ದೇಶ

ದೆಹಲಿ ಡೇ ಕೇರ್‌ನಲ್ಲಿ 3 ವರ್ಷದ ಮಗುವಿನ ಮೇಲೆ ಕ್ರೌರ್ಯ; ಕುರ್ಚಿಗೆ ಕಟ್ಟಿ ಹಾಕಿ ಭೀಕರ ಹಲ್ಲೆ, ಭಯಾನಕ Video ನೋಡಿ

ಈಶಾನ್ಯ ದೆಹಲಿಯ ಮೌಜ್‌ಪುರ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದ್ದು, ದೆಹಲಿ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ದೆಹಲಿ ಡೇ ಕೇರ್‌ನಲ್ಲಿ 3 ವರ್ಷದ ಮಗುವಿನ ಮೇಲೆ ಕ್ರೌರ್ಯ; ಕುರ್ಚಿಗೆ ಕಟ್ಟಿ ಹಾಕಿ ಭೀಕರ ಹಲ್ಲೆ, ಭಯಾನಕ Video ನೋಡಿ
ದೆಹಲಿ ಡೇ ಕೇರ್‌ನಲ್ಲಿ 3 ವರ್ಷದ ಮಗುವಿನ ಮೇಲೆ ಕ್ರೌರ್ಯ
Published On :

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಡೇ ಕೇರ್‌ ಕೇರ್‌ಟೇಕರ್ ಅಮಾನವೀಯ ಕೃತ್ಯ ಎಸಗಿದ್ದು, ಹಳದಿ ಪ್ಲಾಸ್ಟಿಕ್ ಕುರ್ಚಿಯಲ್ಲಿ ಕುಳಿತಿದ್ದ ಮೂರು ವರ್ಷದ ಮಗುವನ್ನು ತನ್ನ ಕಾಲುಗಳಿಂದ ನೆಲಕ್ಕೆ ತಳ್ಳಿ, ಭೀಕರವಾಗಿ ಹಲ್ಲೆ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಈಶಾನ್ಯ ದೆಹಲಿಯ ಮೌಜ್‌ಪುರ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದ್ದು, ದೆಹಲಿ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದಲ್ಲಿ ನಾಲ್ವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಶಾಲೆಯ ನಿರ್ದೇಶಕಿ ಸುನೀತಾ ಬನ್ಸಾಲ್, ಪ್ರಾಂಶುಪಾಲರಾದ ನೀಲಂ ಮತ್ತು ಶಿಕ್ಷಕಿಯರಾದ ಸಿಮ್ರಾನ್ ಹಾಗೂ ಪೂಜಾ ವಿರುದ್ಧ ಕೇಸ್ ದಾಖಲಿಸಿದ್ದು, ಕೇರ್‌ಟೇಕರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವಿನ ಪೋಷಕರ ಪ್ರಕಾರ, ಶಾಲೆಯು ಆರಂಭದಲ್ಲಿ ಯಾವುದೇ ಹಲ್ಲೆ ನಡೆದಿಲ್ಲ ಎಂದು ನಿರಾಕರಿಸಿತ್ತು. ಆದರೆ ಶಾಲೆಯ ಒಳಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆಯಲು ಪೋಷಕರು 1,500 ರೂ.ಗಳನ್ನು ಪಾವತಿಸಿ, ವಿಡಿಯೋ ಪಡೆದ ನಂತರ ಸಿಬ್ಬಂದಿ ಕೃತ್ಯ ಬಯಲಾಗಿದೆ.

ಮೂರು ವರ್ಷದ ಮಗು ತನ್ನ ಹೆತ್ತವರಿಗೆ ಕಿವಿ ನೋವು ಎಂದು ಹೇಳಿದ್ದು, ಮಗುವಿನ ಮುಖ ಮತ್ತು ತೋಳುಗಳ ಮೇಲೆ ಮೂಗೇಟುಗಳು ಸಹ ಕಂಡುಬಂದಿವೆ. ತಕ್ಷಣ, ಪೋಷಕರು ಮಗುವನ್ನು ವೈದ್ಯರ ಬಳಿಗೆ ಕರೆದೊಯ್ದರು, ಅವರು ಎರಡೂ ಕಿವಿಗಳು ಊದಿಕೊಂಡಿದ್ದು, ದೈಹಿಕ ಹಲ್ಲೆ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ನಂತರ ಪೋಷಕರು ಶಾಲಾ ಆಡಳಿತ ಮಂಡಳಿಯನ್ನು ಸಂಪರ್ಕಿಸಿ, ದೌರ್ಜನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಆದಾಗ್ಯೂ, ಶಾಲೆಯವರು ಯಾವುದೇ ದೈಹಿಕ ಹಲ್ಲೆ ನಡೆದಿಲ್ಲ ಎಂದು ನಿರಾಕರಿಸಿದೆ.

ತರುವಾಯ ಪೋಷಕರು ತರಗತಿಯ ಸಿಸಿಟಿವಿ ದೃಶ್ಯಗಳನ್ನು ಪಡೆಯಲು 1,500 ರೂ. ಪಾವತಿ ಮಾಡಿದ ನಂತರ ಶಾಲೆಯು ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸಿದೆ.

ಮಗುವಿನ ತಾಯಿ ಆಗಸ್ಟ್ 16, 17 ಮತ್ತು 18 ರ ದೃಶ್ಯಗಳನ್ನು ಪರಿಶೀಲಿಸಿದ್ದು, ದೃಶ್ಯಾವಳಿಯಲ್ಲಿ ಮಗುವನ್ನು ಏಪ್ರನ್ ಬಳಸಿ ಕುರ್ಚಿಗೆ ಕಟ್ಟಿಹಾಕಿರುವುದು ಕಂಡುಬಂದಿದೆ. ಅಲ್ಲದೆ ಶಿಕ್ಷಕ ಮತ್ತು ಕೇರ್ ಟೇಕರ್ ಇಬ್ಬರೂ ಮಗುವಿನ ಮೇಲೆ ದೈಹಿಕ ದೌರ್ಜನ್ಯ ನಡೆಸುತ್ತಿರುವುದನ್ನು ಮತ್ತು ಹಲ್ಲೆ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

"ಮಗುವನ್ನು ಮೂರು ಗಂಟೆಗಳ ಕಾಲ ಏಪ್ರನ್‌ನಿಂದ ಕಟ್ಟಿಹಾಕಲಾಗಿದೆ ಮತ್ತು ನಿರಂತರವಾಗಿ ಥಳಿಸಲಾಯಿತು" ಎಂದು ಮಗುವಿನ ತಂದೆ NDTV ಗೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.