ಪ್ರಧಾನಿ ಮೋದಿ 'ಅಘೋರಿ', ಔರಂಗಜೇಬನ ನಾಡಿನಿಂದ ಬಂದವರು: ಸಂಜಯ್ ರಾವತ್
ಪ್ರಧಾನಿ ನರೇಂದ್ರ ಮೋದಿ ಅವರು 'ಅಘೋರಿ', ಔರಂಗಜೇಬನ ನಾಡಿನಿಂದ ಬಂದವರು ಎಂದು ಶಿವಸೇನೆ (UBT) ನಾಯಕ ಸಂಜಯ್ ರಾವತ್ ಹೇಳಿದ್ದು ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 'ಅಘೋರಿ', ಔರಂಗಜೇಬನ ನಾಡಿನಿಂದ ಬಂದವರು ಎಂದು ಶಿವಸೇನೆ (UBT) ನಾಯಕ ಸಂಜಯ್ ರಾವತ್ ಹೇಳಿದ್ದು ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು ಪ್ರಧಾನಿ ಔರಂಗಜೇಬನ ನಾಡಿನಿಂದ ಬಂದವರು ಹೇಳುವ ಮೂಲಕ ರಾವತ್, ಮೋದಿ ಮತ್ತು ಗುಜರಾತ್ ಎರಡನ್ನೂ ಅವಮಾನಿಸಿದ್ದಾರೆ ಎಂದು ಆರೋಪಿಸಿದೆ. ವಿರೋಧ ಪಕ್ಷದ ಹತಾಶೆ ಹೊಸ ಮಟ್ಟವನ್ನು ತಲುಪಿದೆ. ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ರಾವತ್, ರಾಜಕೀಯದಲ್ಲಿ ಅಂತಹ 'ಅಘೋರಿ'ಯನ್ನು ತಾನು ಎಂದಿಗೂ ನೋಡಿಲ್ಲ. ಮೋದಿಯವರ ವ್ಯಕ್ತಿತ್ವವೇ ಭಯವನ್ನು ಪ್ರೇರೇಪಿಸುತ್ತದೆ ಎಂದು ಹೇಳಿದ್ದರು.
ಈ ದೇಶದ ರಾಜಕೀಯದಲ್ಲಿ ಅಂತಹ 'ಅಘೋರಿ' ವ್ಯಕ್ತಿ ಹಿಂದೆಂದೂ ಹುಟ್ಟಿಲ್ಲ ಎಂದು ರಾವತ್ ಹೇಳಿದರು. ಇಂತಹ ಕ್ರೂರ ವ್ಯಕ್ತಿ ಹಿಂದೆಂದೂ ಕಾಣಿಸಿಲ್ಲ. ಈ ದೇಶವು ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ, ಪಿವಿ ನರಸಿಂಹ ರಾವ್, ರಾಜೀವ್ ಗಾಂಧಿ, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬಾಳಾಸಾಹೇಬ್ ಠಾಕ್ರೆ ಅವರಂತಹ ಮಹಾನ್ ನಾಯಕರನ್ನು ಸೃಷ್ಟಿಸಿದೆ. ಆದರೆ ನಾವು ಮೋದಿಯವರ ಸಂಪೂರ್ಣ ವ್ಯಕ್ತಿತ್ವವನ್ನು ನೋಡಿದಾಗ ಅದು ಭಯಾನಕವಾಗಿದೆ. ಅಂತಹ ವ್ಯಕ್ತಿ ಎಲ್ಲಿಂದ ಬಂದರು? ಅವರು ಔರಂಗಜೇಬ್ನಂತೆಯೇ ಅದೇ ಮಣ್ಣಿನಿಂದ ಬಂದರು. ಯಾಕಂದರೆ ಔರಂಗಜೇಬ್ ಹುಟ್ಟಿದ್ದು ಗುಜರಾತ್ ನಲ್ಲಿ ಅಲ್ಲವೇ ಎಂದು ಹೇಳಿದ್ದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲಾ, ಈ ಹೇಳಿಕೆಗಳು ಪ್ರತಿಪಕ್ಷಗಳು 'ಹತಾಶೆಯ ಹೊಸ ಮಟ್ಟವನ್ನು' ತಲುಪಿವೆ. ಈಗ ಮೋದಿಯನ್ನು ಮಾತ್ರವಲ್ಲದೆ ಗುಜರಾತ್ ಅನ್ನು ಗುರಿಯಾಗಿಸಿಕೊಂಡಿವೆ ಈಗ ಪ್ರಧಾನಿ ಮೋದಿ ಮತ್ತು ಸಾಂವಿಧಾನಿಕ ಹುದ್ದೆಯ ವಿರುದ್ಧ ಮಾತ್ರವಲ್ಲದೆ ಇಡೀ ಗುಜರಾತ್ ರಾಜ್ಯದ ವಿರುದ್ಧವೂ ನಿಂದನೀಯ ಭಾಷೆಯನ್ನು ಬಳಸುತ್ತಿದ್ದಾರೆ ಎಂದು ಪೂನಾವಾಲಾ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಹಿಂದೆ ಮೋದಿ ವಿರುದ್ಧ ಪದೇ ಪದೇ ಅವಹೇಳನಕಾರಿ ಭಾಷೆಯನ್ನು ಬಳಸಿವೆ. ರಾಜಕೀಯ ಹತಾಶೆಯಿಂದ ಅದನ್ನು ಮುಂದುವರಿಸುತ್ತಿವೆ ಎಂದು ಅವರು ಆರೋಪಿಸಿದರು. ಕಾಂಗ್ರೆಸ್ ಪಕ್ಷ ಮತ್ತು ಅದರ ಮಿತ್ರಪಕ್ಷಗಳು ಎಲ್ಲಾ ಮಿತಿಗಳನ್ನು ಮೀರಿವೆ. ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಅತ್ಯಂತ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ. ಅವರು ಪ್ರಧಾನಿ ವಿರುದ್ಧ 150ಕ್ಕೂ ಹೆಚ್ಚು ನಿಂದನೀಯ ಪದಗಳನ್ನು ಬಳಸಿದ್ದಾರೆ. ಈಗ ಕಾಂಗ್ರೆಸ್ ಮಿತ್ರಪಕ್ಷ ಸಂಜಯ್ ರಾವತ್ ಕೂಡ ಪ್ರಧಾನಿ ವಿರುದ್ಧ ಅತ್ಯಂತ ಅವಹೇಳನಕಾರಿ ಭಾಷೆಯನ್ನು ಬಳಸಿದ್ದಾರೆ. ಅವರು ಇನ್ನೂ ಮುಂದೆ ಹೋಗಿ ಗುಜರಾತ್ ರಾಜ್ಯವನ್ನು ಔರಂಗಜೇಬನ ನಾಡು ಎಂದು ಕರೆದು ಅವಮಾನಿಸಿದ್ದಾರೆ. ಇದು ಅವರ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



