Instagramನಲ್ಲಿ CSEAM ಜಾಹೀರಾತು ವಿವಾದ: Meta ವಿರುದ್ಧ ಕೇಂದ್ರದ ಕಠಿಣ ಕ್ರಮ, 7 ದಿನಗಳೊಳಗೆ ಉತ್ತರಿಸುವಂತೆ ನೋಟಿಸ್ ಜಾರಿ..!
ಈ ಸಂಬಂಧ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) Metaಗೆ ನೋಟಿಸ್ ಜಾರಿ ಮಾಡಿ, ಏಳು ದಿನಗಳೊಳಗೆ ಸಮಗ್ರ ವಿವರಣೆ ನೀಡುವಂತೆ ಸೂಚಿಸಿದೆ.

ನವದೆಹಲಿ: Instagramನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ (CSEAM) ಸಂಬಂಧಿಸಿದ ವಿಷಯಗಳನ್ನು ಪ್ರಚಾರ ಮಾಡುವ ಪಾವತಿಸಿದ ಜಾಹೀರಾತುಗಳು ಪ್ರಸಾರವಾಗಿವೆ ಎಂಬ ಗಂಭೀರ ಆರೋಪದ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ Meta ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
ಈ ಸಂಬಂಧ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) Metaಗೆ ನೋಟಿಸ್ ಜಾರಿ ಮಾಡಿ, ಏಳು ದಿನಗಳೊಳಗೆ ಸಮಗ್ರ ವಿವರಣೆ ನೀಡುವಂತೆ ಸೂಚಿಸಿದೆ.
ಅಲ್ಲದೆ, ಇಂತಹ ಜಾಹೀರಾತುಗಳು ಹೇಗೆ ಅನುಮೋದನೆ ಪಡೆದವು ಮತ್ತು ಅವುಗಳನ್ನು ತಡೆಯಲು ಕಂಪನಿಯು ಯಾವ ಭದ್ರತಾ ವ್ಯವಸ್ಥೆಗಳನ್ನು ಜಾರಿಗೊಳಿಸಿದೆ ಎಂಬ ಬಗ್ಗೆ Meta ಅಧಿಕಾರಿಗಳಿಂದ ಸ್ಪಷ್ಟನೆ ಪಡೆಯಲು ಸಚಿವಾಲಯ ಮುಂದಾಗಿದೆ.
ಅಲ್ಲದೆ, ನೋಟಿಸ್‌ನಲ್ಲಿ Instagramನಲ್ಲಿ ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ವಿಷಯಗಳನ್ನು ಪ್ರಚಾರ ಮಾಡುವ ಅಥವಾ ಅಂತಹ ವಿಷಯಗಳಿಗೆ ಪ್ರವೇಶ ಕಲ್ಪಿಸುವ ಎಲ್ಲಾ ಜಾಹೀರಾತುಗಳು ಹಾಗೂ ವಿಷಯಗಳನ್ನು ತಕ್ಷಣವೇ ತೆಗೆದುಹಾಕುವಂತೆ ನಿರ್ದೇಶಿಸಿದೆ.
ಮೂಲಗಳ ಪ್ರಕಾರ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು Meta ಅಧಿಕಾರಿಗಳನ್ನು ಸಚಿವಾಲಯದ ಮುಂದೆ ಹಾಜರಾಗುವಂತೆ ಸೂಚಿಸಿದ್ದು, ಇಂತಹ ಜಾಹೀರಾತುಗಳು Instagramನಲ್ಲಿ ಹೇಗೆ ಪ್ರಸಾರವಾದವು ಹಾಗೂ ಇವುಗಳನ್ನು ತಡೆಯಲು ಕಂಪನಿಯು ಯಾವ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಂಡಿದೆ ಎಂಬುದರ ಬಗ್ಗೆ ವಿವರಣೆ ನೀಡುವಂತೆ ಆದೇಶಿಸಿದ್ದಾರೆಂದು ತಿಳಿದುಬಂದಿದೆ.
ನೋಟಿಸ್ ಹಿನ್ನೆಲೆಯಲ್ಲಿ Facebook, Instagram ಹಾಗೂ WhatsAppಗೆ ಮಾಲೀಕತ್ವ ಹೊಂದಿರುವ Meta ಸಂಸ್ಥೆಯು, ತನ್ನ ಕಂಟೆಂಟ್ ಮಾಡರೇಷನ್ ವ್ಯವಸ್ಥೆ, ಜಾಹೀರಾತು ಪರಿಶೀಲನಾ ಪ್ರಕ್ರಿಯೆ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಟೆಂಟ್ ಗಳನ್ನು ಪತ್ತೆಹಚ್ಚಿ, ತೆಗೆದುಹಾಕಲು ಮತ್ತು ತಡೆಯಲು ಅನುಸರಿಸುತ್ತಿರುವ ಕ್ರಮಗಳ ಕುರಿತು ವಿವರಿಸಬೇಕಾಗಿದೆ.
ಇದೇ ವೇಳೆ, ಅಕ್ರಮ ಹಾಗೂ ಹಾನಿಕಾರಕ ಕಟೆಂಟ್ ಗಳ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸಲು ಕಂಪನಿ ಕೈಗೊಂಡಿರುವ ಹೆಚ್ಚುವರಿ ಕ್ರಮಗಳ ಮಾಹಿತಿಯನ್ನೂ ಸಚಿವಾಲಯ ಕೇಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ Meta ಈ ವಿಷಯದ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಈ ಹಿಂದೆ ಭಾರತದಲ್ಲಿ WhatsApp ಬಳಕೆದಾರರ Username ವೈಶಿಷ್ಟ್ಯದ ಜಾರಿಯನ್ನು ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.
ಈ ಕುರಿತು ಪ್ರತಿಕ್ರಿಯಿಸಿದ್ದ WhatsApp, Username ವೈಶಿಷ್ಟ್ಯವು ಐಚ್ಛಿಕವಾಗಿರಲಿದೆ ಎಂದು ತಿಳಿಸಿದ್ದು, ನಕಲಿ ಗುರುತು ಸೃಷ್ಟಿ (Impersonation), ವಂಚನೆ ಹಾಗೂ ಅನಗತ್ಯ ಸಂಪರ್ಕಗಳನ್ನು ತಡೆಯಲು ಹಲವು ಭದ್ರತಾ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ ಎಂದು ಹೇಳಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



