'ನನ್ನ ಜೀವನವಿಡೀ ಹೋರಾಡುತ್ತೇನೆ': ಸತತ 3 ಗಂಟೆ ಭಾವನಿಪುರ ಸ್ಟ್ರಾಂಗ್ ರೂಂನಲ್ಲಿ ಕಳೆದು ಹೊರಬಂದ ಮಮತಾ ಬ್ಯಾನರ್ಜಿ ಹೇಳಿದ್ದೇನು? Video
ಸ್ಟ್ರಾಂಗ್‌ರೂಮ್‌ನಿಂದ ಹೊರಬಂದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಮಾಧ್ಯಮಗಳಲ್ಲಿ ಬಂದ ವರದಿಗಳ ನಂತರ ಈ ಸ್ಥಳವನ್ನು ಪರಿಶೀಲಿಸಲು ಬಂದೆ ಎಂದು ಹೇಳಿದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದಕ್ಷಿಣ ಕೊಲ್ಕತ್ತಾದ ಭಾವನಿಪುರ ಕ್ಷೇತ್ರದಲ್ಲಿರುವ ಸಖಾವತ್ ಮೆಮೋರಿಯಲ್ ಶಾಲೆಯ ಸ್ಟ್ರಾಂಗ್‌ರೂಮ್‌ಗೆ ಭೇಟಿ ನೀಡಿದರು. ಇಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು (EVMಗಳು) ಇರಿಸಲಾಗಿದ್ದು, ಕ್ರಮಬದ್ಧತೆಯ ಉಲ್ಲಂಘನೆ ಆರೋಪಗಳ ನಡುವೆಯೇ ಅವರು ಮೂರು ಗಂಟೆಗಳಿಗಿಂತ ಹೆಚ್ಚು ಸಮಯ ಅಲ್ಲೇ ಉಳಿದರು.
ಸ್ಟ್ರಾಂಗ್‌ರೂಮ್‌ನಿಂದ ಹೊರಬಂದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಮಾಧ್ಯಮಗಳಲ್ಲಿ ಬಂದ ವರದಿಗಳ ನಂತರ ಈ ಸ್ಥಳವನ್ನು ಪರಿಶೀಲಿಸಲು ಬಂದೆ ಎಂದು ಹೇಳಿದರು. ಇಲ್ಲಿ EVMಗಳಿಗಾಗಿ ಸ್ಟ್ರಾಂಗ್‌ರೂಮ್ ಇದೆ. ನಾನು ಇದನ್ನು ಟಿವಿಯಲ್ಲಿ ನೋಡಿದಾಗ, ಬರಬೇಕೆಂದು ಅನಿಸಿತು ಎಂದು ಹೇಳಿದರು.
ಕೇಂದ್ರ ಭದ್ರತಾ ಸಿಬ್ಬಂದಿ ಆರಂಭದಲ್ಲಿ ಪ್ರವೇಶವನ್ನು ನಿರಾಕರಿಸಿದರೂ, ಅಭ್ಯರ್ಥಿಯಾಗಿ ತಮ್ಮ ಹಕ್ಕನ್ನು ಉಲ್ಲೇಖಿಸಿದ ಬಳಿಕ ಅವಕಾಶ ನೀಡಿದರು ಎಂದು ಅವರು ಆರೋಪಿಸಿದರು. ಚುನಾವಣಾ ನಿಯಮಗಳ ಪ್ರಕಾರ, ಅಭ್ಯರ್ಥಿಗಳಿಗೆ ಸೀಲ್ ಮಾಡಲಾದ ಕೊಠಡಿಯ ಹೊರವಲಯದವರೆಗೆ ಹೋಗಲು ಅನುಮತಿ ಇದೆ. ನಂತರ ನನಗೆ ಒಳ ಹೋಗಲು ಅವಕಾಶ ನೀಡಲಾಯಿತು ಎಂದು ಹೇಳಿದರು.

ಬಿಜೆಪಿಯಿಂದ ಹಣ ಪಡೆದು Exit polls ಪ್ರಕಟ; 226 ಕ್ಕೂ ಹೆಚ್ಚು ಸ್ಥಾನಗಳಲ್ಲಿ TMC ಗೆಲುತ್ತೆ: ಮಮತಾ ಬ್ಯಾನರ್ಜಿ!
ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆಯಾದ ಮಮತಾ ಬ್ಯಾನರ್ಜಿ, ಅಕ್ರಮಗಳನ್ನು ನಾನು ವಿರೋಧಿಸುತ್ತೇನೆ ಎಂದರು. ನಾನು ಜೀವನಪೂರ್ತಿ ಹೋರಾಡುತ್ತೇನೆ. ಯಾವುದೇ ಅಕ್ರಮ ನಡೆಯುತ್ತಿದ್ದರೆ ಅದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದರು. EVMಗಳಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಪ್ರಯತ್ನಗಳನ್ನು ಕಠಿಣವಾಗಿ ಪ್ರತಿರೋಧಿಸುವುದಾಗಿ ಅವರು ಎಚ್ಚರಿಸಿದರು.
ಮಮತಾ ಬ್ಯಾನರ್ಜಿಯವರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೊದಲ್ಲಿ ಮತಪೆಟ್ಟಿಗೆಗಳ ಅಸಮರ್ಪಕ ನಿರ್ವಹಣೆ ನಡೆದಿದೆ ಎಂಬ ಟಿಎಂಸಿ ಆರೋಪಗಳ ನಂತರ ಸ್ಟ್ರಾಂಗ್ ರೂಂಗೆ ಭೇಟಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


