ತೆಲಂಗಾಣ: BRS ಗೆ ಕವಿತಾ ಗುಡ್ ಬೈ; 'ಹೊಸ ಪಕ್ಷ' ಸ್ಥಾಪನೆಯ ಘೋಷಣೆ!
ವಿಧಾನಪರಿಷತ್‌ನಲ್ಲಿ ಇಂದು ಕಣ್ಣೀರಿಟ್ಟು ಭಾವುಕರಾಗಿ ಮಾತನಾಡಿದ ಅವರು, ಕಾಂಗ್ರೆಸ್ ಆರೋಪಿಸುತ್ತಿರುವಂತೆಯೇ ಆಸ್ತಿ ವಿವಾದದಿಂದ ಬಿಆರ್ ಎಸ್ ತೊರೆಯುತ್ತಿಲ್ಲ. ಆದರೆ ಸ್ವಾಭಿಮಾನಕ್ಕಾಗಿ ಹೊಸ ಪಕ್ಷ ಸ್ಥಾಪಿಸುತ್ತಿರುವುದಾಗಿ ತಿಳಿಸಿದರು.

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಗೆ ಇನ್ನೂ ಮೂರು ವರ್ಷ ಇರುವಂತೆಯೇ ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಬಿಆರ್‌ಎಸ್ ಮುಖ್ಯಸ್ಥ ಮತ್ತು ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ, MLC ಕೆ. ಕವಿತಾ ಸೋಮವಾರ ಘೋಷಿಸಿದ್ದಾರೆ.
ವಿಧಾನಪರಿಷತ್‌ನಲ್ಲಿ ಇಂದು ಕಣ್ಣೀರಿಟ್ಟು ಭಾವುಕರಾಗಿ ಮಾತನಾಡಿದ ಅವರು, ಕಾಂಗ್ರೆಸ್ ಆರೋಪಿಸುತ್ತಿರುವಂತೆಯೇ ಆಸ್ತಿ ವಿವಾದದಿಂದ ಬಿಆರ್ ಎಸ್ ತೊರೆಯುತ್ತಿಲ್ಲ. ಆದರೆ ಸ್ವಾಭಿಮಾನಕ್ಕಾಗಿ ಹೊಸ ಪಕ್ಷ ಸ್ಥಾಪಿಸುತ್ತಿರುವುದಾಗಿ ತಿಳಿಸಿದರು.
ಕಣ್ಣೀರಿನ ವಿದಾಯದ ಭಾಷಣ ಮಾಡಿದ ಕವಿತಾ, ಔಪಚಾರಿಕವಾಗಿ ಸದನಕ್ಕೆ ರಾಜೀನಾಮೆ ನೀಡಿ ಬಿಆರ್‌ಎಸ್‌ನಿಂದ ಬೇರ್ಪಟ್ಟರು. 2006 ರಲ್ಲಿ ಕೆಸಿಆರ್ ಮತ್ತು ಪ್ರೊಫೆಸರ್ ಜಯಶಂಕರ್ ಅವರಿಂದ ಪ್ರೇರಿತರಾಗಿ ತೆಲಂಗಾಣ ಚಳವಳಿಗೆ ಸೇರಿದಾಗಿನಿಂದ ಅವರ ರಾಜಕೀಯ ಪ್ರಯಾಣವನ್ನು ವಿವರಿಸುತ್ತಾ, ತೆಲಂಗಾಣ ಹೋರಾಟದಲ್ಲಿ ತಮ್ಮ ಸ್ವತಂತ್ರ ಕೆಲಸವನ್ನು ಒತ್ತಿ ಹೇಳಿದರು.
ತದನಂತರ ತೆಲಂಗಾಣ ಹುತಾತ್ಮರ ಸ್ಮಾರಕದಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಜಾಗೃತಿ ರಾಜಕೀಯ ಪಕ್ಷವಾಗಿ ಬೆಳೆಯುತ್ತಿದೆ. ತೆಲಂಗಾಣದ ಜನರಿಗಾಗಿ ನಿಂತು ಹೋರಾಡಿದರೆ, ಅದು ಲೆಕ್ಕ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತದೆ.ಎಡ ಪಕ್ಷದ ಸಹೋದರರು ಮತ್ತು ಪ್ರಜಾಸತ್ತಾತ್ಮಕ ನಿಯಮಗಳಲ್ಲಿ ಕಾರ್ಯನಿರ್ವಹಿಸುವ ಪಕ್ಷ ಬಯಸುವವರು ನನ್ನನ್ನು ಬೆಂಬಲಿಸಿ ಎಂದು ಹೇಳಿದರು.
ಲಕ್ಷ ಗಟ್ಟಲೆ ತೆಲಂಗಾಣ ಕಾರ್ಯಕರ್ತರು ಬಿಆರ್ ಎಸ್ ನಲ್ಲಿ ಗೌರವಯುತ ಸ್ಥಾನ ಪಡೆದಿಲ್ಲ. ಸಾವಿರಾರು ಹುದ್ದೆಗಳು ಅಸ್ತಿತ್ವದಲ್ಲಿವೆ, ಆದರೆ ಅವರಿಗೆ ಯಾವುದೇ ಸ್ಥಾನಗಳು ಸಿಕ್ಕಿಲ್ಲ. ಚಳವಳಿಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ಯಾವುದೇ ಅವಕಾಶಗಳು ಸಿಕಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



