ಭಾರತದಲ್ಲಿ Telegram ನಿಷೇಧಿಸಲು ರಿಲಯನ್ಸ್, ವಾಟ್ಸಾಪ್ ಲಾಬಿ: ಟೆಲಿಗ್ರಾಮ್ ಸಿಇಒ ಗಂಭೀರ ಆರೋಪ
ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆ NEET-UG 2026 ಪ್ರಶ್ನೆಪತ್ರಿಕೆ ಲೀಕ್ ತಡೆಯಲು ವಿಫಲವಾಗಿದ್ದ ಮೋದಿ ಸರ್ಕಾರ, ಮೆಸೇಜಿಂಗ್ ಆ್ಯಪ್ ‘ಟೆಲಿಗ್ರಾಮ್’ ಅನ್ನು ಜೂನ್ 22 ರವರೆಗೆ ತಾತ್ಕಾಲಿಕವಾಗಿ ನಿಷೇಧಿಸಿದೆ.

ಮೆಟಾದಲ್ಲಿ ಭಾಗಶಃ ಪಾಲನ್ನು ಹೊಂದಿರುವ ರಿಲಯನ್ಸ್ ಗ್ರೂಪ್ ಮತ್ತು ವಾಟ್ಸಾಪ್ ಭಾರತದಲ್ಲಿ ತಮ್ಮ ಟೆಲಿಗ್ರಾಮ್ ಅಪ್ಲಿಕೇಶನ್ ಮೇಲೆ ನಿಷೇಧ ಹೇರಲು ಲಾಬಿ ನಡೆಸಿದ್ದಾರೆ ಎಂದು ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆ NEET-UG 2026 ಪ್ರಶ್ನೆಪತ್ರಿಕೆ ಲೀಕ್ ತಡೆಯಲು ವಿಫಲವಾಗಿದ್ದ ಮೋದಿ ಸರ್ಕಾರ, ಮೆಸೇಜಿಂಗ್ ಆ್ಯಪ್ ‘ಟೆಲಿಗ್ರಾಮ್’ ಅನ್ನು ಜೂನ್ 22 ರವರೆಗೆ ತಾತ್ಕಾಲಿಕವಾಗಿ ನಿಷೇಧಿಸಿದೆ.
ಟೆಲಿಗ್ರಾಮ್ ನಿರ್ಬಂಧಕ್ಕೆ ಆಕ್ರೋಶಗೊಂಡಿರುವ ಟೆಲಿಗ್ರಾಮ್ ಸಿಇಒ, ಭಾರತದ ಹೊರಗಿನ(ಯುಎಇ ಸೇರಿದಂತೆ) ಲಕ್ಷಾಂತರ ಬಳಕೆದಾರರಿಗೆ ಟೆಲಿಗ್ರಾಮ್ ಪ್ರವೇಶವನ್ನು ರಿಲಯನ್ಸ್ ಹಾಳುಮಾಡುತ್ತಿದೆ ಎಂದು ದೂರಿದ್ದಾರೆ.
ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ಡುರೊವ್, BGP ಹೈಜಾಕಿಂಗ್ ಎಂಬ ತಂತ್ರದ ಮೂಲಕ ಟೆಲಿಗ್ರಾಮ್‌ನ ಸಂಪರ್ಕಕ್ಕೆ ಅಡ್ಡಿಪಡಿಸಲು ರಿಲಯನ್ಸ್ ಕಮ್ಯುನಿಕೇಷನ್ಸ್ ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
"ಭಾರತೀಯ ಟೆಲಿಕಾಂ ರಿಲಯನ್ಸ್, BGP ಹೈಜಾಕಿಂಗ್ ಎಂಬ ರಾಕ್ಷಸ ವಿಧಾನದ ಮೂಲಕ ಭಾರತದ ಹೊರಗಿನ(ಯುಎಇ ಸೇರಿದಂತೆ) ಲಕ್ಷಾಂತರ ಬಳಕೆದಾರರಿಗೆ ಟೆಲಿಗ್ರಾಮ್ ಪ್ರವೇಶವನ್ನು ಹಾಳು ಮಾಡುತ್ತಿದೆ ಎಂದಿದ್ದಾರೆ.
ರಿಲಯನ್ಸ್ ಹಲವು ವರದಿಗಳನ್ನು ನಿರ್ಲಕ್ಷಿಸಿರುವುದರಿಂದ ಈ ವಿಧ್ವಂಸಕ ಕೃತ್ಯ ಉದ್ದೇಶಪೂರ್ವಕವಾಗಿದೆ ಎಂದು ಡುರೊವ್ ಆರೋಪಿಸಿದ್ದಾರೆ.
ಇದು ಸ್ಪರ್ಧಾತ್ಮಕ ಯುದ್ಧದ ಭಾಗವಾಗಿರಬಹುದು. ಏಕೆಂದರೆ ರಿಲಯನ್ಸ್ ಭಾಗಶಃ ವಾಟ್ಸಾಪ್‌ನ ಹಿಂದಿನ ಕಂಪನಿಯಾದ ಮೆಟಾದ ಒಡೆತನದಲ್ಲಿದೆ" ಎಂದು ಡುರೊವ್ ಹೇಳಿದ್ದಾರೆ.
ಭಾರತದಲ್ಲಿ ಟೆಲಿಗ್ರಾಮ್ ವಿರುದ್ಧದ ಇತ್ತೀಚಿನ ಕ್ರಮಗಳ ಹಿಂದೆಯೂ ಇದೇ ಸಂಸ್ಥೆಗಳ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ.
"ಜಾಗತಿಕ ಇಂಟರ್ನೆಟ್ ರೂಟಿಂಗ್‌ನ ಇಂತಹ ದುರುಪಯೋಗ ಆತಂಕಕಾರಿಯಾಗಿದೆ. ಭಾರತದಲ್ಲಿ ಟೆಲಿಗ್ರಾಮ್ ಅನ್ನು ನಿಷೇಧಿಸುವ ಇತ್ತೀಚಿನ ಲಾಬಿ ಪ್ರಯತ್ನದ ಹಿಂದೆ ರಿಲಯನ್ಸ್/ವಾಟ್ಸಾಪ್ ಕೂಡ ಇದ್ದರೆ ನನಗೆ ಆಶ್ಚರ್ಯವಾಗುವುದಿಲ್ಲ" ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



