ಟೆಲಿಗ್ರಾಮ್ ಮೇಲಿನ ನಿರ್ಬಂಧ ತೆರವು; ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆ್ಯಪ್ ಮತ್ತೆ ಲಭ್ಯ
ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆ NEET-UG 2026 ಪ್ರಶ್ನೆಪತ್ರಿಕೆ ಲೀಕ್ ತಡೆಯಲು ವಿಫಲವಾಗಿದ್ದ ಮೋದಿ ಸರ್ಕಾರ, ಮೆಸೇಜಿಂಗ್ ಆ್ಯಪ್ ‘ಟೆಲಿಗ್ರಾಮ್’ ಅನ್ನು ಜೂನ್ 22 ರವರೆಗೆ ತಾತ್ಕಾಲಿಕವಾಗಿ ನಿಷೇಧಿಸಿತ್ತು.

ನವದೆಹಲಿ: ಜೂನ್ 22ರ ಮಧ್ಯರಾತ್ರಿ ಸರ್ಕಾರ ಟೆಲಿಗ್ರಾಂ ಆ್ಯಪ್ ಮೇಲೆ ವಿಧಿಸಿದ್ದ ತಾತ್ಕಾಲಿಕ ನಿಷೇಧ ಮುಗಿದ ನಂತರ ಮಂಗಳವಾರ ಬೆಳಿಗ್ಗೆ ಗೂಗಲ್ ಟೆಲಿಗ್ರಾಮ್ ಅನ್ನು ಮರುಸ್ಥಾಪಿಸಿದೆ.
ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಈಗಾಗಲೇ ಕೆಲವು ಅಸ್ತಿತ್ವದಲ್ಲಿರುವ ಬಳಕೆದಾರರು ಬಳಸಬಹುದಾಗಿತ್ತಾದರೂ, ಹೊಸ ಬಳಕೆದಾರರು ಆಪಲ್‌ನ ಆಪ್ ಸ್ಟೋರ್‌ನಿಂದ ಬೆಳಿಗ್ಗೆ 10 ಗಂಟೆಯವರೆಗೆ ಅದನ್ನು ಹುಡುಕಲು ಅಥವಾ ಡೌನ್‌ಲೋಡ್ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ, ಅದನ್ನು ತಾತ್ಕಾಲಿಕವಾಗಿ ತೆಗೆದುಹಾಕಲಾಗಿತ್ತು.
ಈ ವಿಷಯದಲ್ಲಿ ಸುದ್ದಿಸಂಸ್ಥೆ ಪಿಟಿಐ ಆ್ಯಪಲ್‌ಗೆ ಕಳುಹಿಸಿದ ಇಮೇಲ್ ಪ್ರಶ್ನೆಗೆ ತಕ್ಷಣದ ಪ್ರತಿಕ್ರಿಯೆ ಸಿಕ್ಕಿಲ್ಲ.
ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆ NEET-UG 2026 ಪ್ರಶ್ನೆಪತ್ರಿಕೆ ಲೀಕ್ ತಡೆಯಲು ವಿಫಲವಾಗಿದ್ದ ಮೋದಿ ಸರ್ಕಾರ, ಮೆಸೇಜಿಂಗ್ ಆ್ಯಪ್ ‘ಟೆಲಿಗ್ರಾಮ್’ ಅನ್ನು ಜೂನ್ 22 ರವರೆಗೆ ತಾತ್ಕಾಲಿಕವಾಗಿ ನಿಷೇಧಿಸಿತ್ತು.
ಈ ನಿಷೇಧ ಹೇರುವ ಮುನ್ನ, ಸರ್ಕಾರಿ ಅಧಿಕಾರಿಗಳು ಜೂನ್ 3 ರಂದು ಟೆಲಿಗ್ರಾಂ ಪ್ರತಿನಿಧಿಗಳನ್ನು ಭೇಟಿಯಾದರು. ನಂತರ, ಜೂನ್ 22ರವರೆಗೆ ವೆಬ್ ಆವೃತ್ತಿ ಸೇರಿದಂತೆ ಅಪ್ಲಿಕೇಶನ್ ಮತ್ತು ಅದರ ಸಂಬಂಧಿತ ವೆಬ್ ಲಿಂಕ್‌ಗಳನ್ನು ನಿರ್ಬಂಧಿಸಲು ಕೇಂದ್ರ ನಿರ್ಧರಿಸಿತು.
ತನ್ನ ಸಂದೇಶ ಎಡಿಟ್ ವೈಶಿಷ್ಟ್ಯವನ್ನು ಸಹ ಜೂನ್ 30 ರವರೆಗೆ ನಿರ್ಬಂಧಿಸಲು ಟೆಲಿಗ್ರಾಮ್‌ಗೆ ನಿರ್ದೇಶಿಸಲಾಗಿದೆ.
ಜೂನ್ 21 ರಂದು NEET ಮರು ಪರೀಕ್ಷೆಯನ್ನು ನಡೆಸಲಾಗಿದ್ದು, ಇಲ್ಲಿಯವರೆಗೆ ಯಾವುದೇ ವಂಚನೆಯಾಗಿರುವ ಕುರಿತು ವರದಿಯಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



