ದೇಶ

ಶಿವಸೇನೆ(ಯುಬಿಟಿ) ಗೆ ಭಾರಿ ಹೊಡೆತ! ಏಕನಾಥ್ ಶಿಂಧೆ ಬಣಕ್ಕೆ ಸಂಸದ ಓಂಪ್ರಕಾಶ್ ನಿಂಬಾಳ್ಕರ್ ಸೇರ್ಪಡೆ ನಿಶ್ಚಿತ!

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶಿವಸೇನೆ (ಯುಬಿಟಿ) ಸೋಲು ಮತ್ತು ವಿರೋಧ ಪಕ್ಷದಲ್ಲಿರುವುದರಿಂದ ಜನರಿಗೆ ಏನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.

ಶಿವಸೇನೆ(ಯುಬಿಟಿ) ಗೆ ಭಾರಿ ಹೊಡೆತ! ಏಕನಾಥ್ ಶಿಂಧೆ ಬಣಕ್ಕೆ ಸಂಸದ ಓಂಪ್ರಕಾಶ್ ನಿಂಬಾಳ್ಕರ್ ಸೇರ್ಪಡೆ ನಿಶ್ಚಿತ!
ಓಂಪ್ರಕಾಶ್ ನಿಂಬಾಳ್ಕರ್
Published On :

ಧಾರಶಿವ: ಶಿವಸೇನೆ (ಯುಬಿಟಿ)ಗೆ ಮತ್ತೊಂದು ಹೊಡೆತ ಬಿದ್ದಿದೆ. ಆರು ಭಿನ್ನಮತೀಯರಲ್ಲಿ ಒಬ್ಬರಾದ ಪಕ್ಷದ ಸಂಸದ ಓಂಪ್ರಕಾಶ್ ರಾಜೇ ನಿಂಬಾಳ್ಕರ್ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರುವುದಾಗಿ ಅವರು ಭಾನುವಾರ ಹೇಳಿದ್ದಾರೆ.

ನಿಂಬಾಳ್ಕರ್ ಮಧ್ಯಾಹ್ನ ಪುಣೆಯಿಂದ ಧರಾಶಿವ್‌ಗೆ ಆಗಮಿಸಿ ತಮ್ಮ ಬೆಂಬಲಿಗರೊಂದಿಗೆ ಸಂವಾದ ನಡೆಸಿದರು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶಿವಸೇನೆ (ಯುಬಿಟಿ) ಸೋಲು ಮತ್ತು ವಿರೋಧ ಪಕ್ಷದಲ್ಲಿರುವುದರಿಂದ ಜನರಿಗೆ ಏನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.

"ನಾವು ಅಧಿಕಾರದಲ್ಲಿಲ್ಲದ ಕಾರಣ ಸೋತಿದ್ದೇವೆ. ನಾನು ಸರ್ಕಾರದ ಭಾಗವಾಗಿಲ್ಲದ ಕಾರಣ, ಕಳೆದ ಎರಡು ವರ್ಷಗಳಲ್ಲಿ ಜನರಿಗೆ ಏನನ್ನು ಮಾಡಲು ಸಾಧ್ಯವಾಗಲಿಲ್ಲ. ಈ ಅಂಶಗಳನ್ನು ಪರಿಗಣಿಸಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಲು ನಿರ್ಧರಿಸಿದ್ದೇನೆ. ಅವರು ನಮ್ಮೊಂದಿಗೆ ನಿಂತರು. ಶಿಂಧೆ ಮತ್ತು ಸಿಎಂ ಫಡ್ನವೀಸ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದರು.

ತಂದೆ ಪವನ್ರಾಜೆ ನಿಂಬಾಳ್ಕರ್ ಅವರ ಕೊಲೆ ಪ್ರಕರಣದಲ್ಲಿ ಮಾಜಿ ರಾಜ್ಯ ಗೃಹ ಸಚಿವ ಪದಮ್ಸಿನ್ಹ ಪಾಟೀಲ್ ಅವರನ್ನು ಖುಲಾಸೆಗೊಳಿಸಿದ್ದನ್ನೂ ನಿಂಬಾಳ್ಕರ್ ಅವರು ಉಲ್ಲೇಖಿಸಿದ್ದಾರೆ.

ಅವರು (ಶಿಂಧೆ ಮತ್ತು ಫಡ್ನವೀಸ್) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡುವಂತೆ ಹೇಳಿದರು. ಹೀಗಾಗಿ ನ್ಯಾಯ ಒದಗಿಸುವಂತೆ ನಾನು ಅವರನ್ನು ವಿನಂತಿಸಿದೆ. ನಂತರ, ಶಿಂಧೆ ಕೂಡ ಸಿಬಿಐ ಮೇಲ್ಮನವಿ ಸಲ್ಲಿಸಲಿದೆ ಎಂದು ಹೇಳಿದರು. ಸತ್ಯದ ಆಧಾರದ ಮೇಲೆ ತೀರ್ಪು ಹೊರಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.