ಶಶಿ ತರೂರ್ ಪುತ್ರ ಸೇರಿ 500 ಮಂದಿ ಕಿತ್ತೊಗೆದ ವಾಷಿಂಗ್ಟನ್ ಪೋಸ್ಟ್: 'ನನ್ನ ಹೃದಯ ಒಡೆದಿದೆ' ಎಂದ ಇಶಾನ್!
ಅಮೆರಿಕದ ಖ್ಯಾತ ದಿನಪತ್ರಿಕೆ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಹಿರಿಯ ಅಂತಾರಾಷ್ಟ್ರೀಯ ವ್ಯವಹಾರಗಳ ಅಂಕಣಕಾರರಾಗಿದ್ದ ಶಶಿ ತರೂರ್ ಅವರ ಪುತ್ರ ಇಶಾನ್ ತರೂರ್ ಅವರನ್ನು, ಪತ್ರಿಕೆಯ ಆಡಳಿತ ಮಂಡಳಿ ಕೆಲಸದಿಂದ ವಜಾಗೊಳಿಸಿದೆ.

ವಾಷಿಂಗ್ಟನ್ ಡಿಸಿ: ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಒಡೆತನದ ವಾಷಿಂಗ್ಟನ್ ಪೋಸ್ಟ್, ಇತ್ತೀಚಿಗೆ ಸಂಸ್ಥೆಯಲ್ಲಿ ಗಣನೀಯ ಪ್ರಮಾಣದಲ್ಲಿ ಉದ್ಯೋಗ ಕಡಿತ ಪ್ರಕ್ರಿಯೆಯನ್ನು ಆರಂಭಿಸಿದೆ.
ಸ್ಥಳೀಯ ವರದಿಗಾರರು, ಕ್ರೀಡಾ ವಿಭಾಗ, ವಿದೇಶಿ ಬ್ಯುರೋಗಳು ಮತ್ತು ವ್ಯಾಪಾರ ವಿಭಾಗದ ಅನೇಕ ಪತ್ರಕರ್ತರನ್ನು ವಾಷಿಂಗ್ಟನ್ ಪೋಸ್ಟ್ ಕೆಲಸದಿಂದ ವಜಾಗೊಳಿಸಿದೆ.
ಅಮೆರಿಕದ ಖ್ಯಾತ ದಿನಪತ್ರಿಕೆ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಹಿರಿಯ ಅಂತಾರಾಷ್ಟ್ರೀಯ ವ್ಯವಹಾರಗಳ ಅಂಕಣಕಾರರಾಗಿದ್ದ ಶಶಿ ತರೂರ್ ಅವರ ಪುತ್ರ ಇಶಾನ್ ತರೂರ್ ಅವರನ್ನು, ಪತ್ರಿಕೆಯ ಆಡಳಿತ ಮಂಡಳಿ ಕೆಲಸದಿಂದ ವಜಾಗೊಳಿಸಿದೆ.
ವಾಷಿಂಗ್ಟನ್ ಪೋಸ್ಟ್‌ನ ಈ ನಿರ್ಧಾರವನ್ನು ಅನೇಕ ಮಾಜಿ ಸಿಬ್ಬಂದಿಗಳು "ಜಾಗತಿಕ ಪತ್ರಿಕೋದ್ಯಮಕ್ಕೆ ಕರಾಳ ದಿನ" ಎಂದು ಬಣ್ಣಿಸಿದ್ದಾರೆ. ಪ್ರತಿಷ್ಠಿತ ದಿನಪತ್ರಿಕೆಯೊಂದು ಈ ರೀತಿ ಏಕಾಏಕಿ ತನ್ನ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ಈ ಸಂಬಂಧ ತಮ್ಮ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿರುವ ಇಶಾನ್ ತರೂರ್, "ನನ್ನ ಹೃದಯ ಒಡೆದುಹೋಗಿದೆ" ಎಂದು ಭಾವುಕರಾಗಿ ಹೇಳಿದ್ದಾರೆ. ಇಶಾನ್ ತರೂರ್ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಹಿರಿಯ ಅಂಕಣಕಾರರಾಗಿ ಖ್ಯಾತಿ ಗಳಿಸಿದ್ದರು. ಇತ್ತೀಚಿಗೆ ಅಮೆರಿಕದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಂದೆ ಶಶಿ ತರೂರ್‌ಗೆ ಇಶಾನ್ ತರೂರ್ ಪ್ರಶ್ನೆ ಕೇಳಿದ್ದು ಭಾರೀ ಸುದ್ದಿಯಾಗಿತ್ತು.
ಇಂದು ನನ್ನನ್ನು ವಾಷಿಂಗ್ಟನ್ ಪೋಸ್ಟ್‌ನಿಂದ ವಜಾಗೊಳಿಸಲಾಗಿದೆ. ಜೊತೆಗೆ ಹೆಚ್ಚಿನ ಅಂತಾರಾಷ್ಟ್ರೀಯ ಸಿಬ್ಬಂದಿ ಮತ್ತು ಇತರ ಅನೇಕ ಸಹೋದ್ಯೋಗಿಗಳು ಕೂಡ ಕೆಲಸ ಕಳೆದುಕೊಂಡಿದ್ದಾರೆ. ಸುಮಾರು 12 ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡಿದ್ದ ನಾವೆಲ್ಲಾ ಈಗ ಭಾರವಾದ ಮನಸ್ಸಿನಿಂದ ಕಚೇರಿಯಿಂದ ಹೊರಗೆ ಹೆಜ್ಜೆ ಹಾಕಿದ್ದೇವೆ ಎಂದು ಇಶಾನ್ ತರೂರ್ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.
ಓದುಗರು ಜಗತ್ತನ್ನು ಮತ್ತು ಅದರಲ್ಲಿ ಅಮೆರಿಕದ ಸ್ಥಾನವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನೆರವಾಗಲು, ನಾನು ಜನವರಿ 2017ರಲ್ಲಿ ವರ್ಲ್ಡ್‌ವ್ಯೂ ಅಂಕಣವನ್ನು ಪ್ರಾರಂಭಿಸಿದೆ. ವಾರಕ್ಕೆ ಹಲವಾರು ಬಾರಿ ಈ ಅಂಕಣವನ್ನು ಪತ್ರಿಕೆಯಲ್ಲಿ ಮತ್ತು ಆನ್‌ಲೈನ್‌ನಲ್ಲಿ ಓದುತ್ತಿದ್ದ ನನ್ನ ಅರ್ಧ ಮಿಲಿಯನ್ ನಿಷ್ಠಾವಂತ ಚಂದಾದಾರರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಇಶಾನ್ ತರೂರ್ ಹೇಳಿದ್ದಾರೆ.
ಮತ್ತೊಂದು ಎಕ್ಸ್ ಪೋಸ್ಟ್‌ನಲ್ಲಿ ಇಶಾನ್ ತರೂರ್ ಅವರು ತಮ್ಮ ಸುದ್ದಿ ಕೋಣೆಯ ಚಿತ್ರವನ್ನು ಹಂಚಿಕೊಂಡಿದ್ದು, "ಡೆಮಾಕ್ರಸಿ ಡೈಸ್ ಇನ್ ಡಾರ್ಕ್‌ನೆಸ್" (ಪ್ರಜಾಪ್ರಭುತ್ವ ಕತ್ತಲಲ್ಲಿ ಸತ್ತಿದೆ) ಎಂದು ಬರೆದಿರುವ ಪೋಸ್ಟರ್‌ನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗೆ ಇಶಾನ್ ತರೂರ್ ಅವರು "ಎ ಬ್ಯಾಡ್ ಡೇ" (ಕೆಟ್ಟ ದಿನ) ಎಂಬ ಕರಾಳ ಶೀರ್ಷಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



