ಮತ್ತೊಂದು ದುರಂತ: ಗೋವಾದ ಬಾಗಾ ಬೀಚ್‌ನಲ್ಲಿ ಅಲೆಗಳ ಅಬ್ಬರಕ್ಕೆ ಕೊಚ್ಚಿಹೋಗಿ ಕರ್ನಾಟಕ ಪ್ರವಾಸಿಗ ಸಾವು, Video
ಸಮುದ್ರದಲ್ಲಿ ತೀವ್ರ ಅಲೆಗಳು ಮತ್ತು ಬಲವಾದ ಪ್ರವಾಹವಿದ್ದ ಕಾರಣ ತಕ್ಷಣದ ರಕ್ಷಣಾ ಕಾರ್ಯಾಚರಣೆ ನಡೆಸುವುದು ಕಷ್ಟಕರವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪಣಜಿ: ಗೋವಾದ ಜನಪ್ರಿಯ ಬಾಗಾ ಬೀಚ್‌ನಲ್ಲಿ ಬಂಡೆಯ ಮೇಲೆ ಕುಳಿತಿದ್ದ ವೇಳೆ ಸಮುದ್ರದ ಪ್ರಬಲ ಅಲೆಗಳಿಗೆ ಕೊಚ್ಚಿಹೋಗಿ ಕರ್ನಾಟಕದ ಪ್ರವಾಸಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ವಿಜಯಪುರ ಜಿಲ್ಲೆಯ ನಿವಾಸಿ ಸಾಹಸ್ ಅಶ್ಪಾಕ್ ಮಸಾಲಿ ಎಂದು ಗುರುತಿಸಲಾಗಿದ್ದು, ಸಾಹಸ್ ಅವರು ಕರಾವಳಿಯ ಬಂಡೆಗಳ ಮೇಲೆ ಕುಳಿತಿದ್ದಾಗ ಪ್ರಕ್ಷುಬ್ಧ ಸಮುದ್ರ ಪರಿಸ್ಥಿತಿಯಿಂದ ಉಂಟಾದ ಬಲವಾದ ಅಲೆಗಳು ಏಕಾಏಕಿ ಅಪ್ಪಳಿಸಿ ಅವರನ್ನು ಸಮುದ್ರದ ನೀರಿಗೆ ಎಳೆದುಕೊಂಡು ಹೋಗಿವೆ ಎನ್ನಲಾಗಿದೆ.
ಸಮುದ್ರದಲ್ಲಿ ತೀವ್ರ ಅಲೆಗಳು ಮತ್ತು ಬಲವಾದ ಪ್ರವಾಹವಿದ್ದ ಕಾರಣ ತಕ್ಷಣದ ರಕ್ಷಣಾ ಕಾರ್ಯಾಚರಣೆ ನಡೆಸುವುದು ಕಷ್ಟಕರವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯ ತಕ್ಷಣವೇ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಹಲವು ಗಂಟೆಗಳ ಹುಡುಕಾಟದ ಬಳಿಕ ರಕ್ಷಣಾ ತಂಡಗಳು ಅವರ ಮೃತದೇಹವನ್ನು ಕರಾವಳಿ ಪ್ರದೇಶದಲ್ಲಿ ಪತ್ತೆಹಚ್ಚಿ ಹೊರತೆಗೆದವು.
ವಿಡಿಯೋ ವೈರಲ್
ಘಟನೆಗೆ ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಮುಂಗಾರು ಅವಧಿಯಲ್ಲಿ ಪ್ರಕ್ಷುಬ್ಧ ಸಮುದ್ರದಿಂದ ಉಂಟಾಗುವ ಅಪಾಯಗಳ ಬಗ್ಗೆ ಮತ್ತೊಮ್ಮೆ ಗಮನ ಸೆಳೆದಿದೆ.
ಸಮುದ್ರ ಬಂಡೆಗಳಿಂದ ದೂರವಿರಿ
ಇದೇ ವೇಳೆ ಪ್ರವಾಸಿಗರು ಬಂಡೆಗಳಿರುವ ಕರಾವಳಿ ಪ್ರದೇಶಗಳಿಂದ ದೂರವಿರಬೇಕು ಹಾಗೂ ಹೆಚ್ಚಿನ ಉಬ್ಬರ (ಹೈ ಟೈಡ್) ಮತ್ತು ಪ್ರತಿಕೂಲ ಹವಾಮಾನದ ಸಂದರ್ಭಗಳಲ್ಲಿ ಸಮುದ್ರಕ್ಕೆ ಇಳಿಯಬಾರದು ಎಂದು ಅಧಿಕಾರಿಗಳು ಪದೇ ಪದೇ ಎಚ್ಚರಿಕೆ ನೀಡುತ್ತಿದ್ದಾರೆ.
ಯಾವುದೇ ಮುನ್ಸೂಚನೆ ಇಲ್ಲದೆ ಪ್ರಬಲ ಅಲೆಗಳು ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಕರಾವಳಿಯ ಬಂಡೆಗಳು ಅತ್ಯಂತ ಅಪಾಯಕಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಗಾರು ಅವಧಿಯಲ್ಲಿ ಸಮುದ್ರದ ಪ್ರಬಲ ಪ್ರವಾಹ ಮತ್ತು ಪ್ರಕ್ಷುಬ್ಧ ಪರಿಸ್ಥಿತಿಗಳಿಂದ ಅಪಘಾತಗಳ ಅಪಾಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಈ ಘಟನೆ ಮತ್ತೊಮ್ಮೆ ಕಡಲತೀರಗಳಲ್ಲಿ ಪ್ರವಾಸಿಗರ ಸುರಕ್ಷತೆಯ ಕುರಿತು ಆತಂಕ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



