ದೇಶ

"ನಿನ್ನ ವಯಸ್ಸಿಗೆ ನಾನು 2 ರಾಷ್ಟ್ರ ಪ್ರಶಸ್ತಿ ಗೆದ್ದಿದ್ದೆ.. ನೀನು ನಿಷ್ಪ್ರಯೋಜಕ, ನಿರುದ್ಯೋಗಿ": ಸಿಜೆಪಿ ನಾಯಕ Saurav Dasಗೆ ಕಂಗನಾ ತಿರುಗೇಟು

ಸಿಜೆಪಿಯನ್ನು ಗಟರ್ ಪಾರ್ಟಿ ಎಂದು ಟೀಕಿಸಿದ್ದ ಕಂಗನಾರನ್ನು ಸಿಜೆಪಿ ವಕ್ತಾರ ಸೌರವ್ ದಾಸ್ ಕಂಗನಾ ಹೇಳಿಕೆಗಳನ್ನು ಅವರ ಪಕ್ಷದವರೇ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ತಿರುಗೇಟು ನೀಡಿದ್ದರು.

"ನಿನ್ನ ವಯಸ್ಸಿಗೆ ನಾನು 2 ರಾಷ್ಟ್ರ ಪ್ರಶಸ್ತಿ ಗೆದ್ದಿದ್ದೆ.. ನೀನು ನಿಷ್ಪ್ರಯೋಜಕ, ನಿರುದ್ಯೋಗಿ": ಸಿಜೆಪಿ ನಾಯಕ Saurav Dasಗೆ ಕಂಗನಾ ತಿರುಗೇಟು
ಕಂಗನಾ ರಣಾವತ್
Published On :

ನವದೆಹಲಿ: ತಮ್ಮನ್ನು ಟೀಕಿಸಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ವಕ್ತಾರ ಸೌರವ್ ದಾಸ್ ವಿರುದ್ಧ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಿಜೆಪಿಯನ್ನು ಗಟರ್ ಪಾರ್ಟಿ ಎಂದು ಟೀಕಿಸಿದ್ದ ಕಂಗನಾರನ್ನು ಸಿಜೆಪಿ ವಕ್ತಾರ ಸೌರವ್ ದಾಸ್ ಕಂಗನಾ ಹೇಳಿಕೆಗಳನ್ನು ಅವರ ಪಕ್ಷದವರೇ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ತಿರುಗೇಟು ನೀಡಿದ್ದರು.

ಇದೀಗ ಸೌರವ್ ದಾಸ್ ರ ಈ ಹೇಳಿಕೆಗೂ ಕಂಗನಾ ತಿರುಗೇಟು ನೀಡಿದ್ದು 'ನಿನ್ನ ವಯಸ್ಸಿನಲ್ಲಿ ನಾನು ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದೆ. ನೀನು ವಿದ್ಯಾರ್ಥಿಯಲ್ಲ, ಕೆಲಸವಿಲ್ಲದ, ನಿಷ್ಪ್ರಯೋಜಕ ವ್ಯಕ್ತಿ" ಎಂದು ಕಿಡಿಕಾರಿದ್ದಾರೆ.

ಸೌರವ್ ದಾಸ್ ತಮ್ಮ ಬಗ್ಗೆ ಮಾತನಾಡಿರುವ ವಿಡಿಯೊವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡ ಕಂಗನಾ, ಅವರ ಟೀಕೆಯನ್ನು ತಳ್ಳಿಹಾಕಿ ವೈಯಕ್ತಿಕವಾಗಿಯೂ ತರಾಟೆಗೆ ತೆಗೆದುಕೊಂಡಿದ್ದಾರೆ.

"28 ವರ್ಷದವನಾಗಿ ಇನ್ನೂ ವಿದ್ಯಾರ್ಥಿ ಅಂತ ಹೇಗೆ ಹೇಳಿಕೊಳ್ಳುತ್ತಾನೆ?"

"ಗೂಗಲ್‌ನಲ್ಲಿ ಈ ವ್ಯಕ್ತಿಯ ಬಗ್ಗೆ ಹುಡುಕಿದೆ. ಅವನಿಗೆ 28 ವರ್ಷ. ಈ ವಯಸ್ಸಿನಲ್ಲೂ ತಾನು ವಿದ್ಯಾರ್ಥಿ ಎಂದು ಹೇಗೆ ಹೇಳಿಕೊಳ್ಳುತ್ತಾನೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನಾನು ರಾಜಕೀಯಕ್ಕೆ ಬಂದಿದ್ದು ಕೇವಲ ಎರಡು ವರ್ಷಗಳ ಹಿಂದೆ ಇರಬಹುದು. ಆದರೆ ಕಳೆದ 20 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ಅವನ ವಯಸ್ಸಿನಲ್ಲಿ ನಾನು ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದೆ," ಎಂದು ಕಂಗನಾ ಬರೆದುಕೊಂಡಿದ್ದಾರೆ.

"ಸಂಸದೆ ಆಗಿ ಕೆಲಸದ ಒತ್ತಡ ಇತ್ತು"

ಸಂಸದೆಯಾಗಿ ತಮ್ಮ ಕಾರ್ಯಕ್ಷಮತೆ ಕುರಿತು ಬಂದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಕಂಗನಾ, ರಾಜಕೀಯ ಪ್ರವೇಶದ ಬಳಿಕ ಹಲವು ಜವಾಬ್ದಾರಿಗಳನ್ನು ನಿಭಾಯಿಸುವುದು ಆರಂಭದಲ್ಲಿ ಸವಾಲಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ. "ಹೊಸ ಸಂಸದೆಯಾಗಿ ಕೆಲಸದ ಒತ್ತಡ ತುಂಬಾ ಇತ್ತು. ನಾನು ಕೇವಲ ಸಂಸದೆ ಮಾತ್ರವಲ್ಲ; ಚಲನಚಿತ್ರ ನಿರ್ದೇಶಕಿ, ನಟಿ, ನಿರ್ಮಾಪಕಿ, ಕಥೆಗಾರ್ತಿ ಮತ್ತು ಉದ್ಯಮಿಯೂ ಆಗಿದ್ದೇನೆ" ಎಂದು ಹೇಳಿದ್ದಾರೆ.

"ಕೆಲಸವಿಲ್ಲದವನಿಗೆ ಅದು ಅರ್ಥವಾಗುವುದಿಲ್ಲ"

ಅಂತೆಯೇ ಸೌರವ್ ದಾಸ್ ಅವರನ್ನು ಗುರಿಯಾಗಿಸಿಕೊಂಡು ಕಂಗನಾ, "ಸಂಪೂರ್ಣವಾಗಿ ಕೆಲಸವಿಲ್ಲದೆ, ಯಾವುದೇ ಸಾಧನೆ ಇಲ್ಲದೆ ಇರುವ ವ್ಯಕ್ತಿಗೆ ಯಾವಾಗಲೂ ಜನರಿಂದ ಬೇಡಿಕೆಯಲ್ಲಿರುವುದು ಎಂದರೇನು ಎಂಬುದು ಎಂದಿಗೂ ಅರ್ಥವಾಗುವುದಿಲ್ಲ" ಎಂದು ವಾಗ್ದಾಳಿ ನಡೆಸಿದ್ದಾರೆ.

"ಮೊದಲು ಒಂದು ಕೌಶಲ್ಯ ಕಲಿತುಕೋ"

ತಮ್ಮ ಹೇಳಿಕೆಯನ್ನು ಮುಕ್ತಾಯಗೊಳಿಸಿದ ಕಂಗನಾ, "ಪ್ರಿಯ ಸೌರವ್, ನಿನ್ನ ಸಮಸ್ಯೆಗಳು ವೈಯಕ್ತಿಕವಾಗಿವೆ. ನೀನು ವಿದ್ಯಾರ್ಥಿಯಲ್ಲ, ನೀನು ಕೇವಲ ನಿಷ್ಪ್ರಯೋಜಕ ವ್ಯಕ್ತಿ. ಮೊದಲು ಒಂದು ಕೌಶಲ್ಯವನ್ನು ಕಲಿಯಲು ಆರಂಭಿಸು. ಅದೇ ನಿನಗೆ ಉತ್ತಮ ಆರಂಭವಾಗುತ್ತದೆ," ಎಂದು ತಿರುಗೇಟು ನೀಡಿದ್ದಾರೆ.

Story image

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.