ದೇಶ

IPL 2026: 9.20 ಕೋಟಿ ರೂ ಕೊಟ್ಟು ಬಾಂಗ್ಲಾದೇಶಿ ಕ್ರಿಕೆಟರ್​ ಖರೀದಿ: ಶಾರುಖ್ ಖಾನ್ ವಿರುದ್ಧ ಜಗದ್ಗುರು ರಾಮಭದ್ರಾಚಾರ್ಯ ಕಿಡಿ

ಐಪಿಎಲ್ 2026ಕ್ಕಾಗಿ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಶಾರುಖ್ ಖಾನ್ ಅವರು 9.20 ಕೋಟಿ ಕೊಟ್ಟು ಖರೀದಿಸಿದ್ದಾರೆ.

IPL 2026: 9.20 ಕೋಟಿ ರೂ ಕೊಟ್ಟು ಬಾಂಗ್ಲಾದೇಶಿ ಕ್ರಿಕೆಟರ್​ ಖರೀದಿ: ಶಾರುಖ್ ಖಾನ್ ವಿರುದ್ಧ ಜಗದ್ಗುರು ರಾಮಭದ್ರಾಚಾರ್ಯ ಕಿಡಿ
ಸಂಗ್ರಹ ಚಿತ್ರ
Published On :

ನವದೆಹಲಿ: ಐಪಿಎಲ್‌ ತಂಡವಾದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಕ್ಕೆ ನೆರೆಯ ಬಾಂಗ್ಲಾದೇಶದ ಆಟಗಾರನನ್ನು ಖರೀದಿಸಿರುವ ಬಾಲಿವುಡ್ ನಟ ಶಾರುಖ್ ಖಾನ್ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಐಪಿಎಲ್ 2026ಕ್ಕಾಗಿ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಶಾರುಖ್ ಖಾನ್ ಅವರು 9.20 ಕೋಟಿ ಕೊಟ್ಟು ಖರೀದಿಸಿದ್ದಾರೆ.

ಶಾರುಖ್ ಶಾನ್ ಅವರ ಈ ನಿರ್ಧಾರಕ್ಕೆ ಹಿಂದೂ ಧರ್ಮಗುರು ಜಗದ್ಗುರು ರಾಮಭದ್ರಾಚಾರ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಿರ್ಧಾರ "ತುಂಬಾ ದುರದೃಷ್ಟಕರ". ಶಾರುಖ್ ಖಾನ್ ಅವರ ದೃಷ್ಟಿಕೋನವು "ಯಾವಾಗಲೂ ದೇಶದ್ರೋಹಿಯಂತೆ" ಇದೆ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ರಾಮಭದ್ರಾಚಾರ್ಯ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಭಾರತ ಸರ್ಕಾರವು ಇಂತಹ ಘಟನೆಗಳನ್ನು ಸಹಿಸಬಾರದು. ನೆರೆಯ ದೇಶದಲ್ಲಿ ವಾಸಿಸುವ ಹಿಂದೂಗಳ ಹಿತಾಸಕ್ತಿಗಳನ್ನು ಕಾಪಾಡಲು ಈ ವಿಷಯದ ಬಗ್ಗೆ ದಿಟ್ಟ ನಿಲುವನ್ನು ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಬಾಂಗ್ಲಾದೇಶ ಸರ್ಕಾರ ಹಾಗೂ ಅಲ್ಲಿನ ಜನರು ದೇಶ ರಚನೆಯಲ್ಲಿ ಹಿಂದೂ ವಹಿಸಿದ ಪಾತ್ರವನ್ನು ಸ್ಮರಿಸಬೇಕು. ಹಿಂದೂಗಳ ಬೆಂಬಲದಿಂದಲೇ ಬಾಂಗ್ಲಾದೇಶ ಅಸ್ತಿತ್ವಕ್ಕೆ ಬಂದಿತು. ಈ ಸತ್ಯವನ್ನು ಮರೆಯಬಾರದು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.