ಮೊಹಾಲಿ: ಕಛೇರಿಯಲ್ಲಿಯೇ ಭೀಕರ ಕೊಲೆ; ಭಯಾನ ದೃಶ್ಯ ಸಿಸಿಟಿವಿಯಲ್ಲಿ ಸೆರೆ, ಮಹಿಳೆಗೆ 30 ಬಾರಿ ಇರಿದ ಸಹೋದ್ಯೋಗಿ!
ಕಚೇರಿಯಲ್ಲಿ ಇತರ ಸಹೋದ್ಯೋಗಿಗಳ ಮುಂದೆಯೇ ಈ ಭೀಕರ ದಾಳಿ ನಡೆದಿದ್ದು, ಕೆಲವರು ಆರೋಪಿಯನ್ನು ತಡೆಯಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನೆ ಆಗಲಿಲ್ಲ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಮೊಹಾಲಿ: ಮೊಹಾಲಿಯಲ್ಲಿ ಖಾಸಗಿ ಕಂಪನಿಯೊಂದರ ಕಚೇರಿಯೊಳಗೆ 29 ವರ್ಷದ ಮಹಿಳೆಯನ್ನು ಆಕೆಯ ಸಹೋದ್ಯೋಗಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಚೇರಿಯಲ್ಲಿ ಇತರ ಸಹೋದ್ಯೋಗಿಗಳ ಮುಂದೆಯೇ ಈ ಭೀಕರ ದಾಳಿ ನಡೆದಿದ್ದು, ಕೆಲವರು ಆರೋಪಿಯನ್ನು ತಡೆಯಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನೆ ಆಗಲಿಲ್ಲ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ಸಂಜೆ ಈ ಅಮಾನುಷ ಕೃತ್ಯ ನಡೆದಿದೆ. ಆರೋಪಿ 34 ವರ್ಷದ ಹರ್ಜಿಂದರ್ ಮಾನ್, ತನ್ನ ಮಹಿಳಾ ಸಹೋದ್ಯೋಗಿ ಡಿಂಪಲ್ ಗೆ ಚಾಕುವಿನಿಂದ 30 ಬಾರಿ ಇರಿದಿದ್ದು, ನಂತರ ಅದೇ ಚಾಕುವಿನಿಂದ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಡಿಂಪಲ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾನ್ ಅವರ ಪೋಷಕರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಮಾನ್ ಆಸ್ಪತ್ರೆಯಲ್ಲಿ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಮಾನ್ ಮತ್ತು ಡಿಂಪಲ್ ಇಬ್ಬರೂ ಪಟಿಯಾಲ ನಿವಾಸಿಗಳಾಗಿದ್ದು, ಒಂದೇ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಚಂಡೀಗಢದ ಹೊರವಲಯದಲ್ಲಿರುವ ಮೊಹಾಲಿಯಲ್ಲಿ ಪ್ರತ್ಯೇಕ ಪೇಯಿಂಗ್ ಗೆಸ್ಟ್ ಗಳಲ್ಲಿ ವಾಸಿಸುತ್ತಿದ್ದರು.
ಈ ಇಬ್ಬರೂ ಸುಮಾರು ಮೂರು ವರ್ಷಗಳಿಂದ ಮೊಹಾಲಿಯ ಬೆಸ್ಟೆಕ್ ಮಾಲ್ ಬಳಿಯ SRP ಲಾಜಿಸ್ಟಿಕ್ಸ್, ಬ್ರೋಕರೇಜ್ ಎಂಬ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಚೇರಿಯಲ್ಲಿರುವ ಸಿಸಿಟಿವಿಯಲ್ಲಿ ಭಯಾನಕ ಘಟನೆ ಸೆರೆಯಾಗಿದ್ದು, ಆರೋಪಿಯು, ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತ ಕುಳಿತ್ತಿದ್ದ ಡಿಂಪಲ್ ಬಳಿಗೆ ಬಂದು, ಹಿಂದಿನಿಂದ ಅವಳ ಮೇಲೆ ದಾಳಿ ಮಾಡುತ್ತಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



