ಬಿಹಾರ: ಪೋಷಕರು ಬೈದಿದ್ದಕ್ಕೆ ನಾಲ್ವರು ಹುಡುಗಿಯರು ಆತ್ಮಹತ್ಯೆಗೆ ಶರಣು!
ಹಸ್ಪುರ ಪೊಲೀಸ್ ಠಾಣೆ ಪ್ರದೇಶದ ದಲಿತರ ಓಣಿಯಲ್ಲಿ 10 ರಿಂದ 14 ವರ್ಷ ವಯಸ್ಸಿನ ಐದು ಹುಡುಗಿಯರು ವಿಷ ಸೇವಿಸಿದ್ದರು ಎಂದು ವರದಿಯಾಗಿದ್ದು, ಅವರಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಔರಂಗಾಬಾದ್: ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಹುಡುಗರೊಂದಿಗೆ ಹೆಚ್ಚು ಬೆರೆಯಬೇಡಿ ಎಂದು ಪೋಷಕರು ಬೈದಿದ್ದಕ್ಕೆ ನೊಂದ ನಾಲ್ವರು ಹುಡುಗಿಯರು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಜನವರಿ 29 ರಂದು ಹಸ್ಪುರ ಪೊಲೀಸ್ ಠಾಣೆ ಪ್ರದೇಶದ ದಲಿತರ ಓಣಿಯಲ್ಲಿ 10 ರಿಂದ 14 ವರ್ಷ ವಯಸ್ಸಿನ ಐದು ಹುಡುಗಿಯರು ವಿಷ ಸೇವಿಸಿದ್ದರು ಎಂದು ವರದಿಯಾಗಿದ್ದು, ಅವರಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯಿಲ್ಲದೆ ಅದೇ ದಿನ ಅವರನ್ನು ಅಂತ್ಯಕ್ರಿಯೆ ಮಾಡಲಾಯಿತು ಮತ್ತು ಸ್ಥಳೀಯ ಮಾಧ್ಯಮಗಳು ಅದನ್ನು ವರದಿ ಮಾಡಿದ ನಂತರ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಔರಂಗಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಅಂಬರೀಶ್ ರಾಹುಲ್, "ಬದುಕುಳಿದ ಹುಡುಗಿಯ ಹೇಳಿಕೆಯ ಪ್ರಕಾರ, ಹುಡುಗರ ಗುಂಪಿನೊಂದಿಗೆ ಹೆಚ್ಚು ಬೆರೆತಿದ್ದಕ್ಕಾಗಿ ಅವರ ಪೋಷಕರು ಗದರಿಸಿದ್ದಾರೆ. ಇದರಿಂದ ನೊಂದ ಬಾಲಕಿಯರು ವಿಷಕಾರಿ ವಸ್ತು ಸೇವಿಸಲು ನಿರ್ಧರಿಸಿದ್ದರು" ಎಂದು ತಿಳಿಸಿದ್ದಾರೆ.
ಒಂದು ಹೊಲದಲ್ಲಿ ಐವರು ಒಟ್ಟಿಗೆ ವಿಷ ಸೇವಿಸಿದ್ದಾಗಿ ರಾಹುಲ್ ಅವರು ಮಾಹಿತಿ ನೀಡಿದ್ದಾರೆ.
ವಿಷ ಸೇವಿಸಿ ನಾಲ್ವರು ಹುಡುಗಿಯರು ಸಾವನ್ನಪ್ಪಿದ್ದು, ಬದುಕುಳಿದ ಐದನೇ ಹುಡುಗಿ ಮನೆಗೆ ತೆರಳಿ ಘಟನೆಯ ಬಗ್ಗೆ ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದ್ದಾಳೆ.
ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈಗ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
"ಪ್ರಕರಣದ ತನಿಖೆ ಇನ್ನೂ ಮುಂದುವರೆದಿದೆ. ಇದೀಗ, ಬದುಕುಳಿದ ಹುಡುಗಿಯ ಹೇಳಿಕೆ ಮಾತ್ರ ನಮಗೆ ಸಿಕ್ಕಿದೆ" ಎಂದು ಪಿಟಿಐ ಜೊತೆ ಮಾತನಾಡಿದ ದೌದ್‌ನಗರ ಎಸ್‌ಡಿಪಿಒ ಅಶೋಕ್ ಕುಮಾರ್ ದಾಸ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



