'ಅಸಭ್ಯ ವರ್ತನೆ, ನಿಂದನೆ': ಬ್ಲಿಂಕಿಟ್ ಡೆಲಿವರಿ ಏಜೆಂಟ್‌ನಿಂದಾದ ಕಿರುಕುಳ ನೆನಪಿಸಿಕೊಂಡ 'ಉರಿ' ಚಿತ್ರದ ನಟಿ ರಿವಾ ಅರೋರಾ!
ರಿವಾ ಅರೋರಾ ಉರಿ: ದಿ ಸರ್ಜಿಕಲ್ ಸ್ಟ್ರೈಕ್, ಭಾರತ್, ಮತ್ತು ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಬ್ಲಿಂಕಿಟ್ ಡೆಲಿವರಿ ಏಜೆಂಟ್ ಜೊತೆ ನಡೆದ ಆತಂಕಕಾರಿ ಘಟನೆಯ ಹತ್ತು ದಿನಗಳ ನಂತರ, ಉರಿ ಚಿತ್ರದ ನಟಿ ರಿವಾ ಅರೋರಾ ತಮ್ಮ ಅನುಭವವನ್ನು ಸಾರ್ವಜನಿಕವಾಗಿ ಹಂಚಿಕೊಂಡರು. ಪರಿಸ್ಥಿತಿ ನಿಯಂತ್ರಣ ಮೀರಿದ್ದು, ಪೊಲೀಸರ ಹಸ್ತಕ್ಷೇಪಕ್ಕೆ ಕಾರಣವಾಯಿತು. ಪದೇ ಪದೆ ಎಚ್ಚರಿಕೆ ನೀಡಿದ್ದರೂ ಡೆಲಿವರಿ ಏಜೆಂಟ್ ಅಸಭ್ಯವಾಗಿ ವರ್ತಿಸಿ, ನಿಂದನೀಯ ಭಾಷೆಯನ್ನು ಬಳಸುತ್ತಲೇ ಇದ್ದರು ಎಂದು ವರು ನೆನಪಿಸಿಕೊಂಡರು.
ಏಪ್ರಿಲ್ 26 ರಂದು, ಡೆಲಿವರಿ ಏಜೆಂಟ್ ಮಧ್ಯಾಹ್ನ 3.30ರ ಸುಮಾರಿಗೆ ಆರ್ಡರ್ ಜೊತೆಗೆ ರಿವಾ ಅವರ ಮನೆ ಬಾಗಿಲಿಗೆ ಬಂದರು.
'ಆರಂಭದಿಂದಲೂ ಅವರ ಮಾತು ರೂಡ್ ಮತ್ತು ಅನುಚಿತವಾಗಿತ್ತು. ನಾನು ಪ್ರತಿಕ್ರಿಯಿಸಿದಾಗ ಪರಿಸ್ಥಿತಿ ಸುಧಾರಿಸಲಿಲ್ಲ. ನನ್ನ ತಾಯಿ (ನಿಶಾ ಅರೋರಾ) ಈ ಸಮಸ್ಯೆಯನ್ನು ಶಾಂತವಾಗಿ ಪರಿಹರಿಸಲು ಮತ್ತು ವಿಷಯಗಳನ್ನು ಶಾಂತಗೊಳಿಸಲು ಮುಂದಾದರು. ಆದರೆ, ಡೆಲಿವರಿ ಏಜೆಂಟ್ ಅಗೌರವದಿಂದ ವರ್ತಿಸುತ್ತಲೇ ಇದ್ದರು' ಎಂದು ನಟ ಹಿಂದೂಸ್ತಾನ್ ಟೈಮ್ಸ್‌ಗೆ ವಿವರಿಸಿದ್ದಾರೆ.
'ಅವರು ಹೊರಡುವಾಗ ನನ್ನ ಸಹೋದರಿ ಲಿಫ್ಟ್‌ನಲ್ಲಿ ಎದುರಾದಾಗಲೂ, ಅವರು ಅನುಚಿತ ಭಾಷೆಯನ್ನು ಬಳಸುತ್ತಲೇ ಇದ್ದರು. ಆ ಸಮಯದಲ್ಲಿ, ಅವರ ನಡವಳಿಕೆಯು ಗಡಿ ದಾಟಿದೆ ಮತ್ತು ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ನಮಗೆ ಅನಿಸಿತು. ಯಾವುದೇ ಪ್ರಚೋದನೆಯಿಲ್ಲದೆ ನಮ್ಮ ಕಡೆಗೆ ಅಗೌರವ, ಅನುಚಿತ ಮತ್ತು ಅಸಭ್ಯ ಭಾಷೆಯನ್ನು ಬಳಸಲಾಯಿತು. ಅವರು ಅದೇ ದಾಟಿಯಲ್ಲಿ ಪದೇ ಪದೆ ಮಾತನಾಡುತ್ತಲೇ ಇದ್ದರು' ಎಂದು ರಿವಾ ಆರೋಪಿಸಿದ್ದಾರೆ.
'ನಮ್ಮ ಮನೆ ಬಾಗಿಲಿನಿಂದಲೇ ಸಮಸ್ಯೆ ಪ್ರಾರಂಭವಾಯಿತು ಮತ್ತು ಹೊರಡುವಾಗಲೂ ಆತ ತನ್ನ ಕೆಟ್ಟ ನಡವಳಿಕೆಯನ್ನು ಮುಂದುವರಿಸಿದ. ವಾಗ್ವಾದದ ನಂತರ ಆತ ಅಲ್ಲಿಂದ ಹೋಗಲು ಪ್ರಯತ್ನಿಸಿದಾಗ, ನಾವು ಅವನನ್ನು ಕೆಳಗಿನವರೆಗೂ ಹಿಂಬಾಲಿಸಿದೆವು ಮತ್ತು ಅದರಿಂದ ಆತ ತಪ್ಪಿಸಿಕೊಳ್ಳದಂತೆ ತಡೆಯಲು ಸಾಧ್ಯವಾಯಿತು. ನಾವು ತಕ್ಷಣ ಮುಂಬೈ ಪೊಲೀಸರನ್ನು ಸಂಪರ್ಕಿಸಿದೆವು, ಅವರು ಬಹಳ ಬೇಗನೆ ಪ್ರತಿಕ್ರಿಯಿಸಿದರು ಮತ್ತು ಕ್ರಮ ಕೈಗೊಳ್ಳಲು ಸ್ಥಳಕ್ಕೆ ಬಂದರು' ಎಂದು ಹೇಳಿದರು.
'ಈ ಸಂಬಂಧ ನಾವು ಬ್ಲಿಂಕಿಟ್‌ಗೆ ಔಪಚಾರಿಕ ದೂರು ನೀಡಿದ್ದೇವೆ. ಏಕೆಂದರೆ, ಆ ಮಟ್ಟದಲ್ಲಿ ಹೊಣೆಗಾರಿಕೆ ಅಷ್ಟೇ ಮುಖ್ಯವಾಗಿದೆ. ನಾವು ಸದ್ಯ ಅವರ ಕಡೆಯಿಂದ ಸ್ಪಷ್ಟ ಪ್ರತಿಕ್ರಿಯೆ ಮತ್ತು ಪರಿಹಾರಕ್ಕಾಗಿ ಕಾಯುತ್ತಿದ್ದೇವೆ' ಎಂದು ನಟಿ ಹೇಳಿದರು.
ರಿವಾ ಅರೋರಾ ಉರಿ: ದಿ ಸರ್ಜಿಕಲ್ ಸ್ಟ್ರೈಕ್, ಭಾರತ್, ಮತ್ತು ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



