Google map ತಂದಿಟ್ಟ ಸಂಕಷ್ಟ: ದಾರಿ ತಪ್ಪಿ ಭಯಭೀತಳಾಗಿದ್ದ ವಿದೇಶಿ ಮಹಿಳೆಗೆ Rapido ಚಾಲಕಿ ನೆರವು; ಹೃದಯಸ್ಪರ್ಶಿ Video ವೈರಲ್
ಒಂಟಿಯಾಗಿದ್ದ ಆಕೆ ಭಯಭೀತಳಾಗಿದ್ದು, ಈ ವೇಳೆ ರ್ಯಾಪಿಡೊ ಚಾಲಕಿ ಸಿಂಧು ಕುಮಾರಿ ಮಹಿಳೆಯನ್ನು ಗಮನಿಸಿ ನೆರವಿಗೆ ಮುಂದಾಗಿದ್ದಾರೆ. ಆಕೆಗೆ ಧೈರ್ಯ ತುಂಬಿದ ಅವರು, ಹೋಟೆಲ್'ಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಿದ್ದಾರೆ.

ಗೋವಾ: ಗೂಗಲ್ ಮ್ಯಾಪ್. ಈ ಡಿಜಿಟಲ್ ದುನಿಯಾದಲ್ಲಿ ಗೂಗಲ್ ಮ್ಯಾಪ್ ಬಳಸದವರಿಲ್ಲ. ಹೊಸ ಊರಿಗೆ, ಹೊಸ ಜಾಗಕ್ಕೆ, ರೆಸ್ಟೋರೆಂಟ್ ಹುಡುಕಲು, ಅಡ್ರೆಸ್ ಹುಡುಕಲು ಹೀಗೆ ಪ್ರತಿಯೊಂದಕ್ಕೂ ಗೂಗಲ್ ಮ್ಯಾಪ್ ಮೇಲೆ ಡಿಪೆಂಡ್ ಆಗಿದ್ದಾರೆ. ಡೆಲಿವರಿ ಹುಡುಗರಿಂದ ಹಿಡಿದು ಪ್ರವಾಸಿಗರವರೆಗೂ ಎಲ್ಲರೂ ಬಳಸುತ್ತಾರೆ.
ಆದರೆ, ಇದೇ ಗೂಗಲ್ ಮ್ಯಾಪ್ ಹಲವರಿಗೆ ಸಂಕಷ್ಟವನ್ನೂ ತಂದೊಡ್ಡಿದೆ. ಹೌದು..ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದ ವಿದೇಶಿ ಮಹಿಳೆ ಗೂಗಲ್ ಮ್ಯಾಪ್' ಸಂಕಷ್ಟಕ್ಕೆ ಸಿಲುಕಿ, ಕಗ್ಗತ್ತಲಲ್ಲಿ ಭಯಭೀತರಾಗಿದ್ದರು. ಈ ವೇಳೆ ರಾಪಿಡೊ ಚಾಲಕಿಯೊಬ್ಬರು ಅವರಿಗೆ ಸಮಾಧಾನ ಹೇಳಿ, ಅವರಿದ್ದ ಹೋಟೆಲ್'ಗೆ ಡ್ರಾಪ್ ಮಾಡಿದ್ದು, ಈ ಮಾನವೀಯತೆಗೆ ಎಲ್ಲೆಡೆ ಶ್ಲಾಘನೆಗಳು ವ್ಯಕ್ತವಾಗುತ್ತಿವೆ.
ಈ ಘಟನೆ ರಾತ್ರಿ ಸುಮಾರು 10 ಗಂಟೆ ವೇಳೆ ನಡೆದಿದ್ದು, ಗೂಗಲ್ ಮ್ಯಾಪ್ಸ್ ವಿಫಲವಾದ ಕಾರಣ ವಿದೇಶಿ ಮಹಿಳೆ ಬೀಚ್ ಬಳಿ ದಾರಿ ತಪ್ಪಿದ್ದಾಳೆ.
ಒಂಟಿಯಾಗಿದ್ದ ಆಕೆ ಭಯಭೀತಳಾಗಿದ್ದು, ಈ ವೇಳೆ ರ್ಯಾಪಿಡೊ ಚಾಲಕಿ ಸಿಂಧು ಕುಮಾರಿ ಮಹಿಳೆಯನ್ನು ಗಮನಿಸಿ ನೆರವಿಗೆ ಮುಂದಾಗಿದ್ದಾರೆ. ಆಕೆಗೆ ಧೈರ್ಯ ತುಂಬಿದ ಅವರು, ಹೋಟೆಲ್'ಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ, ಹೋಟೆಲ್ ತಲುಪಿದ ನಂತರ ವಿದೇಶಿ ಮಹಿಳೆ ಸಿಂಧು ಕುಮಾರಿಯನ್ನು ಅಪ್ಪಿಕೊಂಡು ಕೃತಜ್ಞತೆ ವ್ಯಕ್ತಪಡಿಸುವ ದೃಶ್ಯಗಳು ಮನಮಿಡಿಯುವಂತಿವೆ. ಸಿಂಧು ತಮ್ಮ ಮಾತಿನಲ್ಲಿ, ಮಹಿಳೆ ಹೇಗೆ ದಾರಿ ತಪ್ಪಿದ್ದರು ಮತ್ತು ತಾವು ಏಕೆ ಸಹಾಯ ಮಾಡಲು ತೀರ್ಮಾನಿಸಿದರು ಎಂಬುದನ್ನು ವಿವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


