ ವಿಚ್ಛೇದಿತ ಸಂತ್ರಸ್ತೆಯೊಂದಿಗೆ ಸ್ನೇಹ ಬೆಳೆಸಿದ್ದ ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.

ಥಾಣೆ: ಮದುವೆಯಾಗುವ ಭರವಸೆ ಆಧಾರದ ಮೇಲೆ ದೀರ್ಘಕಾಲದಿಂದ ಸಮ್ಮತಿಯ ಲೈಂಗಿಕ ಸಂಬಂಧ ಹೊಂದಿದ್ದರೆ ಅದನ್ನು ಅತ್ಯಾಚಾರ ಎಂದು ಅರ್ಥೈಸಲಾಗದು ಎಂದು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಸೆಷನ್ಸ್ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಅತ್ಯಾಚಾರ ಮತ್ತು ವಂಚನೆ ಆರೋಪ ಹೊತ್ತಿರುವ 33 ವರ್ಷದ ವ್ಯಕ್ತಿಯನ್ನು ಖುಲಾಸೆಗೊಳಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ರೂಬಿ ಯು ಮಾಲ್ವಂಕರ್ ಅವರು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಆರೋಪಿ ಶಹಬಾಜ್ ಮೊಹಮ್ಮದ್ ಸಲೀಂ ಖಾನ್ ಅವರನ್ನು ಅತ್ಯಾಚಾರ ಮತ್ತು ವಂಚನೆಯ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದರು. ಮೇ 2 ರಂದು ನೀಡಲಾದ ಈ ಆದೇಶದ ಪ್ರತಿಯನ್ನು ಭಾನುವಾರ ಬಹಿರಂಗಗೊಳಿಸಲಾಗಿದೆ.
ಖಾನ್ ಥಾಣೆಯ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರು ಹೆಣ್ಣುಮಕ್ಕಳಿರುವ ವಿಚ್ಛೇದಿತ ಸಂತ್ರಸ್ತೆಯೊಂದಿಗೆ ಸ್ನೇಹ ಬೆಳೆಸಿದ್ದ ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.
ಮದುವೆಯ ಭರವಸೆಯೊಂದಿಗೆ ಅವರಿಬ್ಬರು 2016 ಮತ್ತು 2018 ರ ನಡುವೆ ಪರಸ್ಪರ ಒಪ್ಪಿತ ಲೈಂಗಿಕ ಸಂಬಂಧ ಹೊಂದಿದ್ದರು. ಆದರೆ ತದನಂತರ ಮದುವೆಯಾಗುವುದಿಲ್ಲ ಎಂದು ಹೇಳಿದ್ದು, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು. ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸುವಾಗ ಸಮ್ಮತಿಯ ಲೈಂಗಿಕ ಸಂಬಂಧ ಮತ್ತು ವಂಚನೆಯ ಉದ್ದೇಶದ ಬಗ್ಗೆ ಸಾಕ್ಷ್ಯಗಳ ಕೊರತೆಯನ್ನು ಉಲ್ಲೇಖಿಸಿತು.
"ಎರಡು ವರ್ಷಗಳ ಕಾಲದ ಸಂಬಂಧ ಗಣನೀಯ ಅವಧಿಯಾಗಿದ್ದು, ಈ ಅವಧಿಯಲ್ಲಿ ಆಕೆ ಎಂದಿಗೂ ದೂರು ನೀಡಿಲ್ಲ ಅಥವಾ ತಾನು ಮೋಸ ಹೋಗಿದ್ದೇನೆಂದು ಭಾವಿಸಿಲ್ಲ. ಇದು ಆಕೆ ಲೈಂಗಿಕ ಸಂಬಂಧದಲ್ಲಿ ಸಮಾನವಾಗಿ ಭಾಗವಹಿಸಿದ್ದಾಳೆಂದು ಸೂಚಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಲಿವ್ ಇನ್ ಸಂಬಂಧದಲ್ಲಿ ಜೊತೆಗಿದ್ದು ಮಗುವಾದ ನಂತರ ಅದು ಅತ್ಯಾಚಾರ ಅಂದರೆ ಹೇಗೆ?: ಸುಪ್ರೀಂ ಕೋರ್ಟ್ ಪ್ರಶ್ನೆ
ಆರೋಪಿಯು ಸಂಬಂಧದ ಆರಂಭದಿಂದಲೂ ದೂರುದಾರರನ್ನು ವಂಚಿಸುವ ಅಥವಾ ಶೋಷಿಸುವ ದುರುದ್ದೇಶಪೂರಿತ ಉದ್ದೇಶವನ್ನು ಹೊಂದಿದ್ದನೆಂದು ಸಾಬೀತುಪಡಿಸಲು ಯಾವುದೇ ದಾಖಲೆಗಳಿಲ್ಲ ಎಂಬುದನ್ನು ನ್ಯಾಯಾಲಯ ಪರಿಗಣಿಸಿತು.
ಕ್ರಿಮಿನಲ್ ಬೆದರಿಕೆ ಮತ್ತು ಉದ್ದೇಶಪೂರ್ವಕ ಅವಮಾನದ ಬಗ್ಗೆ ಸಂತ್ರಸ್ತೆಯ ಸಾಕ್ಷ್ಯವು ಸಂಪೂರ್ಣವಾಗಿ ಅಸ್ಪಷ್ಟವಾಗಿದ್ದು, ಖಚಿತತೆ ಇಲ್ಲ ಎಂದು ನ್ಯಾಯಾಲಯ ಹೇಳಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


