2025 ಆರ್ಥಿಕ ವರ್ಷದಲ್ಲಿ ಬರೋಬ್ಬರಿ 6,769 ಕೋಟಿ ರೂ ಆದಾಯ ತೋರಿಸಿದ ಬಿಜೆಪಿ! ಕಾಂಗ್ರೆಸ್ ಎಷ್ಟು?
ಬಿಜೆಪಿ ತನ್ನ ಆದಾಯದ ಸುಮಾರು ಶೇ. 55.76 ರಷ್ಟನ್ನು ಅಂದರೆ 3774.58 ಕೋಟಿ ರೂ. ವೆಚ್ಚ ಮಾಡಿದ್ದರೆ, ಕಾಂಗ್ರೆಸ್ ತನ್ನ ಒಟ್ಟು ಆದಾಯಕ್ಕಿಂತ ಶೇ. 21.09 ರಷ್ಟು ಅಂದರೆ 1111.94 ಕೋಟಿ ರೂ. ವೆಚ್ಚ ಮಾಡಿದೆ.

ನವದೆಹಲಿ: 2024-25ರ ಆರ್ಥಿಕ ವರ್ಷದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ 6769.14 ಕೋಟಿ ರೂ. ಆದಾಯವನ್ನು ಘೋಷಿಸಿದೆ. ಇದು ರಾಷ್ಟ್ರೀಯ ಪಕ್ಷಗಳಲ್ಲಿ ಅತ್ಯಧಿಕವಾಗಿದೆ. ಆದರೆ ಪ್ರತಿಪಕ್ಷ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದ್ದು, ಸುಮಾರು 918.28 ಕೋಟಿ ರೂ. ಆದಾಯವನ್ನು ಘೋಷಿಸಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ತಿಳಿಸಿದೆ.
ಚುನಾವಣಾ ಆಯೋಗಕ್ಕೆ ರಾಜಕೀಯ ಪಕ್ಷಗಳು ನೀಡಿದ ಮಾಹಿತಿಯ ವಿಶ್ಲೇಷಣೆ ಪ್ರಕಾರ, ಆರು ರಾಷ್ಟ್ರೀಯ ಪಕ್ಷಗಳು (ಬಿಜೆಪಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್‌ಸ್ಟ್, ಆಮ್ ಆದ್ಮಿ ಪಾರ್ಟಿ, ಬಹುಜನ ಸಮಾಜ ಪಕ್ಷ ಮತ್ತು ಎನ್‌ಪಿಇಪಿ) 2024-25ರಲ್ಲಿ ಒಟ್ಟು 7960.09 ಕೋಟಿ ರೂ. ಆದಾಯವನ್ನು ಘೋಷಿಸಿವೆ. ಇದರಲ್ಲಿ ಬಿಜೆಪಿಯದು ಶೇ. 85 ರಷ್ಟಿದೆ.
ಬಿಜೆಪಿ ತನ್ನ ಆದಾಯದ ಸುಮಾರು ಶೇ. 55.76 ರಷ್ಟನ್ನು ಅಂದರೆ 3774.58 ಕೋಟಿ ರೂ. ವೆಚ್ಚ ಮಾಡಿದ್ದರೆ, ಕಾಂಗ್ರೆಸ್ ತನ್ನ ಒಟ್ಟು ಆದಾಯಕ್ಕಿಂತ ಶೇ. 21.09 ರಷ್ಟು ಅಂದರೆ 1111.94 ಕೋಟಿ ರೂ. ವೆಚ್ಚ ಮಾಡಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ವರ್ಷದಲ್ಲಿ ಒಟ್ಟು 172.60 ಕೋಟಿ ರೂ. ಆದಾಯವನ್ನು ವರದಿ ಮಾಡಿದೆ, ಆದರೆ ಅದರ ಒಟ್ಟು ವೆಚ್ಚ ರೂ 173.86 ಕೋಟಿ ಆಗಿದ್ದು, ಆದಾಯಕ್ಕಿಂತ ಕಡಿಮೆಯಾಗಿದೆ.
ಇನ್ನೂ ಬಿಎಸ್‌ಪಿಯ ಒಟ್ಟು ಆದಾಯ 58.58 ಕೋಟಿ ರೂ.ಗಳಾಗಿದ್ದರೆ, ವರ್ಷದ ವೆಚ್ಚ 106.30 ಕೋಟಿ ರೂ. ಆಗಿದೆ. ವರ್ಷದ ಪಕ್ಷದ ವೆಚ್ಚವು ಅದರ ಒಟ್ಟು ಆದಾಯಕ್ಕಿಂತ 47.71 ಕೋಟಿ ರೂ. ಹೆಚ್ಚಿದೆ. ಎಎಪಿ ಒಟ್ಟು ಆದಾಯ ರೂ 39.28 ಕೋಟಿ ಮತ್ತು ಒಟ್ಟು ವೆಚ್ಚ 36. 46 ಕೋಟಿ ಅಂದರೆ ಪಕ್ಷ ತನ್ನ ಒಟ್ಟು ಆದಾಯದ ಶೇ. 92.83 ರಷ್ಟು ವೆಚ್ಚ ಮಾಡಿದೆ.
ನ್ಯಾಷನಲ್ ಪೀಪಲ್ಸ್ ಪಾರ್ಟಿ (NPEP) ಒಟ್ಟು ಆದಾಯ 2.18 ಕೋಟಿ ರೂ. ಆಗಿದ್ದು, ಒಟ್ಟು 1.19 ಕೋಟಿ ರೂ. ವೆಚ್ಚ ಎಂದು ತೋರಿಸಿದೆ. ಆರು ರಾಷ್ಟ್ರೀಯ ಪಕ್ಷಗಳು ಒಟ್ಟು 7960.09 ಕೋಟಿ ರೂ.ಗಳ ಆದಾಯವನ್ನು ಘೋಷಿಸಿವೆ.
ಕಾಂಗ್ರೆಸ್ ಚುನಾವಣಾ ವೆಚ್ಚಕ್ಕಾಗಿ 896.22 ಕೋಟಿ ರೂ. ಖರ್ಚು ಮಾಡಿದೆ. ನಂತರ ಆಡಳಿತಾತ್ಮಕ ಮತ್ತು ಸಾಮಾನ್ಯ ವೆಚ್ಚಗಳಿಗೆ ಸುಮಾರು 159.68 ಕೋಟಿ ರೂ. ಖರ್ಚು ಮಾಡಿರುವುದಾಗಿ ಬಹಿರಂಗಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



