Iran-Israel War: ಗಲ್ಫ್ ವಾಯುಪ್ರದೇಶ ಸಂಚಾರ ತಪ್ಪಿಸಿ; ವಿಮಾನಯಾನ ಸಂಸ್ಥೆಗಳಿಗೆ DGCA ಎಚ್ಚರಿಕೆ
ಬಹ್ರೇನ್, ಇರಾನ್, ಇರಾಕ್, ಇಸ್ರೇಲ್, ಜೋರ್ಡಾನ್, ಕುವೈತ್, ಲೆಬನಾನ್, ಕತಾರ್, ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ವಾಯುಪ್ರದೇಶಗಳಲ್ಲಿ ಹಾರಾಟ ನಡೆಸದಂತೆ ಹೇಳಿದೆ.

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಇರಾನ್‑ಇಸ್ರೇಲ್ ಯುದ್ಧ ಹಿನ್ನೆಲೆ ಗಲ್ಫ್ ವಾಯುಪ್ರದೇಶಗಳಲ್ಲಿನ ಸಂಚಾರ ತಪ್ಪಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ಭಾರತದ ವಿಮಾನಯಾನ ನಿಯಂತ್ರಣ ಪ್ರಾಧಿಕಾರ (DGCA) ಸೂಚನೆ ನೀಡಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) 9 ವಾಯುಪ್ರದೇಶಗಳಲ್ಲಿ ಹಾರಾಟ ನಡೆಸದಂತೆ ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಸಲಹೆ ಕೊಟ್ಟಿದೆ.
ಬಹ್ರೇನ್, ಇರಾನ್, ಇರಾಕ್, ಇಸ್ರೇಲ್, ಜೋರ್ಡಾನ್, ಕುವೈತ್, ಲೆಬನಾನ್, ಕತಾರ್, ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ವಾಯುಪ್ರದೇಶಗಳಲ್ಲಿ ಹಾರಾಟ ನಡೆಸದಂತೆ ಹೇಳಿದೆ.
ಭಾರತೀಯ ವಿಮಾನಯಾನ ಸಂಸ್ಥೆಗಳು, ಕೆಲವು ಷರತ್ತುಗಳನ್ನು ಪಾಲಿಸಿ, ಒಮನ್ ಹಾಗೂ ಸೌದಿ ಅರೇಬಿಯಾ ವಾಯುಪ್ರದೇಶಗಳ ಮೇಲೆ ಹಾರಾಟ ನಡೆಸಬಹುದು ಎಂದು ತಿಳಿಸಿದೆ.
ಅಂದರೆ ವಿಮಾನ ಹಾರಾಟ ನಡೆಸುವಾಗ FL 300 ಅಥವಾ 32 ಸಾವಿರ ಅಡಿಗಿಂತ ಕಡಿಮೆ ಎತ್ತರದಲ್ಲಿ ಕಾರ್ಯನಿರ್ವಹಿಸಬಾರದು ಎಂದು ಷರತ್ತು ವಿಧಿಸಲಾಗಿದೆ.
ಇರಾನ್ ಪ್ರದೇಶಗಳ ಮೇಲೆ ಇಸ್ರೇಲ್ ಹಾಗೂ ಅಮೇರಿಕ ನಡೆಸುತ್ತಿರುವ ದಾಳಿಗಳಿಂದಾಗಿ, ನಾಗರಿಕ ವಿಮಾನಯಾನಕ್ಕೆ ಅಪಾಯ ಉಂಟಾಗುತ್ತಿದೆ. ಹೀಗಾಗಿ ಡಿಜಿಸಿಎ ಈ ಎಚ್ಚರಿಕೆ ಕ್ರಮಗಳನ್ನು ಮಾರ್ಚ್ 28 ರವರೆಗೂ ಅನುಸರಿಸುವಂತೆ ತಿಳಿಸಿದೆ. ಇದೇ ವೇಳೆ ನಿರ್ವಾಹಕರು ತಮ್ಮ ವಿಮಾನ ಸಿಬ್ಬಂದಿಗೆ ಇತ್ತೀಚಿನ ನೊಟಮ್, ವಾಯುಪ್ರದೇಶದ ನಿರ್ಬಂಧಗಳ ಬಗ್ಗೆ ಮಾಹಿತಿಯನ್ನು ಒದಗಿಸುವಂತೆ ಸೂಚಿಸಿದೆ.
ಇರಾನ್ ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ದವು ಮೂರನೇ ವಾರವೂ ಮುಂದುವರೆದಿದ್ದು, ಯುದ್ದದ ಪರಿಣಾಮಗಳು ಮಧ್ಯಪ್ರಾಚ್ಯದಲ್ಲೂ ಉಂಟಾಗಿದೆ. ಇದರಿಂದ ಈ ಪ್ರದೇಶಗಳು ವಿಮಾನಯಾನ ಕಾರ್ಯಾಚರಣೆಗೆ ಹೆಚ್ಚಿನ ಅಪಾಯಕಾರಿಯಾಗಿದೆ.
ಗಲ್ಫ್ ರಾಷ್ಟ್ರಗಳ ಮೇಲೆ ಪ್ರತೀಕಾರದ ಕ್ರಮವಾಗಿ ಇರಾನ್ ದಾಳಿ ನಡೆಸಿದ್ದು, ಇದು ನಾಗರಿಕ ವಿಮಾನ ಕಾರ್ಯಾಚರಣೆಗಳಿಗೆ ಹೆಚ್ಚಿನ ಅಪಾಯ ಉಂಟು ಮಾಡಿದೆ.
ಇತ್ತೀಚಿಗೆ ಅತ್ಯಂತ ಜನನಿಬಿಡ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇಂದು ಡ್ರೋನ್ ದಾಳಿ ನಡೆಸಿತ್ತು. ಇದರಿಂದ ಬೆಂಕಿ ಹೊತ್ತಿಕೊಂಡಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನ ಸಂಚಾರವನ್ನು ಬಂದ್ ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



