ಪಶ್ಚಿಮ ಬಂಗಾಳ: ತೃಣಮೂಲ ಕಾಂಗ್ರೆಸ್ ನ ಸೋಭಾಂದೇಬ್ ಚಟ್ಟೋಪಾಧ್ಯಾಯ ವಿರೋಧ ಪಕ್ಷ ನಾಯಕ, ಫಿರ್ಹದ್ ಹಕಿಮ್ ಮುಖ್ಯ ಸಚೇತಕ
ನಿನ್ನೆ ಶನಿವಾರ ಸಂಜೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಪಕ್ಷವು ಧನೇಖಾಲಿ ಶಾಸಕ ಅಸಿಮಾ ಪತ್ರ ಮತ್ತು ಚೌರಂಗಿ ಶಾಸಕಿ ನೈನಾ ಬಂಡೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ಉಪನಾಯಕರಾಗಿ ನೇಮಿಸಿದೆ ಎಂದು ತಿಳಿಸಿದೆ.

ತೃಣಮೂಲ ಕಾಂಗ್ರೆಸ್ ಬಲ್ಲಿಗುಂಜ್ ಶಾಸಕ ಸೋಭಾಂದೇಬ್ ಚಟ್ಟೋಪಾಧ್ಯಾಯ ಅವರನ್ನು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ನೇಮಿಸಿದೆ. ಇದು ಇತ್ತೀಚಿನ ರಾಜ್ಯ ಚುನಾವಣೆಯಲ್ಲಿ ಪಕ್ಷ ಸೋಲು ಕಂಡ ನಂತರ ಕೈಗೊಂಡ ನಿರ್ಧಾರವಾಗಿದೆ.
ನಿನ್ನೆ ಶನಿವಾರ ಸಂಜೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಪಕ್ಷವು ಧನೇಖಾಲಿ ಶಾಸಕ ಅಸಿಮಾ ಪತ್ರ ಮತ್ತು ಚೌರಂಗಿ ಶಾಸಕಿ ನೈನಾ ಬಂಡೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ಉಪನಾಯಕರಾಗಿ ನೇಮಿಸಿದೆ ಎಂದು ತಿಳಿಸಿದೆ.
ಕೊಲ್ಕತ್ತಾ ಪೋರ್ಟ್ ಶಾಸಕ ಫಿರ್ಹದ್ ಹಕಿಮ್ ಅವರನ್ನು ವಿಧಾನಸಭೆಯಲ್ಲಿ ಮುಖ್ಯ ಸಚೇತಕರಾಗಿ (chief whip) ನೇಮಿಸಲಾಗಿದೆ. ಹಕೀಂ ಅವರು ಕೋಲ್ಕತ್ತಾ ಮುನಿಸಿಪಲ್ ಕಾರ್ಪೊರೇಶನ್‌ನ ಮೇಯರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಪಕ್ಷವು ಹೊಸದಾಗಿ ನೇಮಕಗೊಂಡ ನಾಯಕರು ಪಶ್ಚಿಮ ಬಂಗಾಳದ ಜನರ ಹಿತಕ್ಕಾಗಿ ಬದ್ಧತೆಯಿಂದ ಕೆಲಸ ಮಾಡುತ್ತಾರೆ ಎಂದು ತಿಳಿಸಿದೆ. ಚುನಾವಣೆಯಲ್ಲಿ ಬಿಜೆಪಿ ಭಾರೀ ಜಯ ಸಾಧಿಸಿ 294 ಸದಸ್ಯರ ಸದನದಲ್ಲಿ 207 ಸ್ಥಾನಗಳನ್ನು ಗೆದ್ದು ಮೊದಲ ಬಾರಿಗೆ ರಾಜ್ಯದಲ್ಲಿ ಸರ್ಕಾರ ರಚಿಸಿದೆ. ಟಿಎಂಸಿ 80 ಸ್ಥಾನಗಳನ್ನು ಗೆದ್ದಿದೆ.
ಸುವೇಂದು ಅಧಿಕಾರಿ ನಿನ್ನೆ ಬೆಳಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



