ದೇಶ

'ಇದು ಕೇವಲ ಟ್ರೇಲರ್ ಅಷ್ಟೇ...: CJP ಪ್ರತಿಭಟನೆ ಬಳಿಕ ಅಭಿಜೀತ್ ದಿಪ್ಕೆ ಮೊದಲ ಪ್ರತಿಕ್ರಿಯೆ.. Video

ಇಂದಿನ ಪ್ರತಿಭಟನೆ ಕೇವಲ ಟ್ರೇಲರ್ ಆಗಿತ್ತು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದು ನಿಮ್ಮ ಬೆಂಬಲವನ್ನು ತೋರಿಸಿದ್ದಕ್ಕಾಗಿ ನನ್ನ ಹೃದಯ ಪೂರ್ವಕ ಧನ್ಯವಾದಗಳು ಎಂದು ಅವರು ಹೇಳಿದ್ದು, ಕೊನೆಯಲ್ಲಿ ಕೆಂಪು ಹೃದಯದ ಎಮೋಜಿ ಹಾಕಿದ್ದಾರೆ.

'ಇದು ಕೇವಲ ಟ್ರೇಲರ್ ಅಷ್ಟೇ...: CJP ಪ್ರತಿಭಟನೆ ಬಳಿಕ ಅಭಿಜೀತ್ ದಿಪ್ಕೆ ಮೊದಲ ಪ್ರತಿಕ್ರಿಯೆ.. Video
ಅಭಿಜೀತ್ ದಿಪ್ಕೆ
Published On :

ನವದೆಹಲಿ: ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಕ್ಷ (CJP) ಆಯೋಜಿಸಿದ್ದ ಪ್ರತಿಭಟನೆ ಶನಿವಾರ ಸಂಜೆ ಮುಕ್ತಾಯಗೊಂಡಿತು. ಬಳಿಕ CJP ಸಂಸ್ಥಾಪಕ ಅಭಿಜೀತ್ ದಿಪ್ಕೆ ತಮ್ಮ ಮೊದಲ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದು, ತಮ್ಮ ಪೋಷಕರನ್ನು ಭೇಟಿ ಮಾಡಲು ಮನೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ತಮ್ಮ ಪೋಷಕರಿಗೆ ಬೆದರಿಕೆಗಳು ಬಂದ ಹಿನ್ನೆಲೆಯಲ್ಲಿ ಅವರು ಮನೆ ತೊರೆಯುವಂತೆ ಮಾಡಲಾಗಿದೆ ಎಂದು ದಿಪ್ಕೆ ಹೇಳಿದ್ದಾರೆ.

ಅಭಿಜೀತ್ ದಿಪ್ಕೆ ಹೇಳಿದ್ದು ಏನು?

CJP ಪ್ರತಿಭಟನೆ ಬಳಿಕ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಅವರು ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದು, ನನ್ನ ಪೋಷಕರನ್ನು ಭೇಟಿ ಮಾಡಲು ಮನೆಗೆ ಹೋಗುತ್ತಿದ್ದೇನೆ. ನಾನು ಅವರನ್ನು ಕೊನೆಯದಾಗಿ ಭೇಟಿಯಾಗಿ ಒಂದು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಕಳೆದ 15 ದಿನಗಳಲ್ಲಿ ಅವರು ಬಹಳಷ್ಟು ಸಹಿಸಿಕೊಂಡಿದ್ದಾರೆ. ಬೆದರಿಕೆಗಳಿಂದಾಗಿ ಅವರು ಮನೆ ತೊರೆದಿದ್ದು, ಈಗ ನಾನು ಅವರನ್ನು ಮತ್ತೆ ಮನೆಗೆ ಕರೆದೊಯ್ಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇಂದಿನ ಪ್ರತಿಭಟನೆ ಕೇವಲ ಟ್ರೇಲರ್ ಆಗಿತ್ತು: ಇಂದಿನ ಪ್ರತಿಭಟನೆ ಕೇವಲ ಟ್ರೇಲರ್ ಆಗಿತ್ತು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದು ನಿಮ್ಮ ಬೆಂಬಲವನ್ನು ತೋರಿಸಿದ್ದಕ್ಕಾಗಿ ನನ್ನ ಹೃದಯ ಪೂರ್ವಕ ಧನ್ಯವಾದಗಳು ಎಂದು ಅವರು ಹೇಳಿದ್ದು, ಕೊನೆಯಲ್ಲಿ ಕೆಂಪು ಹೃದಯದ ಎಮೋಜಿ ಹಾಕಿದ್ದಾರೆ.

ತ್ರಿವರ್ಣ ಧ್ವಜ ಮತ್ತು ಅಂಬೇಡ್ಕರ್ ಫೋಟೋದೊಂದಿಗೆ ಸೇರಿದ ಜನರು! ಶನಿವಾರ ಸಂಜೆ 4 ಗಂಟೆ ಸುಮಾರಿಗೆ, ದೆಹಲಿಯ ಜಂತರ್ ಮಂತರ್‌ನಲ್ಲಿ ಸಾವಿರಾರು ಜನರು ಸೇರಿರುವುದನ್ನು ತೋರಿಸುವ ವೀಡಿಯೊವನ್ನು ದೀಪ್ಕೆ X ನಲ್ಲಿ ಹಂಚಿಕೊಂಡಿದ್ದಾರೆ. ಇದು ಕಾಕ್ರೋಚ್ ಜನತಾ ಪಕ್ಷವನ್ನು ಬೆಂಬಲಿಸಲು ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಲು ಸೇರಿರುವ ಜನಸಮೂಹವಾಗಿದೆ ಎಂದು ಹೇಳಿದ್ದಾರೆ.

ಭಾರತೀಯ ತ್ರಿವರ್ಣ ಧ್ವಜ ಮತ್ತು ಡಾ. ಭೀಮರಾವ್ ಅಂಬೇಡ್ಕರ್ ಅವರ ಫೋಟೋಗಳನ್ನು ಹಿಡಿದಿರುವ ಹೆಚ್ಚಿನ ಸಂಖ್ಯೆಯ ಜನರನ್ನು ವೀಡಿಯೊದಲ್ಲಿ ತೋರಿಸಲಾಗಿದೆ. “ಕಾಕ್ರೋಚ್ ಎಂದಿಗೂ ತಲೆಬಾಗುವುದಿಲ್ಲ ಎಂದು ದಿಪ್ಕೆ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.