ದೇಶ

ಸಂಪುಟ ಪುನಾರಚನೆ ಊಹಾಪೋಹಗಳ ನಡುವೆ ಜೋರಾದ ಹೊಸ ಚರ್ಚೆ: ನಿತೀಶ್ ಕುಮಾರ್ ಗೆ ಉಪ ಪ್ರಧಾನಿ ಪಟ್ಟ?

ನಿತೀಶ್ ಕುಮಾರ್ ಅವರ ದೀರ್ಘಾವಧಿಯ ಆಡಳಿತ ಮತ್ತು ಅನುಭವವನ್ನು ಗಮನದಲ್ಲಿಟ್ಟುಕೊಂಡು, ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆತಂದು ಉಪ ಪ್ರಧಾನಿ ಪಟ್ಟ ನೀಡಬೇಕೆಂಬ ಕೂಗು ಹೆಚ್ಚಾಗಿದೆ.

ಸಂಪುಟ ಪುನಾರಚನೆ ಊಹಾಪೋಹಗಳ ನಡುವೆ ಜೋರಾದ ಹೊಸ ಚರ್ಚೆ: ನಿತೀಶ್ ಕುಮಾರ್ ಗೆ ಉಪ ಪ್ರಧಾನಿ ಪಟ್ಟ?
ನಿತೀಶ್ ಕುಮಾರ್
Published On :

ನವದೆಹಲಿ: ಕೇಂದ್ರ ಸಂಪುಟ ವಿಸ್ತರಣೆ ವದಂತಿ ನಡುವೆಯೇ ಬಿಹಾರ ಮಾಜಿ ಸಿಎಂ ನಿತೀಶ್‌ ಕುಮಾರ್‌ ಉಪ­ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ ಎಂಬ ವರದಿಗಳೂ ಹರಿದಾಡುತ್ತಿವೆ.

ಅದರಂತೆ ಜೆಡಿಯು ಅಷ್ಟೇ ಅಲ್ಲದೇ ಬಿಹಾರದ ವಿಪಕ್ಷ ಆರ್‌ಜೆಡಿ ಸಹ ನಿತೀಶ್‌ ಉಪಪ್ರಧಾನಿ ಆಗಲಿ ಎಂದು ಆಗ್ರಹಿಸಿದೆ. ಈ ಬಗ್ಗೆ ಮಾತನಾಡಿರುವ ಜೆಡಿಯು ಶಾಸಕ ಪಂಕಜ್ ಮಿಶ್ರಾ, ನಿತೀಶ್‌ ಈಗಾಗಲೇ ಕೇಂದ್ರದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಹಾಗಾಗಿ ಅವರಿಗೆ ಉಪಪ್ರಧಾನಿ ಹುದ್ದೆಯನ್ನು ನೀಡಬೇಕು. ಅದು ಅವರಿಗೆ ನೀಡುವ ಸರಿಯಾದ ಗೌರವವಾಗಿದೆ ಎಂದು ಹೇಳಿದ್ದಾರೆ. ನಿತೀಶ್ ಕುಮಾರ್ ಅವರ ದೀರ್ಘಾವಧಿಯ ಆಡಳಿತ ಮತ್ತು ಅನುಭವವನ್ನು ಗಮನದಲ್ಲಿಟ್ಟುಕೊಂಡು, ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆತಂದು ಉಪ ಪ್ರಧಾನಿ ಪಟ್ಟ ನೀಡಬೇಕೆಂಬ ಕೂಗು ಹೆಚ್ಚಾಗಿದೆ.

ಆರ್‌ಜೆಡಿ ನಾಯಕ ಮುಕೇಶ್ ರೋಷನ್ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಸಹ ನಿತೀಶ್ ಕುಮಾರ್ ಅವರಿಗೆ ಈ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ, ಆಡಳಿತಾರೂಢ ಬಿಜೆಪಿಯ ನಾಯಕರು ಇದುವರೆಗೂ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ನಿತೀಶ್ ಕುಮಾರ್ ಅವರನ್ನು ಉಪ ಪ್ರಧಾನಿಯಾಗಿ ನೇಮಿಸಬೇಕು. ಬಿಹಾರದ ಜನರು ಸಹ ಇದನ್ನು ಬೆಂಬಲಿಸುತ್ತಾರೆ ಎಂದು ಅವರು ಪ್ರತಿಪಾದಿಸಿದ್ದಾರೆ. ನಿತೀಶ್ ಕುಮಾರ್ ಸುಮಾರು ಎರಡು ದಶಕಗಳ ಕಾಲ ಬಿಹಾರ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯವನ್ನು ಮುನ್ನಡೆಸುವ ಮೊದಲು ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.