ದೇಶ

ನಾಳೆಯಿಂದ ಸಂಸತ್ತಿನ ಮುಂಗಾರು ಅಧಿವೇಶನ: ಸರ್ವಪಕ್ಷ ಸಭೆ, NCPI ಗೆ ಆಹ್ವಾನ; ವಿಪಕ್ಷ ಸಂಸದರು ವಾಕೌಟ್!

ಟಿಎಂಸಿ ಬಂಡಾಯ ಗುಂಪಿನ ಸಂಸದ ಸುದೀಪ್ ಬಂದ್ಯೋಪಾಧ್ಯಾಯ ಪ್ರತಿನಿಧಿಸುವ NCPI ಭಾಗವಹಿಸುವಿಕೆ ವಿರೋಧಿಸಿ ವಿರೋಧ ಪಕ್ಷಗಳು ಈ ಕ್ರಮ ಕೈಗೊಂಡವು.

ನಾಳೆಯಿಂದ ಸಂಸತ್ತಿನ ಮುಂಗಾರು ಅಧಿವೇಶನ: ಸರ್ವಪಕ್ಷ ಸಭೆ, NCPI ಗೆ ಆಹ್ವಾನ; ವಿಪಕ್ಷ ಸಂಸದರು ವಾಕೌಟ್!
ಟಿಎಂಸಿಯ ಮಹುವಾ ಮೊಯಿತ್ರಾ
Published On :

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ, 'ನ್ಯಾಷನಲಿಸ್ಟ್ ಸಿಟಿಜನ್ ಪಾರ್ಟಿ ಆಫ್ ಇಂಡಿಯಾ' (NCPI) ಗೆ ನೀಡಲಾದ ಆಹ್ವಾನವನ್ನು ವಿರೋಧಿಸಿ ವಿರೋಧ ಪಕ್ಷಗಳು ಭಾನುವಾರ ಸಾಂಕೇತಿಕವಾಗಿ ಸಭೆಯಿಂದ ಹೊರನಡೆದವು. ಜಂಟಿ ಸುದ್ದಿಗೋಷ್ಠಿಯನ್ನು ನಡೆಸಿದ ಬಳಿಕ ನಾಯಕರು ಸಭೆಗೆ ಮರಳಿದರು.

ಕಾಂಗ್ರೆಸ್‌ನ ಪ್ರಮೋದ್ ತಿವಾರಿ, ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್, ಎನ್‌ಸಿಪಿ (ಎಸ್‌ಪಿ)ಯ ಸುಪ್ರಿಯಾ ಸುಳೆ ಮತ್ತು ಟಿಎಂಸಿಯ ಮಹುವಾ ಮೊಯಿತ್ರಾ ಸೇರಿದಂತೆ ವಿರೋಧ ಪಕ್ಷದ ಹಿರಿಯ ನಾಯಕರು ಪ್ರತಿಭಟನೆಯ ಭಾಗವಾಗಿ ಸಭೆಯಿಂದ ಹೊರನಡೆದರು.

ಟಿಎಂಸಿ ಬಂಡಾಯ ಗುಂಪಿನ ಸಂಸದ ಸುದೀಪ್ ಬಂದ್ಯೋಪಾಧ್ಯಾಯ ಪ್ರತಿನಿಧಿಸುವ NCPI ಭಾಗವಹಿಸುವಿಕೆ ವಿರೋಧಿಸಿ ವಿರೋಧ ಪಕ್ಷಗಳು ಈ ಕ್ರಮ ಕೈಗೊಂಡವು.

ಕಾಂಗ್ರೆಸ್‌ನ ಪ್ರಮೋದ್ ತಿವಾರಿ, ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್, ಎನ್‌ಸಿಪಿ (ಎಸ್‌ಪಿ)ಯ ಸುಪ್ರಿಯಾ ಸುಳೆ ಮತ್ತು ಟಿಎಂಸಿಯ ಮಹುವಾ ಮೊಯಿತ್ರಾ ಸೇರಿದಂತೆ ಹಿರಿಯ ನಾಯಕರು ಈ ಸಾಂಕೇತಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

NCPI ಗೆ ಆಹ್ವಾನದ ಬಗ್ಗೆ ಪ್ರಶ್ನೆ ಎತ್ತಿದ ಮಹುವಾ ಮೊಯಿತ್ರಾ, ಬಂಡಾಯ ಸಂಸದರನ್ನು ಏಕೆ ಆಹ್ವಾನಿಸಲಾಯಿತು?" ಎಂದು ಕೇಳಿದರು. ಪಕ್ಷದ ಬಂಡಾಯ ಸಂಸದರು NCPI ಸೇರ್ಪಡೆಗೊಂಡಿರುವ ವಿಷಯವನ್ನೂ ಟಿಎಂಸಿ ಸಂಸದರು ಪ್ರಸ್ತಾಪಿಸಿದರು. ಸಂಸತ್ತಿನ ಮುಂಬರುವ ಮುಂಗಾರು ಅಧಿವೇಶನಕ್ಕೆ ಸಂಬಂಧಿಸಿದ ಶಾಸನೀಯ ಕಾರ್ಯಸೂಚಿಯ ಬಗ್ಗೆ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಲು ಕೇಂದ್ರ ಸರ್ಕಾರ ಈ ಸರ್ವಪಕ್ಷ ಸಭೆಯನ್ನು ಕರೆದಿತ್ತು. ಸರ್ಕಾರದ ಪರವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮುಂಗಾರು ಅಧಿವೇಶನದಲ್ಲಿ ರಾಮ ಜನ್ಮಭೂಮಿ ಟ್ರಸ್ಟ್ ದೇಣಿಗೆ ಕಳ್ಳತನ, ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತಿತರ ವಿಚಾರಗಳನ್ನು ಪ್ರಸ್ತಾಪಿಸಲಾಗುವುದು ಎಂದು ವಿರೋಧ ಪಕ್ಷಗಳು ಹೇಳಿದವು.

ಸುದೀಪ್ ಬಂಡೋಪಾಧ್ಯಾಯ ಮಾತನಾಡಿ, ನಾನು ಇಂದು NCPI ನಾಯಕನಾಗಿ ಭಾಗವಹಿಸುತ್ತಿದ್ದೇನೆ.ಇಂದು ನಾನು ಹೊಸ ಪಕ್ಷವೊಂದನ್ನು ಪ್ರತಿನಿಧಿಸುತ್ತಿದ್ದೇನೆ. ಆದರೆ, ಸದನವು ವಿರೋಧ ಪಕ್ಷಕ್ಕೆ ಸೇರಿದ್ದು' ಎಂಬ ಹೊಸ ಪಕ್ಷದ ನಿಲುವು ಹಾಗೆಯೇ ಮುಂದುವರಿಯುತ್ತದೆ... ನಾವು ಮೂಲಭೂತವಾಗಿ ಸಂಪೂರ್ಣ ಜಾತ್ಯತೀತರು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.