ದೇಶ

ಪಾರ್ಟಿಗೆ ತರುತ್ತಿದ್ದ ಗ್ಯಾಸ್ ಬಲೂನ್ ಲಿಫ್ಟ್ ನಲ್ಲಿ ಸ್ಫೋಟ, ಇಬ್ಬರಿಗೆ ಗಾಯ: Video Viral

ಮುಂಬೈನ ಉಪನಗರ ಗೋರೆಗಾಂವ್‌ನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದ್ದು, ಈ ಘಟನೆಯಲ್ಲಿ ಇಬ್ಬರಿಗೆ ಸುಟ್ಟ ಗಾಯಗಳಾಗಿವೆ.

ಪಾರ್ಟಿಗೆ ತರುತ್ತಿದ್ದ ಗ್ಯಾಸ್ ಬಲೂನ್ ಲಿಫ್ಟ್ ನಲ್ಲಿ ಸ್ಫೋಟ, ಇಬ್ಬರಿಗೆ ಗಾಯ: Video Viral
ಲಿಫ್ಟ್ ನಲ್ಲಿ ಗ್ಯಾಸ್ ಬಲೂನ್ ಸ್ಫೋಟ
Published On :

ಮುಂಬೈ: ಪಾರ್ಟಿಗೆ ತಂದಿದ್ದ ಗ್ಯಾಸ್ ಬಲೂನ್ ಗಳು ಸ್ಫೋಟಗೊಂಡ ಅಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದ್ದು, ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಮುಂಬೈನ ಉಪನಗರ ಗೋರೆಗಾಂವ್‌ನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದ್ದು, ಈ ಘಟನೆಯಲ್ಲಿ ಇಬ್ಬರಿಗೆ ಸುಟ್ಟ ಗಾಯಗಳಾಗಿವೆ. ಅಲ್ಲದೆ ಈ ಸ್ಫೋಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವ್ಯಾಪಕ ವೈರಲ್ ಆಗುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಓರ್ವ ಮಹಿಳೆ ಟ್ರಾಲಿ ಬ್ಯಾಗ್ ಎಳೆದುಕೊಂಡು ಲಿಫ್ಟ್ ನೊಳಗೆ ಬರುತ್ತಾರೆ. ಬಳಿಕ ಮತ್ತೋರ್ವ ವ್ಯಕ್ತಿ ಗ್ಯಾಸ್ ತುಂಬಿದ ಬಲೂನ್ ಗಳಿರುವ ಪಾಲಿಥಿನ್ ಕವರ್ ನೊಳಗಿರಿಸಿಕೊಂಡು ತಂದಿದ್ದಾರೆ. ಅವರ ಬೆನ್ನಲ್ಲೇ ಬಾಲಕ ಕೂಡ ಲಿಫ್ಟ್ ಪ್ರವೇಶಿಸುತ್ತಾರೆ.

ಮಹಿಳೆ ಲಿಫ್ಟ್ ಬಟನ್ ಒತ್ತುತ್ತಿದ್ದಂತೆಯೇ ಇತ್ತ ವ್ಯಕ್ತಿ ಹಿಡಿದಿದ್ದ ಗ್ಯಾಸ್ ಬಲೂನ್ ಗಳು ಏಕಾಏಕಿ ಸ್ಫೋಟಗೊಂಡಿದೆ.

ಈ ವೇಳೆ ವ್ಯಕ್ತಿ ಮತ್ತು ಮಹಿಳೆ ಇಬ್ಬರಿಗೂ ಸುಟ್ಟ ಗಾಯಗಳಾಗಿದ್ದು, ಇಬ್ಬರೂ ಲಿಫ್ಟ್ ನಿಂದ ಹೊರಕ್ಕೆ ಜಿಗಿದಿದ್ದಾರೆ. ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಪ್ರಕರಣ ದಾಖಲು, ಪೊಲೀಸ್ ತನಿಖೆ

ಈ ಘಟನೆಯ ವಿಡಿಯೋ ವ್ಯಾಪಕ ವೈರಲ್ ಆಗುತ್ತಲೇ ಪೊಲೀಸರು ಬಲೂನ್ ಮಾರಾಟಗಾರ ಮತ್ತು ಬಲೂನ್ ಆರ್ಡರ್ ಮಾಡಿದ್ದ ನಿವಾಸಿಗಳ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಲೂನ್‌ಗಳನ್ನು ತುಂಬಲು ಅವರು ಯಾವ ರೀತಿಯ ಅನಿಲವನ್ನು ಬಳಸಿದ್ದಾರೆ ಎಂಬುದು ತಿಳಿದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.