ದೇಶ

ಕೇಂದ್ರ ಬಜೆಟ್ 2026: ವಿದೇಶಿ ನೆರವಿನಲ್ಲಿ ಮಹತ್ತರ ಬದಲಾವಣೆ; ಬಾಂಗ್ಲಾದೇಶಕ್ಕೆ ಅರ್ಧದಷ್ಟು ನೆರವು ಕಡಿತ!

ವಿದೇಶಗಳಿ ನೆರವು ಯೋಜನೆಯಡಿ ಕಳೆದ ವರ್ಷದ ಬಜೆಟ್ ನಲ್ಲಿ ನೀಡಲಾಗಿದ್ದ ಅಂದಾಜು ರೂ. 5,483 ಕೋಟಿಗಿಂತ ಶೇ. 4 ರಷ್ಟು ಹೆಚ್ಚಳ ಅಂದರೆ 5,686 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.

ಕೇಂದ್ರ ಬಜೆಟ್ 2026: ವಿದೇಶಿ ನೆರವಿನಲ್ಲಿ ಮಹತ್ತರ ಬದಲಾವಣೆ; ಬಾಂಗ್ಲಾದೇಶಕ್ಕೆ ಅರ್ಧದಷ್ಟು ನೆರವು ಕಡಿತ!
ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯನ್ನು ಟಿವಿಯಲ್ಲಿ ವೀಕ್ಷಿಸುತ್ತಿರುವ ಸಾರ್ವಜನಿಕರು
Published On :

ನವದೆಹಲಿ: 2026–27ರ ಕೇಂದ್ರ ಬಜೆಟ್‌ನಲ್ಲಿ ಭಾರತ ತನ್ನ ವಿದೇಶಿ ನೆರವಿನಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದು, ಬಾಂಗ್ಲಾದೇಶಕ್ಕೆ ಅರ್ಧದಷ್ಟು ನೆರವನ್ನು ಕಡಿತಗೊಳಿಸಿದೆ.

ವಿದೇಶಗಳಿ ನೆರವು ಯೋಜನೆಯಡಿ ಕಳೆದ ವರ್ಷದ ಬಜೆಟ್ ನಲ್ಲಿ ನೀಡಲಾಗಿದ್ದ ಅಂದಾಜು ರೂ. 5,483 ಕೋಟಿಗಿಂತ ಶೇ. 4 ರಷ್ಟು ಹೆಚ್ಚಳ ಅಂದರೆ 5,686 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಆದರೆ, 2025-2026ರ ಪರಿಷ್ಕೃತ ಅಂದಾಜು 5,785 ಕೋಟಿಗಿಂತ ಸುಮಾರು 100 ಕೋಟಿ ರೂ. ಕಡಿಮೆ ಹಣವನ್ನು ಮೀಸಲಿಡಲಾಗಿದೆ.

ಇದು ಬಿಗಿಯಾದ ಹಣಕಾಸಿನ ಆದ್ಯತೆಯ ಸಂಕೇತವಾಗಿದೆ. ನೆರೆಯ ರಾಷ್ಟ್ರಗಳ ಪೈಕಿ ಬಾಂಗ್ಲಾದೇಶಕ್ಕೆ ತೀವ್ರವಾದ ಹೊಡೆತ ಬಿದ್ದಿದೆ. ಅದಕ್ಕೆ ಮೀಸಲಿಟ್ಟ ಹಣವನ್ನು 120 ಕೋಟಿ ರೂ. ಯಿಂದ 60 ಕೋಟಿ ರೂ.ಗೆ ಕಡಿತ ಮಾಡಲಾಗಿದೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಡುತ್ತಿರುವಂತೆಯೇ ಇತರ ನೆರೆಯ ರಾಷ್ಟ್ರಗಳಿಗೆ ನೆರವನ್ನು ಹೆಚ್ಚಿಸಿದ್ದರೂ ಬಾಂಗ್ಲಾದೇಶಕ್ಕೆ ಕಡಿತ ಮಾಡಲಾಗಿದೆ.

ಭೂತಾನ್ ಗೆ ಅತಿ ಹೆಚ್ಚಿನ ನೆರವು:

ಭೂತಾನ್ ಗೆ ನೆರವನ್ನು ಶೇ. 6 ರಷ್ಟು ಅಂದರೆ 2,289 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಈ ಮೂಲಕ ಜಲವಿದ್ಯುತ್ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ನಿರಂತರ ಬೆಂಬಲ ನೀಡಲಾಗಿದೆ. ಉಳಿದಂತೆ ನೇಪಾಳಕ್ಕೆ ಶೇ.14 ರಷ್ಟು ಅಂದರೆ 800 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.

ಇನ್ನೂ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ನೆರವನ್ನು ಮೂರನೇ ಒಂದರಷ್ಟು 400 ಕೋಟಿ ರೂ.ಗೆ ನೆರವನ್ನು ಹೆಚ್ಚಿಸಲಾಗಿದೆ. ಇದು ಆರ್ಥಿಕ ಬಿಕ್ಕಟ್ಟಿನ ನಂತರ ಚೇತರಿಸಿಕೊಳ್ಳುತ್ತಿರುವ ದ್ವೀಪರಾಷ್ಟ್ರದಲ್ಲಿ ಭಾರತದ ಮಹತ್ವದ ಪಾತ್ರವನ್ನು ತೋರಿಸುತ್ತದೆ.

ಹಿಂದೂ ಮಹಾಸಾಗರ ಪ್ರದೇಶದಲ್ಲಿ, ಮಾಲ್ಡೀವ್ಸ್‌ಗೆ ನೆರವನ್ನು ಶೇ. 8 ರಷ್ಟು ಕಡಿತಗೊಳಿಸಲಾಗಿದ್ದು, ರೂ. 550 ಕೋಟಿ ಮೀಸಲಿಟ್ಟಿದ್ದರೆ ಮಾರಿಷಸ್ ಗೆ ಶೇ. 10 ರಷ್ಟು ಹೆಚ್ಚಿಸಲಾಗಿದ್ದು, 550 ಕೋಟಿ ರೂ. ನೆರವನ್ನು ಮೀಸಲಿಡಲಾಗಿದೆ.

ಅಪ್ಘಾನಿಸ್ತಾನಕ್ಕೆ 150 ಕೋಟಿ ರೂ. ನೆರವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇನ್ನೂ ಮ್ಯಾನ್ಮಾರ್ ಗೆ ಶೇ. 14 ರಷ್ಟು ಕಡಿತ ಮಾಡಲಾಗಿದ್ದು, 300 ಕೋಟಿ ರೂ. ಮೀಸಲಿಡಲಾಗಿದೆ. ಆಫ್ರಿಕನ್ ದೇಶಗಳಿಗೆ ನೆರವು ಸ್ಥಿರವಾಗಿದ್ದು, ರೂ. 225 ಕೋಟಿ ಹಂಚಿಕೆ ಮಾಡಲಾಗಿದೆ. ಲ್ಯಾಟಿನ್ ಅಮೆರಿಕದ ಹಂಚಿಕೆ 120 ಕೋಟಿ ರೂ. ಗೆ ದ್ವಿಗುಣಗೊಂಡಿದೆ. ಒಟ್ಟಾರೇಯಾಗಿ 2026-27 ರ ಅಂದಾಜು ಬಜೆಟ್ ನಲ್ಲಿ ವಿದೇಶಿ ನೆರವಿಗಾಗಿ 22,119 ಕೋಟಿ ಮೀಸಲಿಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.