ಖಯಾಮತ್ ಬರುವುದಿಲ್ಲ, ಬಾಬ್ರಿ ಮಸೀದಿ ಪುನರ್ ನಿರ್ಮಾಣ ಸಾಧ್ಯವಿಲ್ಲ: ಯುಪಿ ಸಿಎಂ ಯೋಗಿ
ಇಂದು ಬಾರಾಬಂಕಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆದಿತ್ಯನಾಥ್, ನಾವು ರಾಮಲಲ್ಲಾಗೆ ಅದೇ ಸ್ಥಳದಲ್ಲಿ ಮಂದಿರ ನಿರ್ಮಿಸುತ್ತೇವೆ’ ಎಂದು ಹೇಳಿದ್ದೇವು ಮತ್ತು ಅದನ್ನೇ ಮಾಡಿದ್ದೇವೆ ಎಂದರು.

ಲಖನೌ: 'ಖಯಾಮತ್' ದಿನ ಎಂದಿಗೂ ಬರುವುದಿಲ್ಲ. ಆದ್ದರಿಂದ ಬಾಬರಿ ಮಸೀದಿಯನ್ನು ಪುನರ್ ನಿರ್ಮಾಣ ಮಾಡಲು ಎಂದಿಗೂ ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ಪ್ರತಿಪಾದಿಸಿದ್ದಾರೆ.
ಇಂದು ಬಾರಾಬಂಕಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆದಿತ್ಯನಾಥ್, ನಾವು ರಾಮಲಲ್ಲಾಗೆ ಅದೇ ಸ್ಥಳದಲ್ಲಿ ಮಂದಿರ ನಿರ್ಮಿಸುತ್ತೇವೆ’ ಎಂದು ಹೇಳಿದ್ದೇವು ಮತ್ತು ಅದನ್ನೇ ಮಾಡಿದ್ದೇವೆ ಎಂದು ಅಯೋಧ್ಯೆಯ ರಾಮ ಮಂದಿರ ನಿರ್ಮಾಣವನ್ನು ಉಲ್ಲೇಖಿಸಿದರು.
ಪ್ರೇಕ್ಷಕರು "ಜೈ ಶ್ರೀ ರಾಮ್" ಎಂದು ಜಪಿಸುವ ಮೂಲಕ ಉತ್ತರಿಸಿದರು. "'ಖಯಾಮತ್'(ತೀರ್ಪಿನ ದಿನ) ದಿನ ಎಂದಿಗೂ ಬರುವುದಿಲ್ಲ, ಆದ್ದರಿಂದ ಬಾಬರಿ ರಚನೆಯನ್ನು ಎಂದಿಗೂ ಪುನರ್ನಿರ್ಮಿಸಲಾಗುವುದಿಲ್ಲ. 'ಖಯಾಮತ್' ದಿನದ ಕನಸು ಕಾಣುತ್ತಿರುವವರು ಕೊಳೆಯುತ್ತಾರೆ, ಆ ದಿನ ಬರುತ್ತದೆ" ಎಂದು ಆದಿತ್ಯನಾಥ್ ಹೇಳಿದರು.
ಇಂದು ಮತ್ತೆ ಹೇಳುತ್ತಿದ್ದೇನೆ. ಕಯಾಮತ್ ದಿನ ಎಂದಿಗೂ ಬರುವುದಿಲ್ಲ. ಬಾಬ್ರಿ ಮಸೀದಿ ಪುನರ್ ನಿರ್ಮಾಣವೂ ಎಂದಿಗೂ ನಡೆಯುವುದಿಲ್ಲ. ಅದನ್ನು ಕನಸು ಕಾಣುವವರು ಭ್ರಮೆಯಲ್ಲಿ ಬದುಕುತ್ತಿದ್ದಾರೆ ಎಂದರು.
ಈ ದೇಶದ ಕಾನೂನಿನ ಪ್ರಕಾರ ಬದುಕಿ. ಕಾನೂನು ಪಾಲಿಸಿದರೆ ಲಾಭ, ಉಲ್ಲಂಘಿಸಿದರೆ ಶಿಕ್ಷೆ ಖಚಿತ. ಕಾನೂನು ಉಲ್ಲಂಘಿಸಿ ಸ್ವರ್ಗ ಸಿಗುತ್ತದೆ ಎಂದು ಕನಸು ಕಾಣುವುದು ಭ್ರಮೆ ಎಂದು ಎಚ್ಚರಿಸಿದರು.
ರಾಮ ಮಂದಿರ ಚಳವಳಿಯನ್ನು ಭಾರತದ ಸಂಸ್ಕೃತಿ ಮತ್ತು ಸನಾತನ ಪರಂಪರೆಯೊಂದಿಗೆ ಸಂಪರ್ಕಿಸಿದ ಯೋಗಿ, ಕಳೆದ ನವೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಗೆ ಭೇಟಿ ನೀಡಿ ರಾಮ ಮಂದಿರದಲ್ಲಿ ಕೇಸರಿ ಧ್ವಜಾರೋಹಣ ಮಾಡಿದ್ದನ್ನು ನೆನಪಿಸಿದರು. ಕೇಸರಿ ಧ್ವಜವು ಭಾರತದ ಹೆಮ್ಮೆ ಮತ್ತು ವೈಭವಯುತ ಪರಂಪರೆಯ ಪ್ರತೀಕವಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



