JCB ಘರ್ಜನೆ: ರಾಮೇಶ್ವರಂ ಕೆಫೆ ಅತಿಕ್ರಮಣ ಸೇರಿದಂತೆ ಅಕ್ರಮ ನಿರ್ಮಾಣಗಳ ತೆರವು!
ಪುಣೆಯ ಲೋಹೆಗಾಂವ್, ನಗರ ರಸ್ತೆ ಪ್ರದೇಶಗಳಲ್ಲಿ 78,000 ಚದರ ಅಡಿ ವಿಸ್ತೀರ್ಣದ ಕನಿಷ್ಠ 18 ಅಕ್ರಮ ನಿರ್ಮಾಣಗಳನ್ನು ಅಕ್ರಮ ನಿರ್ಮಾಣಗಳನ್ನು ಪಿಎಂಸಿ ನೆಲಸಮ ಮಾಡಿದೆ.

ಪುಣೆ: ಪುಣೆಯ ವಿಮಾನ್ ನಗರದಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ಅತಿಕ್ರಮಣ ತೆರವು ಕಾರ್ಯಾಚರಣೆ ನಡೆದಿದ್ದು, ರಾಮೇಶ್ವರಂ ಕೆಫೆ ಸೇರಿದಂತೆ ಹಲವು ವಾಣಿಜ್ಯ ಸಂಸ್ಥೆಗಳು ಫುಟ್‌ಪಾತ್ ಮೇಲೆ ನಿರ್ಮಿಸಿದ್ದ ಅನಧಿಕೃತ ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು.
ಪುಣೆಯ ಲೋಹೆಗಾಂವ್, ನಗರ ರಸ್ತೆ ಪ್ರದೇಶಗಳಲ್ಲಿ 78,000 ಚದರ ಅಡಿ ವಿಸ್ತೀರ್ಣದ ಕನಿಷ್ಠ 18 ಅಕ್ರಮ ನಿರ್ಮಾಣಗಳನ್ನು ಅಕ್ರಮ ನಿರ್ಮಾಣಗಳನ್ನು ಪಿಎಂಸಿ ನೆಲಸಮ ಮಾಡಿದೆ. ಈ ನೆಲಸಮಗೊಂಡ ರಚನೆಗಳಲ್ಲಿ ಕಾಂಕ್ರೀಟ್ ರಚನೆಗಳು ಮತ್ತು ಟಿನ್ ಶೆಡ್‌ಗಳು ಸೇರಿವೆ.
ನೆಕೊ ಗಾರ್ಡನ್, ಸಾಂಬಾರ್ ಹೋಟೆಲ್ ಲೇನ್, ಕೃಷ್ಣ ಹೋಟೆಲ್ ಚೌಕ್ ಮತ್ತು ಗಣಪತಿ ಮಂದಿರ ಚೌಕ್ ಬಳಿಯೂ ಕಾರ್ಯಾಚರಣೆ ನಡೆಸಲಾಯಿತು. ಅನಧಿಕೃತ ಭಾಗಗಳನ್ನು ಕೆಡವಲು ಭಾರೀ ಯಂತ್ರೋಪಕರಣಗಳನ್ನು ನಿಯೋಜಿಸಲಾಗಿದ್ದು, ಕಾರ್ಯಾಚರಣೆಯ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸ್ ಸಿಬ್ಬಂದಿ ಹಾಜರಿದ್ದರು.
ಪುಣೆ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ಅಧಿಕಾರಿಗಳು ನೀಡಿದ ಹೇಳಿಕೆಯ ಪ್ರಕಾರ, ವಿಮಾನನಗರದಲ್ಲಿರುವ ಜನಪ್ರಿಯ ರಾಮೇಶ್ವರಂ ಕೆಫೆ ವಿರುದ್ಧವೂ ತೆರವು ಕ್ರಮ ಕೈಗೊಳ್ಳಲಾಗಿದೆ. ರಾಮೇಶ್ವರಂ ಕೆಫೆ ತನ್ನ ಹೋಟೆಲ್ ಮುಂಭಾಗದ ಪುಟ್‌ಪಾತ್‌ನಲ್ಲಿ ಮಾಡಿದ ಒತ್ತವರಿಯನ್ನು ಪಾಲಿಕೆ ಜೆಸಿಬಿ ಬಳಸಿ ತೆಗೆದುಹಾಕಿದೆ.
ಈ ಪ್ರದೇಶಗಳಲ್ಲಿನ ವಿವಿಧ ಆಸ್ತಿಗಳಲ್ಲಿನ ಅಕ್ರಮ ನಿರ್ಮಾಣಗಳ ವಿರುದ್ಧ ನೆಲಸಮ ಕಾರ್ಯಾಚರಣೆಯನ್ನು ಮಹಾರಾಷ್ಟ್ರ ಪ್ರಾದೇಶಿಕ ಮತ್ತು ಪಟ್ಟಣ ಯೋಜನೆ (MRTP) ಕಾಯ್ದೆ, 1966 ರ ಜೊತೆಯಲ್ಲಿ ಕಾರ್ಯನಿರ್ವಹಿಸುವ ಏಕೀಕೃತ ಅಭಿವೃದ್ಧಿ ನಿಯಂತ್ರಣ ಮತ್ತು ಪ್ರಚಾರ ನಿಯಮಗಳ (UDCPR) ನಿಬಂಧನೆಗಳಿಗೆ ಅನುಸಾರವಾಗಿ ನಡೆಸಲಾಗಿದೆ ಎಂದು PMC ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾನ್ಯವಾಗಿ, ಕಟ್ಟಡ ಅನುಮತಿ ನಿಯಮಗಳ ಉಲ್ಲಂಘನೆ ಸಂಭವಿಸಿದಾಗ, ಅಧಿಕಾರಿಗಳು MRTP ಕಾಯ್ದೆಯ ಸೆಕ್ಷನ್ 53 ರ ಅಡಿಯಲ್ಲಿ ನೋಟಿಸ್ ನೀಡುತ್ತಾರೆ. ನಿರ್ದಿಷ್ಟ ಅವಧಿಯೊಳಗೆ ಅನಧಿಕೃತ ನಿರ್ಮಾಣವನ್ನು ತೆಗೆದುಹಾಕಲು ಅಥವಾ ಕ್ರಮಬದ್ಧಗೊಳಿಸಲು ಮಾಲೀಕರಿಗೆ ನಿರ್ದೇಶಿಸುತ್ತಾರೆ.
ಈ ಸಂಬಂಧ ಕೆಲವು ಸಂಸ್ಥೆಗಳಿಗೆ MRTP ಕಾಯ್ದೆಯ ಸೆಕ್ಷನ್ 267 ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. "PMC ಈ ಆಸ್ತಿಗಳ ಮಾಲೀಕರಿಗೆ ನೋಟಿಸ್ ನೀಡಿತು. ಅಕ್ರಮ ನಿರ್ಮಾಣಗಳನ್ನು ನೆಲಸಮ ಮಾಡಲು ಅವರನ್ನು ಕೇಳಲಾಯಿತು. ಆದರೆ ಅವರು ನೋಟಿಸ್ ಗೆ ಉತ್ತರಿಸಿದ ಕಾರಣ ತೆರವು ಕ್ರಮ ಕೈಗೊಳ್ಳಲಾಗಿದೆ.
ಅಂತೆಯೇ ನಾಗರಿಕ ಸಂಸ್ಥೆಯು ಈ ಕಾರ್ಯಾಚರಣೆಯನ್ನು ಮುಂದುವರಿಸುತ್ತದೆ ಎಂದು PMC ಯ ಅತಿಕ್ರಮಣ ವಿರೋಧಿ ವಿಭಾಗದ ಮುಖ್ಯಸ್ಥ ಸೋಮನಾಥ್ ಬಂಕರ್ ಹೇಳಿದರು. ಈ ಆಸ್ತಿಗಳ ಪಕ್ಕ ಮತ್ತು ಮುಂಭಾಗದ ಅಂಚಿನಲ್ಲಿರುವ ರಚನೆಗಳ ವಿರುದ್ಧ ಪಿಎಂಸಿ ಕ್ರಮ ಕೈಗೊಂಡಿದೆ ಎಂದು ನಾಗರಿಕ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



