ದೇಶ

ಭೀಕರ: 15 ನಿಮಿಷಗಳ ಕಾಲ ಮಹಿಳೆಗೆ ಲೈಂಗಿಕ ಕಿರುಕುಳ, ಹಲ್ಲೆ.. ದುಷ್ಕರ್ಮಿ ಕೃತ್ಯ ಕ್ಯಾಮೆರಾದಲ್ಲಿ ಸೆರೆ! Video

ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿ ಜನವರಿ 31 ರ ಮುಂಜಾನೆ ನಡೆದಿದ್ದು, ರಸ್ತೆಯಲ್ಲಿ ಆಗಮಿಸಿದ ಮಹಿಳೆ ಎದುರಿಗೆ ಬಂದ ದುಷ್ಕರ್ಮಿ ಆಕೆಯನ್ನು ಹಿಡಿದು ಲೈಂಗಿಕ ಕಿರುಕುಳ ನೀಡಿದ್ದಾನೆ.

ಭೀಕರ: 15 ನಿಮಿಷಗಳ ಕಾಲ ಮಹಿಳೆಗೆ ಲೈಂಗಿಕ ಕಿರುಕುಳ, ಹಲ್ಲೆ.. ದುಷ್ಕರ್ಮಿ ಕೃತ್ಯ ಕ್ಯಾಮೆರಾದಲ್ಲಿ ಸೆರೆ! Video
ನಡುರಸ್ತೆಯಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ
Published On :

ಮುಂಬೈ: ಮಹಾರಾಷ್ಟ್ರದಲ್ಲಿ ಮತ್ತೊಂದು ಭೀಕರ ಘಟನೆ ನಡೆದಿದ್ದು, ಬೆಳಗಿನ ಜಾವ ಮಹಿಳೆಯೊಬ್ಬರಿಗೆ ದುಷ್ಕರ್ಮಿಯೋರ್ವ ಲೈಂಗಿಕ ಕಿರುಕುಳ ನೀಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿ ಜನವರಿ 31 ರ ಮುಂಜಾನೆ ನಡೆದಿದ್ದು, ರಸ್ತೆಯಲ್ಲಿ ಆಗಮಿಸಿದ ಮಹಿಳೆ ಎದುರಿಗೆ ಬಂದ ದುಷ್ಕರ್ಮಿ ಆಕೆಯನ್ನು ಹಿಡಿದು ಲೈಂಗಿಕ ಕಿರುಕುಳ ನೀಡಿದ್ದಾನೆ.

ಸಮೀಪದ ಮನೆಗೆ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸುಮಾರು 15 ನಿಮಿಷಗಳ ಕಾಲ ಮಹಿಳೆಯನ್ನು ದುಷ್ಕರ್ಮಿ ಕಾಡಿದ್ದಾನೆ.

ಅಕೆಯನ್ನು ಬಲವಂತವಾಗಿ ತಬ್ಬಿಕೊಂಡ ದುಷ್ಕರ್ಮಿ ಆಕೆಯ ದೇಹವನ್ನು ಬಲವಂತವಾಗಿ ಹಿಡಿದು ಅಪ್ಪಿಕೊಂಡು ಎಳೆದಾಡಿ ಕಿರುಕುಳ ನೀಡಿದ್ದಾನೆ. ಮಹಿಳೆ ದುಷ್ಕರ್ಮಿಯಿಂದ ತಪ್ಪಿಸಿಕೊಳ್ಳಲು ನಾನಾ ಪ್ರಯತ್ನ ಮಾಡಿದ್ದು, ಆದರೂ ಆಕೆಯನ್ನು ಹಿಡಿದೆಳೆದ ದುಷ್ಕರ್ಮಿ ಲೈಂಗಿಕ ಕಿರುಕುಳ ನೀಡಿದ್ದಾನೆ.

ಆಗಿದ್ದೇನು?

ಜನವರಿ 31ರ ರಾತ್ರಿ ಮಹಿಳೆ ರಸ್ತೆಯ ಮೂಲಕ ಹೋಗುತ್ತಿದ್ದಾಗ, ಒಬ್ಬ ಯುವಕ ಅವಳನ್ನು ದಾರಿಯಲ್ಲಿಅಡ್ಡಗಟ್ಟಿದ್ದಾನೆ. ಈ ವೇಳೆ ತಾನು ಮಾತನಾಡುತ್ತಿದ್ದ ಫೋನ್ ಅನ್ನು ಜೇಬಿನಲ್ಲಿಟ್ಟುಕೊಂಡು ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸಲು ಪ್ರಾರಂಭಿಸಿದ್ದಾನೆ.

ಈ ವೇಳೆ ನೋಡ ನೋಡುತ್ತಲೇ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ಯಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಕಿರುಚುಕೊಂಡಿದ್ದು, ಆತನಿಂದ ಬಿಡಿಸಿಕೊಳ್ಳಲು ಯತ್ನಿಸಿದ್ದಾಳೆ. ಇವರಿಬ್ಬರ ನಡುವಿನ ಈ ಸಂಘರ್ಷ ಸುಮಾರು 15 ನಿಮಿಷಗಳ ನಡೆದಿದೆ.

ಈ ವೇಳೆ ದುಷ್ಕರ್ಮಿ ಆಕೆಯನ್ನು ಅಲ್ಲಿಯೇ ಬಿಟ್ಟು ತನ್ನ ಫೋನ್ ನಿಂದ ಮತ್ಯಾರಿಗೋ ಕರೆ ಮಾಡುತ್ತಾನೆ. ಈ ವೇಳೆ ಮಹಿಳೆ ಆತನನ್ನು ಹಿಂಬಾಲಿಸಿ ಆತನನ್ನು ಹಿಡಿಯಲೆತ್ನಿಸಿದ್ದಾಳೆ. ಈ ವೇಳೆ ದುಷ್ಕರ್ಮಿ ಸಂತ್ರಸ್ಥೆಗೆ ಥಳಿಸುತ್ತಾನೆ. ಈ ವೇಳೆ ಮಹಿಳೆ ಅಳುತ್ತಲೇ ಆತನನ್ನು ಎದುರಿಸುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದೀಗ ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದ್ದು, ಈ ವಿಡಿಯೋ ಆಧಾರವಾಗಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ದುಷ್ಕರ್ಮಿ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.