ಅಯೋಧ್ಯೆಯಲ್ಲಿ 35 ಕೋಟಿ ರೂ ಗೆ 2.67 ಎಕರೆ ಜಮೀನು ಖರೀದಿಸಿದ ಬಿಗ್ ಬಿ! ಯಾಕೆ ಗೊತ್ತಾ?
HoABLನ 75-ಎಕರೆ ಲಕ್ಸುರಿ ಭೂ ಅಭಿವೃದ್ಧಿ ಪ್ರದೇಶವಾದ 'ದಿ ಸರಯು' ಬಳಿ ಈ ಜಮೀನು ಇದೆ. ಈ ಹಿಂದೆ ಜನವರಿ 2024 ರಲ್ಲಿ ಬಚ್ಚನ್ ಅವರು HoABL ಪ್ರಾಜೆಕ್ಟ್ ನ 'ದಿ ಸರಯು' ನಲ್ಲಿ ಭೂಮಿಯನ್ನು ಖರೀದಿಸಿದ್ದರು.

ಅಯೋಧ್ಯೆ: ಭಾರತೀಯ ಚಿತ್ರರಂಗದ ದಂತಕಥೆ, ಬಿಗ್ ಬಿ ಅಮಿತಾಬ್ ಬಚ್ಚನ್ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭೂಮಿ ಖರೀದಿಸಿದ್ದಾರೆ.
ಹೌದು. ರಿಯಲ್ ಎಸ್ಟೇಟ್ ಸಂಸ್ಥೆ ಹೌಸ್ ಆಫ್ ಅಭಿನಂದನ್ ಲೋಧಾ (HoABL) ದಿಂದ 35 ಕೋಟಿ ರೂ.ಗೆ 2.67 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಎಬಿ ಕಾರ್ಪ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಯಾದವ್ ಅವರ ನೇತೃತ್ವದಲ್ಲಿ ಶುಕ್ರವಾರ ವ್ಯವಹಾರ ನಡೆದಿದೆ ಎಂದು ಎಂದು HoABL ಹೇಳಿಕೆಯಲ್ಲಿ ತಿಳಿಸಿದೆ.
HoABLನ 75-ಎಕರೆ ಲಕ್ಸುರಿ ಭೂ ಅಭಿವೃದ್ಧಿ ಪ್ರದೇಶವಾದ 'ದಿ ಸರಯು' ಬಳಿ ಈ ಜಮೀನು ಇದೆ. ಈ ಹಿಂದೆ ಜನವರಿ 2024 ರಲ್ಲಿ ಬಚ್ಚನ್ ಅವರು HoABL ಪ್ರಾಜೆಕ್ಟ್ ನ 'ದಿ ಸರಯು' ನಲ್ಲಿ ಭೂಮಿಯನ್ನು ಖರೀದಿಸಿದ್ದರು.
ಈಗ HoABL ಮೂಲಕ ಮತ್ತೆ ಎರಡು ಎಕರೆ ಜಮೀನು ಖರೀಸಿದ್ದಾರೆ. ಇದು ಅಯೋಧ್ಯೆಯಲ್ಲಿ ಬಚ್ಚನ್ ಅವರ ಮೂರನೇ ಹಾಗೂ ಒಟ್ಟಾರೇ ನಾಲ್ಕನೇ ಹೂಡಿಕೆಯಾಗಿದೆ.
ಅಮಿತ್ ಬಚ್ಚನ್ ಅವರು, 10,000 ಚದರ ಅಡಿ ಪ್ಲಾಟ್ ಸ್ವಾಧೀನದ ಮೂಲಕ HoABL ನ 'ಸೋಲ್ ಡಿ ಅಲಿಬಾಗ್' ಯೋಜನೆಯಲ್ಲಿಯೂ ಹೂಡಿಕೆ ಮಾಡಿದ್ದರು. ಪೀಳಿಗೆಯ ಆಸ್ತಿಯಾಗಿ ಬಚ್ಚನ್ ಹೂಡಿಕೆ ಮಾಡಿದ್ದು, ಈ ಭೂಮಿಗೆ ಮುಂಬರುವ ವರ್ಷಗಳಲ್ಲಿ ಉತ್ತಮ ಬೆಲೆ ಬರಲಿದೆ.

KBC17: ಅಮಿತಾಬ್ ಬಚ್ಚನ್ ಜೊತೆ ಬಾಲಕನ ಉದ್ಧಟತನ: ಬಿಗ್ ಬಿ ನಡೆಗೆ ಪ್ರಶಂಸೆ; ತಂದೆ-ತಾಯಿ ಜವಾಬ್ದಾರಿ ಏನು? Video!
ಅಯೋಧ್ಯೆ ಮೇಲೆ ತಲೆ ತಲೆಮಾರುಗಳಿಂದ ನಂಬಿಕೆ ಇರುವುದಾಗಿ HoABLನ ಅಧ್ಯಕ್ಷ ಅಭಿನಂದನ್ ಲೋಧಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


