ಮದುವೆ ರದ್ದಾದ ನಂತರ ತನ್ನ ರಕ್ತವನ್ನೇ ಯುವತಿಗೆ ಇಂಜೆಕ್ಟ್ ಮಾಡಿದ HIV ಸೋಂಕಿತ ಯುವಕನ ಬಂಧನ!
ಮಾರ್ಚ್ 11 ರಂದು ಈ ಘಟನೆ ನಡೆದಿದ್ದು, ಆರೋಪಿಯು, ಯುವತಿಯ ಮನೆಯಲ್ಲಿ ಬಲವಂತವಾಗಿ ಎಚ್ಐವಿ ಸೋಂಕಿತ ರಕ್ತವನ್ನು ಚುಚ್ಚಿದ್ದಾನೆ ಎಂದು ಆರೋಪಿಸಲಾಗಿದೆ.

ಹೈದರಾಬಾದ್: ತನ್ನನ್ನು ಮದುವೆಯಾಗಲು ನಿರಾಕರಿಸಿದ 22 ವರ್ಷದ ಯುವತಿಗೆ ತನ್ನ ರಕ್ತವನ್ನೇ ಇಂಜೆಕ್ಟ್ ಮಾಡಿದ ಆರೋಪದ ಮೇಲೆ 24 ವರ್ಷದ ಎಚ್ಐವಿ ಸೋಂಕಿತ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮಾರ್ಚ್ 11 ರಂದು ಈ ಘಟನೆ ನಡೆದಿದ್ದು, ಆರೋಪಿಯು, ಯುವತಿಯ ಮನೆಯಲ್ಲಿ ಬಲವಂತವಾಗಿ ಎಚ್ಐವಿ ಸೋಂಕಿತ ರಕ್ತವನ್ನು ಚುಚ್ಚಿದ್ದಾನೆ ಎಂದು ಆರೋಪಿಸಲಾಗಿದೆ.
ಪೊಲೀಸರ ಪ್ರಕಾರ, ಆರೋಪಿ ಮತ್ತು ಸಂತ್ರಸ್ತ ಯುವತಿ ಸಂಬಂಧಿಕರಾಗಿದ್ದು, ಆಕೆಯ ಪೋಷಕರು ಆರಂಭದಲ್ಲಿ ಆರೋಪಿಯೊಂದಿಗೆ ಮಗಳ ಮದುವೆ ಮಾಡಲು ಒಪ್ಪಿಕೊಂಡಿದ್ದರು. ಆದರೆ ಯುವಕನ ಪುರುಷನ ಪೋಷಕರು ಈಗಾಗಲೇ ಎಚ್ಐವಿ ಸೋಂಕಿತರಾಗಿದ್ದರಿಂದ, ವರನಿಗೂ ಎಚ್ಐವಿ ಪರೀಕ್ಷೆ ಮಾಡಿಸುವಂತೆ ಯುವತಿಯ ಪೋಷಕರು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕೇಳಿಕೊಂಡಿದ್ದರು.
"ತಪಾಸಣೆಯ ಸಮಯದಲ್ಲಿ ವರನಿಗೂ(ಮಗನಿಗೆ) ಎಚ್ಐವಿ ಪಾಸಿಟಿವ್ ಇರುವುದು ಕಂಡುಬಂದ ಕಾರಣ, ಯುವತಿಯ ತಂದೆ ತನ್ನ ಮಗಳ ಮದುವೆಯನ್ನು ರದ್ದುಗೊಳಿಸಿದ್ದರು" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ ಆರೋಪಿಯು ಆಕೆಗೂ ಎಚ್ಐವಿ ಅಂಟಿಸಿದರೆ ತನ್ನ ಮದುವೆಯಾಗುತ್ತಾಳೆ ಮತ್ತು ಶಾಶ್ವತವಾಗಿ ತನ್ನೊಂದಿಗೆ ಇರುತ್ತಾಳೆ ಎಂದು ಭಾವಿಸಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮಹಿಳೆಯ ತಂದೆಯ ದೂರಿನ ಆಧಾರದ ಮೇಲೆ, ಪೋಚಾರಂ ಐಟಿ ಕಾರಿಡಾರ್ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಕೊಲೆ ಯತ್ನದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



