ಅಬಕಾರಿ ಸುಂಕ ಕಡಿತದಿಂದ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗಲ್ಲ; ಗ್ರಾಹಕರು, ಡೀಲರ್‌ಗಳಿಗೂ ಲಾಭ ಇಲ್ಲ! Video
"ವಾಸ್ತವವಾಗಿ ಸರ್ಕಾರ ಕಡಿಮೆ ಮಾಡಿರುವುದು 'ವಿಶೇಷ ಹೆಚ್ಚುವರಿ ಅಬಕಾರಿ ಸುಂಕ' - ತೈಲ ಮಾರುಕಟ್ಟೆ ಕಂಪನಿಗಳು ಸರ್ಕಾರಕ್ಕೆ ಪಾವತಿಸುವ ಲೆವಿ. 'ವಿಶೇಷ' ಮತ್ತು 'ಹೆಚ್ಚುವರಿ' ಪದಗಳು ಈ ತೆರಿಗೆ ಎಷ್ಟು ಅನಗತ್ಯ ಎಂಬುದನ್ನು ಬಹಿರಂಗಪಡಿಸುತ್ತವೆ"

ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ್ದು, ಇದು ಗ್ರಾಹಕರು ಅಥವಾ ಡೀಲರ್‌ಗಳಿಗೆ ತಕ್ಷಣವೇ ಯಾವುದೇ ಲಾಭವಾಗುವುದಿಲ್ಲ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ.
ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 3 ರೂ.ಗೆ ಇಳಿಸಿದೆ ಮತ್ತು ಡೀಸೆಲ್ ಮೇಲಿನ ಸುಂಕವನ್ನು ಸಂಪೂರ್ಣವಾಗಿ ತೆಗೆದುಹಾಕಿದೆ. ಆದಾಗ್ಯೂ, ಈ ಕ್ರಮವು ಪೆಟ್ರೋಲ್, ಡೀಸಲ್ ಬೆಲೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿರೋಧ ಪಕ್ಷ ವಾದಿಸಿದೆ.
"ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 'ಕಡಿಮೆಯಾಗುತ್ತಿದೆ' ಎಂಬ ಹೆಡ್ ಲೈನ್ ಗಳನ್ನು ನೋಡಿ, ಸರ್ಕಾರವು ನಿಮ್ಮ ಜೇಬಿಗೆ ಬಿಗ್ ರಿಲೀಫ್ ನೀಡುತ್ತಿದೆ ಎಂದು ಭಾವಿಸಿದರೆ, ನೀವು ತಪ್ಪಾಗಿ ಭಾವಿಸುತ್ತಿದ್ದೀರಿ ಅಂತ" ಎಂದು ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಹೇಳಿದ್ದಾರೆ.
ಪ್ರಸ್ತುತ, ಡೀಲರ್‌ಗಳು ಮತ್ತು ಗ್ರಾಹಕರಿಗೆ ಇಂಧನ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಹೇಳಿದ್ದಾರೆ.
"ವಾಸ್ತವವಾಗಿ ಸರ್ಕಾರ ಕಡಿಮೆ ಮಾಡಿರುವುದು 'ವಿಶೇಷ ಹೆಚ್ಚುವರಿ ಅಬಕಾರಿ ಸುಂಕ' - ತೈಲ ಮಾರುಕಟ್ಟೆ ಕಂಪನಿಗಳು ಸರ್ಕಾರಕ್ಕೆ ಪಾವತಿಸುವ ಲೆವಿ. 'ವಿಶೇಷ' ಮತ್ತು 'ಹೆಚ್ಚುವರಿ' ಪದಗಳು ಈ ತೆರಿಗೆ ಎಷ್ಟು ಅನಗತ್ಯ ಎಂಬುದನ್ನು ಬಹಿರಂಗಪಡಿಸುತ್ತವೆ" ಎಂದು ಖೇರಾ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾದಾಗಿನಿಂದ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ನಷ್ಟವನ್ನು ಅನುಭವಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
"ಸರ್ಕಾರವು ಈಗ ಆ ಹೊರೆಯ ಒಂದು ಸಣ್ಣ ಭಾಗವನ್ನು ಮಾತ್ರ ಕಮ್ಮಿ ಮಾಡಲು ಒಪ್ಪಿಕೊಂಡಿದೆ. ಅಂದರೆ 'ವಿಶೇಷ ಹೆಚ್ಚುವರಿ' ಲೆವಿಯನ್ನು ಮಾತ್ರ ಕಡಿಮೆ ಮಾಡಿದೆ - ಅದು ಕೂಡ ಸುಮಾರು ಒಂದು ತಿಂಗಳ ನಂತರ" ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



