ತೆಲಂಗಾಣದಲ್ಲಿ ದಾರುಣ ಘಟನೆ: ಕಬ್ಬಿಣದ ಸ್ಟ್ಯಾಂಡ್ ಹಿಡಿದು ಹೋಗುತ್ತಿದ್ದವರಿಗೆ ವಿದ್ಯುತ್ ಶಾಕ್; ಇಬ್ಬರು ಕಾರ್ಮಿಕರ ದುರ್ಮರಣ..! Video
ಮೂವರು ಕೂಲಿ ಕಾರ್ಮಿಕರು ಪೆಟ್ರೋಲ್ ಬಂಕ್ ಬಳಿ ಎತ್ತರದ ಕಬ್ಬಿಣದ ಸ್ಟ್ಯಾಂಡ್ ಅನ್ನು ಸಾಗಿಸುತ್ತಿದ್ದರು. ಈ ವೇೆ ಸ್ಟ್ಯಾಂಡ್ ಆಕಸ್ಮಿಕವಾಗಿ ಮೇಲಿದ್ದ 11 KV ಹೈ-ಟೆನ್ಷನ್ ವಿದ್ಯುತ್ ತಂತಿಗೆ ತಗುಲಿದೆ.

ತೆಲಂಗಾಣ: ಕಬ್ಬಿಣದ ಸ್ಟ್ಯಾಂಡ್ ಹಿಡಿದು ಬರುತ್ತಿದ್ದವರಿಗೆ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ದುರ್ಮರಣವನ್ನಪ್ಪಿರುವ ಘಟನೆಯೊಂದು ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ದಂಡೇಪಲ್ಲಿ ಮಂಡಲದ ಮೇದರಿಪೇಟೆ ಗ್ರಾಮದಲ್ಲಿ ನಡೆದಿದೆ.
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕಾರ್ಮಿಕರ ಸುರಕ್ಷತೆ ಕುರಿತು ಕಳವಳಗಳು ವ್ಯಕ್ತವಾಗುತ್ತಿವೆ.
ಮೂವರು ಕೂಲಿ ಕಾರ್ಮಿಕರು ಪೆಟ್ರೋಲ್ ಬಂಕ್ ಬಳಿ ಎತ್ತರದ ಕಬ್ಬಿಣದ ಸ್ಟ್ಯಾಂಡ್ ಅನ್ನು ಸಾಗಿಸುತ್ತಿದ್ದರು. ಈ ವೇೆ ಸ್ಟ್ಯಾಂಡ್ ಆಕಸ್ಮಿಕವಾಗಿ ಮೇಲಿದ್ದ 11 KV ಹೈ-ಟೆನ್ಷನ್ ವಿದ್ಯುತ್ ತಂತಿಗೆ ತಗುಲಿದೆ. ಇದರಿಂದ ಕಬ್ಬಿಣದ ಸ್ಟ್ಯಾಂಡ್ ಮೂಲಕ ವಿದ್ಯುತ್ ಹರಿದಿದ್ದು, ಇಬ್ಬರೂ ಕಾರ್ಮಿಕರಿಗೆ ವಿದ್ಯುತ್ ಪ್ರವಹಿಸಿ, ತೀವ್ರವಾಗಿ ಸುಟ್ಟುಹೋಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅದೃಷ್ಟವಶಾತ್, ಅವರ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತರ ಪೈಕಿ ಒಬ್ಬರ ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.
ಈ ಘಟನೆ ಪ್ರತಿಯೊಬ್ಬರಿಯೂ ಎಚ್ಚರಿಕೆಯ ಪಾಠವಾಗಿದೆ. ಕೆಲಸದ ಸಮಯದಲ್ಲಿ ಸಣ್ಣ ಅಜಾಗರೂಕತೆಯೂ ಪ್ರಾಣಕ್ಕೆ ಕುತ್ತು ತರಬಹುದು. ಹೀಗಾಗಿ ಹೈಟೆನ್ಷನ್ ವಿದ್ಯುತ್ ತಂತಿಗಳ ಕೆಳಗೆ ಕಬ್ಬಿಣದ ಏಣಿ ಅಥವಾ ಉದ್ದವಾದ ಕಬ್ಬಿಣದ ವಸ್ತುಗಳನ್ನು ಬಳಸುವಾಗ ಅತ್ಯಂತ ಎಚ್ಚರದಿಂದಿರಿ, ಹೈಟೆನ್ಷನ್ ತಂತಿಗಳ ಸುತ್ತ ಕನಿಷ್ಠ 10 ರಿಂದ 15 ಅಡಿ ಅಂತರವಿರಲಿ. ತಂತಿಗಳನ್ನು ನೀವು ಮುಟ್ಟದಿದ್ದರೂ ವಿದ್ಯುತ್ "ಆರ್ಕ್" (Arcing) ಮೂಲಕ ನಿಮ್ಮನ್ನು ಸೆಳೆಯುವ ಅಪಾಯವಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



