ಲೋನಾವಾಲ: ಸೋಲೋ ಟ್ರಿಪ್ ಹೋಗಿದ್ದ ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆ!
ಮೃತ ವಿದ್ಯಾರ್ಥಿನಿಯನ್ನು ನವಿ ಮುಂಬೈ ನಿವಾಸಿ ಶ್ರೀಯಾ ಪತಿ ಎಂದು ಗುರುತಿಸಲಾಗಿದ್ದು, ಥಾಣೆ ಜಿಲ್ಲೆಯ ಕಲ್ಯಾಣ್ ಪಟ್ಟಣದ ಖಾಸಗಿ ಕಾಲೇಜಿನಲ್ಲಿ ಕಾನೂನು ಓದುತ್ತಿದ್ದಳು.

ಲೋನಾವಾಲ: ಮಹಾರಾಷ್ಟ್ರದ ಲೋನಾವಾಲ ಗಿರಿಧಾಮದಲ್ಲಿ ಮನೆಯಿಂದ ಸೋಲೋ ಟ್ರಿಪ್ ಹೋಗಿದ್ದ 19 ವರ್ಷದ ಕಾನೂನು ವಿದ್ಯಾರ್ಥಿನಿ ಕಮರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿನಿಯನ್ನು ನವಿ ಮುಂಬೈ ನಿವಾಸಿ ಶ್ರೀಯಾ ಪತಿ ಎಂದು ಗುರುತಿಸಲಾಗಿದ್ದು, ಥಾಣೆ ಜಿಲ್ಲೆಯ ಕಲ್ಯಾಣ್ ಪಟ್ಟಣದ ಖಾಸಗಿ ಕಾಲೇಜಿನಲ್ಲಿ ಕಾನೂನು ಓದುತ್ತಿದ್ದಳು.
ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣವಾಗಿದ್ದರೂ, ಸ್ಥಳದಿಂದ ವಶಪಡಿಸಿಕೊಳ್ಳಲಾದ ಅವರ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ಪರಿಶೀಲಿಸಿದ ನಂತರ ಸಾವಿಗೆ ನಿಖರವಾದ ಕಾರಣ ತಿಳಿದುಬರುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜನವರಿ 30 ರಂದು ಬೆಳಗ್ಗೆ ಮನೆಯಿಂದ ಒಬ್ಬಳೇ ಪ್ರವಾಸ ಹೊರಟಿದ್ದ ವಿದ್ಯಾರ್ಥಿನಿ, ತಾನು ಸೋಲೋ ಟ್ರಿಪ್ ಹೋಗುತ್ತಿರುವುದಾಗಿ ಪೋಷಕರಿಗೆ ತಿಳಿಸಿದ್ದಳು ಮತ್ತು ಸಂಜೆಯೊಳಗೆ ವಾಪಸ್ ಬರುವುದಾಗಿ ಹೇಳಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಲೋನಾವಾಲ ಬಳಿಯ ಜನಪ್ರಿಯ ವೀಕ್ಷಣಾ ತಾಣವಾದ ಡ್ಯೂಕ್ಸ್ ನೋಸ್‌ಗೆ ಭೇಟಿ ನೀಡಿದ್ದ ಯುವತಿ, ನಂತರ ಮತ್ತೊಂದು ಪ್ರವಾಸಿ ತಾಣವಾದ ಟೈಗರ್ ಪಾಯಿಂಟ್‌ಗೆ ಹೋಗಿದ್ದಳು. ಅಲ್ಲಿಂದ ಯುವತಿ ಕಮರಿಗೆ ಹಾರಿದ್ದಾಳೆ ಎಂದು ಹೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟೈಗರ್ ಪಾಯಿಂಟ್‌ನಲ್ಲಿ ಟೀ ಸ್ಟಾಲ್ ನಡೆಸುತ್ತಿರುವ ಸ್ಥಳೀಯ ನಿವಾಸಿ ವಿಜಯ್ ಭಲೇರಾವ್ ಅವರ ಅಂಗಡಿಯ ಹಿಂದೆ ಅವರ ಐಡಿ ಕಾರ್ಡ್ ಇರುವ ಬ್ಯಾಗ್ ಪತ್ತೆಯಾಗಿದೆ. ಐಡಿ ಕಾರ್ಡ್ ನೋಡಿ ಅವರು ಆಕೆಯ ಪೋಷಕರನ್ನು ಸಂಪರ್ಕಿಸಿದ್ದಾರೆ. ಬಳಿಕ ಪೋಷಕರು ಸ್ಥಳಕ್ಕೆ ಧಾವಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಂತರ ಸ್ಥಳೀಯ ರಕ್ಷಣಾ ತಂಡಗಳ ಸಹಾಯದಿಂದ ಪೊಲೀಸರು ಹುಡುಕಾಟ ನಡೆಸಿ, ಡ್ರೋನ್ ಸಹಾಯದಿಂದ ಕಮರಿಯಲ್ಲಿ ಸುಮಾರು 300 ಅಡಿ ಆಳದಲ್ಲಿ ಆಕೆಯ ದೇಹವನ್ನು ಪತ್ತೆ ಮಾಡಿ, ಜನವರಿ 31 ರಂದು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಈ ಸಂಬಂಧ ಲೋನಾವಾಲ ಗ್ರಾಮೀಣ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



