'ಮಂಗಳ ಗ್ರಹಕ್ಕೆ ಹೋಗಿದ್ದಕ್ಕೂ ಕ್ರೆಡಿಟ್ ತೆಗೆದುಕೊಳ್ಳುವ ಪ್ರಧಾನಿ ಮೋದಿ, ನೀಟ್ ಅಕ್ರಮ ಸೋರಿಕೆಯ ಹೊಣೆ ಹೊತ್ತುಕೊಳ್ಳಲಿ': ಪ್ರಿಯಾಂಕಾ ಗಾಂಧಿ; Video
ಸಂಸತ್ ಭವನ ಆವರಣದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಕ್ಕಳ ಬಗ್ಗೆ ಕಾಳಜಿ ಇದೆ ಎಂದು ಪ್ರಧಾನಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ನಿನ್ನೆ ರಾತ್ರಿ ಅದೇ ಮಕ್ಕಳ ಮೇಲೆ ಆಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಲಾಗಿದೆ" ಎಂದು ಆರೋಪಿಸಿದರು.

ನವದೆಹಲಿ: ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರ ವಾಗ್ದಾಳಿ ನಡೆಸಿದ್ದು, "ಮಂಗಳ ಗ್ರಹಕ್ಕೆ ಹೋಗಿದ್ದಕ್ಕೂ ಶ್ರೇಯಸ್ಸು ಪಡೆಯುವ ಪ್ರಧಾನಿ, ಈಗ ತಮ್ಮ ಕ್ರಮಗಳಿಗೆ ಹೊಣೆಗಾರಿಕೆಯನ್ನೂ ಹೊತ್ತುಕೊಳ್ಳಬೇಕು" ಎಂದು ಹೇಳಿದ್ದಾರೆ.
ಸಂಸತ್ ಭವನ ಆವರಣದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಕ್ಕಳ ಬಗ್ಗೆ ಕಾಳಜಿ ಇದೆ ಎಂದು ಪ್ರಧಾನಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ನಿನ್ನೆ ರಾತ್ರಿ ಅದೇ ಮಕ್ಕಳ ಮೇಲೆ ಆಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಲಾಗಿದೆ" ಎಂದು ಆರೋಪಿಸಿದರು.
ನಮ್ಮ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಆಡಳಿತ ಪಕ್ಷದ ಸಂಸದರು ಸಂಸತ್ ಹೊರಗೆ ನಿಂತು ಪ್ರತಿಭಟನೆ ನಡೆಸಿರುವುದನ್ನು ಎಂದಾದರೂ ನೋಡಿದ್ದೀರಾ? ಎಷ್ಟು ಅಧಿವೇಶನಗಳಿಂದ ಇದು ನಡೆಯುತ್ತಿದೆ? ಅವರಿಗೆ ಸಂಸತ್ ನಡೆಸಲು ಸಾಧ್ಯವಾಗುತ್ತಿಲ್ಲ. ಹೊರಗೆ ಏನು ನಡೆಯುತ್ತಿದೆ? ಪ್ರಧಾನಿ ಮೋದಿ ದುರ್ಬಲರು ಮತ್ತು ಹೇಡಿಗಳು ಎಂದು ಟೀಕಿಸಿದರು.
ಮಂಗಳ ಗ್ರಹಕ್ಕೆ ಹೋಗಿದ್ದಕ್ಕೂ ಅವರು ಶ್ರೇಯಸ್ಸು ಪಡೆಯುತ್ತಾರೆ. ನಮ್ಮ ಯುವಕರ ಹಾಗೂ ದೇಶದ ಜನರ ಪ್ರತಿಯೊಂದು ಸಾಧನೆಗೂ ಅವರು ಕ್ರೆಡಿಟ್ ಪಡೆಯುತ್ತಾರೆ. ಈಗ ತಮ್ಮ ಕ್ರಮಗಳಿಗೆ ಹೊಣೆ ಹೊರುವ ಸಮಯ ಬಂದಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ಜನರನ್ನು ಥಳಿಸಲು ಆದೇಶಿಸುತ್ತಿರುವವರು ಅವರೇ. ಅವರ ಮೂಗಿನ ಕೆಳಗೆ 152 ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಆದರೆ ಒಂದೇ ಒಂದು ಪ್ರಕರಣದಲ್ಲೂ ಶಿಕ್ಷೆಯಾಗಿಲ್ಲ. ಇದಕ್ಕೆ ಯಾರು ಹೊಣೆ? ಮಂಗಳಯಾನಕ್ಕೆ ಮೋದಿ ಹೊಣೆ ಎನ್ನುವುದಾದರೆ, ಒಲಿಂಪಿಕ್ಸ್ ಅಥವಾ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯರು ಸಾಧಿಸಿದ ಪ್ರತಿಯೊಂದು ಯಶಸ್ಸಿಗೂ ಮೋದಿ ಹೊಣೆ ಎನ್ನುವುದಾದರೆ, ಇಂದು ನಡೆಯುತ್ತಿರುವ ಘಟನೆಗಳಿಗೂ ಅವರೇ ಹೊಣೆ ಎಂದು ಟೀಕಿಸಿದರು.
ಯುವಕರು ತಮ್ಮ ಭವಿಷ್ಯದ ಬಗ್ಗೆ ನಂಬಿಕೆ ಕಳೆದುಕೊಳ್ಳಲು ಮೋದಿಯವರು ಕಾರಣ. ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಇಂಟರ್‌ನೆಟ್ ಸಂಪರ್ಕವನ್ನು ಕಡಿತಗೊಳಿಸಿ, ಅವರ ಮೇಲೆ ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಲಾಗುತ್ತಿದೆ. ಅವರಿಗೆ ಏನಾದರೂ ಅನಾಹುತವಾದರೆ ಅದರ ಸಂಪೂರ್ಣ ಹೊಣೆ ಮೋದಿ ಜಿಯವರದ್ದೇ ಎಂದು ಆರೋಪಿಸಿದರು.
ವಿದ್ಯಾರ್ಥಿ ಪ್ರತಿಭಟನೆ ತನಿಖೆಗೆ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ಇಂದು
ಜಂತರ್ ಮಂತರ್‌ನಲ್ಲಿ ನಡೆದಿರುವ ಪರೀಕ್ಷಾ ಅಕ್ರಮಗಳ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದ ಪ್ರತಿಭಟನೆ ಕುರಿತು ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆಯನ್ನು ಇಂದು ನಡೆಸಲು ದೆಹಲಿ ಹೈಕೋರ್ಟ್ ಒಪ್ಪಿಗೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರಿದ್ದ ಪೀಠದ ಮುಂದೆ ಅರ್ಜಿದಾರರ ಪರ ವಕೀಲರು ವಿಷಯ ಪ್ರಸ್ತಾಪಿಸಿ, ಶುಕ್ರವಾರ ವಿಚಾರಣೆಗೆ ನಿಗದಿಪಡಿಸುವಂತೆ ಮನವಿ ಮಾಡಿದರು.
ಇದು ವಿದ್ಯಾರ್ಥಿ ಪ್ರತಿಭಟನೆ ಎಂದು ಕರೆಯಲಾಗುತ್ತಿರುವ ಚಳವಳಿಯ ವಿರುದ್ಧದ ಅರ್ಜಿ. ಇಡೀ ದೆಹಲಿಯನ್ನು ಒತ್ತೆಯಾಳಾಗಿಸಲಾಗಿದೆ. ರಸ್ತೆಗಳನ್ನು ತಡೆಹಿಡಿಯಲಾಗಿದೆ. ದೆಹಲಿಯ ನಾಗರಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ವಕೀಲ ಬರೂಣ್ ಕುಮಾರ್ ಸಿನ್ಹಾ ವಾದಿಸಿದರು.

NEET ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಇಂದು ಸಂಪುಟ ಸಭೆಯಲ್ಲಿ ತೀರ್ಮಾನ: PM ಮೋದಿ; Video
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


