ದೇಶ

ಸಂವಿಧಾನ, ಸದನದ ಗೌರವ ಉಳಿಸಲು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಿರ್ಣಯ: ಗೊಗೊಯ್; Video

ಇಂದು ಲೋಕಸಭೆಯಲ್ಲಿ ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಆರಂಭಿಸಿ ಮಾತನಾಡಿದ ಗೊಗೊಯ್, ಓಂ ಬಿರ್ಲಾ ಅವರು ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಂವಿಧಾನ, ಸದನದ ಗೌರವ ಉಳಿಸಲು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಿರ್ಣಯ: ಗೊಗೊಯ್; Video
ಗೌರವ್ ಗೊಗೊಯ್
Published On :

ನವದೆಹಲಿ: "ಸಂವಿಧಾನವನ್ನು ಉಳಿಸಲು ಮತ್ತು ಸದನದ ಗೌರವ ಕಾಪಾಡಲು" ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸುವಂತೆ ವಿರೋಧ ಪಕ್ಷಗಳು ನಿರ್ಣಯ ಮಂಡಿಸಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಗಳವಾರ ಹೇಳಿದ್ದಾರೆ.

ಇಂದು ಲೋಕಸಭೆಯಲ್ಲಿ ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಆರಂಭಿಸಿ ಮಾತನಾಡಿದ ಗೊಗೊಯ್, ಓಂ ಬಿರ್ಲಾ ಅವರು ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ ಫೆಬ್ರವರಿಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಮಯದಲ್ಲಿ ಪ್ರತಿಪಕ್ಷಗಳ ಸದಸ್ಯರಿಗೆ ಸಂಸತ್ತಿನ ಮಾತನಾಡಲು ಅವಕಾಶ ನೀಡಲಿಲ್ಲ. ಏಕೆಂದರೆ ದೇಶದ ನಾಯಕತ್ವವು "ದುರ್ಬಲ"ವಾಗಿದೆ ಎಂದರು.

ಸ್ಪೀಕರ್ ವಿರುದ್ಧ ನಿರ್ಣಯ ಮಂಡಿಸಲು ಹಲವು ಕಾರಣಗಳನ್ನು ನೀಡಿದ ಕಾಂಗ್ರೆಸ್ ಸಂಸದ, "ಫೆಬ್ರವರಿಯಲ್ಲಿ, ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಲೋಕಸಭೆ ಪ್ರತಿಪಕ್ಷ ನಾಯಕ ಮಾತನಾಡಲು ಬಯಸಿದಾಗ, ಸ್ಪೀಕರ್, ಅಧ್ಯಕ್ಷರ ಸಮಿತಿಯ ಸದಸ್ಯರು, ಖಜಾನೆ ಪೀಠಗಳ ಹಿರಿಯ ಸದಸ್ಯರು ಅವರಿಗೆ 20 ಬಾರಿ ಅಡ್ಡಿಪಡಿಸಿದರು ಎಂದು ಆರೋಪಿಸಿದರು.

"ಸ್ಪೀಕರ್, ರಾಹುಲ್ ಗಾಂಧಿ ಮಾತನಾಡಲು ಅವಕಾಶ ನೀಡಲಿಲ್ಲ. ಸದನ ಮತ್ತು ದೇಶದ ಜನರಿಗೆ ತಿಳಿದಿರಬೇಕಾದ ಕೆಲವು ನಿರ್ಣಾಯಕ ವಿಷಯಗಳನ್ನು ಕಡ್ಡಾಯವಾಗಿ ಮಂಡಿಸಲು ಪ್ರಯತ್ನಿಸುವಾಗ ಎಲ್‌ಒಪಿಗೆ ಪದೇ ಪದೇ ಅಡ್ಡಿಪಡಿಸಲಾಯಿತು" ಎಂದು ಗೊಗೊಯ್ ಹೇಳಿದರು.

ಮಾಜಿ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಅವರ ಬಿಡುಗಡೆಯಾಗದ ಪುಸ್ತಕದಲ್ಲಿ ಅವರ ಹೇಳಿಕೆ ಬಗ್ಗೆ ಮಾತನಾಡಲು ರಾಹುಲ್ ಗಾಂಧಿಯವರು ಬಯಸಿದ್ದರು. ಅದಕ್ಕೂ ಅವಕಾಶ ನೀಡಲಿಲ್ಲ ಎಂದರು.

ಈ ಹಂತದಲ್ಲಿ, ಸ್ಪೀಕರ್ ಸ್ಥಾನದಲ್ಲಿದ್ದ ಜಗದಾಂಬಿಕಾ ಪಾಲ್ ಅವರು, ಬಿರ್ಲಾ ವಿರುದ್ಧದ ನಿರ್ಣಯದ ಬಗ್ಗೆ ಮಾತ್ರ ಚರ್ಚಿಸುವಂತೆ ಗೊಗೊಯ್ ಅವರಿಗೆ ಸೂಚಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, ಇದು ಸ್ಪೀಕರ್ ಕುರಿತ ಚರ್ಚೆಯಾಗಿದ್ದು, ವಿರೋಧ ಪಕ್ಷಗಳು ಇತರ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರೆ, "ನಾವು ಉತ್ತರಿಸುತ್ತೇವೆ". ಆದರೆ ನೀವು ಅಡ್ಡಿಪಡಿಸಬಾರದು ಎಂದು ಹೇಳಿದರು.

ಇದಕ್ಕೆ ತಿರುಗೇಟು ನೀಡಿದ ಗೊಗೊಯ್, ಸಂಶೋಧನಾ ವರದಿಗಳ ಪ್ರಕಾರ ಸಂಸತ್ತಿನ ಕಲಾಪಗಳ ಪ್ರತಿಗಳನ್ನು ಪರಿಶೀಲಿಸಿದರೆ, ವಿರೋಧ ಪಕ್ಷದ ಸದಸ್ಯರಿಗೆ ಅತಿ ಹೆಚ್ಚು ಬಾರಿ ಅಡ್ಡಿಪಡಿಸಿರುವುದು ಕಿರಣ್ ರಿಜಿಜು ಅವರೇ ಎಂಬುದು ತಿಳಿಯುತ್ತದೆ ಎಂದರು.

ಇದಕ್ಕೆ ಗೃಹ ಸಚಿವ ಅಮಿತ್ ಶಾ ಅವರು ಚುಟುಕಾಗಿ ಪ್ರತಿಕ್ರಿಯಿಸುತ್ತಾ, “ರಿಜಿಜು ಅವರು ಅತಿ ಹೆಚ್ಚು ಬಾರಿ ಅಡ್ಡಿಪಡಿಸಿದ್ದಾರೆ ಎಂಬುದು ನಿಜ, ಆದರೆ ಪ್ರಸ್ತುತ ಇರುವಂತಹ ವಿರೋಧ ಪಕ್ಷ ಈ ಹಿಂದೆ ಎಂದೂ ಇರಲಿಲ್ಲ ಎಂದು ಲೇವಡಿ ಮಾಡಿದರು.

ಸತತ ಅಡೆತಡೆಗಳ ನಂತರ ತಮ್ಮ ಭಾಷಣವನ್ನು ಮುಂದುವರಿಸಿದ ಗೌರವ್ ಗೊಗೊಯ್, “ಕಳೆದ ಫೆಬ್ರವರಿಯಲ್ಲಿ ರಾಹುಲ್ ಗಾಂಧಿಯವರು ಅಮೆರಿಕದಲ್ಲಿ ಉದ್ಯಮಿಯೊಬ್ಬರ ವಿರುದ್ಧ ನಡೆಯುತ್ತಿರುವ ತನಿಖೆಯ ವಿಷಯವನ್ನು ಪ್ರಸ್ತಾಪಿಸಲು ಬಯಸಿದ್ದರು. ಈ ತನಿಖೆಯಲ್ಲಿ ಭಾರತದ ಸಚಿವರೊಬ್ಬರ ಹೆಸರನ್ನು ಸಹ ಉಲ್ಲೇಖಿಸಲಾಗಿದೆ, ಆದರೆ ಆ ವಿಷಯದ ಬಗ್ಗೆ ಮಾತನಾಡಲು ಅವರಿಗೆ ಅವಕಾಶ ನೀಡಲಿಲ್ಲ ಎಂದರು.

ರಾಹುಲ್ ಗಾಂಧಿಯವರು ಭಾರತದೊಂದಿಗೆ ಯುರೋಪಿಯನ್ ಯೂನಿಯನ್ ಮತ್ತು ಅಮೆರಿಕದ ನಡುವೆ ನಡೆಯುತ್ತಿರುವ ವ್ಯಾಪಾರ ಒಪ್ಪಂದಗಳ ಬಗ್ಗೆಯೂ ಮಾತನಾಡಲು ಬಯಸಿದ್ದರು ಎಂದು ಗೊಗೊಯ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.