ಅಮಿತ್ ಶಾ ಅಧ್ಯಕ್ಷತೆಯಲ್ಲಿ ಸಭೆ: ಬಿಹಾರ-ಜಾರ್ಖಂಡ್ ನಡುವಿನ 25 ವರ್ಷಗಳ ಹಳೆಯ ನದಿ ನೀರು ಹಂಚಿಕೆ ವಿವಾದ ಇತ್ಯರ್ಥ!
ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಹಾರ ಮತ್ತು ಜಾರ್ಖಂಡ್ ಸನ್ ನದಿಯ ನೀರು ಹಂಚಿಕೆ ವಿವಾದ ಇತ್ಯರ್ಥಗೊಂಡಿದೆ. ಒಪ್ಪಂದದ ಪ್ರಕಾರ, 7.75 ಮಿಲಿಯನ್ ಎಕರೆ ಅಡಿ ನೀರಿನಲ್ಲಿ ಬಿಹಾರ 5.57 MAF ನೀರನ್ನು ಮತ್ತು ಜಾರ್ಖಂಡ್ 2 MAF ನೀರನ್ನು ಪಡೆಯುತ್ತವೆ.

ರಾಂಚಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಹಾರ ಮತ್ತು ಜಾರ್ಖಂಡ್ ಸನ್ ನದಿಯ ನೀರು ಹಂಚಿಕೆ ವಿವಾದ ಇತ್ಯರ್ಥಗೊಂಡಿದೆ. ಒಪ್ಪಂದದ ಪ್ರಕಾರ, 7.75 ಮಿಲಿಯನ್ ಎಕರೆ ಅಡಿ ನೀರಿನಲ್ಲಿ ಬಿಹಾರ 5.57 MAF ನೀರನ್ನು ಮತ್ತು ಜಾರ್ಖಂಡ್ 2 MAF ನೀರನ್ನು ಪಡೆಯುತ್ತವೆ. ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಉಪಸ್ಥಿತರಿದ್ದರು.
ಬಿಹಾರ ಮತ್ತು ಜಾರ್ಖಂಡ್ ನಡುವಿನ ಇಂದಿನ ಒಪ್ಪಂದವು ಪೂರ್ವ ಭಾರತದಲ್ಲಿ ಬಹುನಿರೀಕ್ಷಿತ ನೀರಿನ ವಿವಾದ ಪರಿಹಾರಗೊಂಡಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಒಪ್ಪಂದವು ಬಿಹಾರ ಮತ್ತು ಜಾರ್ಖಂಡ್‌ನ ವಿಶಾಲ ಗ್ರಾಮೀಣ ಪ್ರದೇಶಗಳಲ್ಲಿನ ಲಕ್ಷಾಂತರ ರೈತರಿಗೆ ನೀರಾವರಿ ನೀರನ್ನು ಹಾಗೂ ಕುಡಿಯುವ ನೀರನ್ನು ಒದಗಿಸುತ್ತದೆ ಎಂದರು. ಸನ್ ನದಿ ಹಂಚಿಕೆಗೆ ಸಂಬಂಧಿಸಿದಂತೆ ಇಂದು ನಡೆದ ಒಪ್ಪಂದವು ಪ್ರಧಾನಿ ಮೋದಿಯವರ ಟೀಮ್ ಇಂಡಿಯಾ ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆಯ ದೃಷ್ಟಿಕೋನಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಅಮಿತ್ ಶಾ ಹೇಳಿದರು.
ದೇಶದ ಎಲ್ಲಾ ರಾಜ್ಯಗಳು ಪ್ರತ್ಯೇಕ ಅಸ್ತಿತ್ವವನ್ನು ಹೊಂದಿದ್ದರೂ, ಭಾರತ ಅಂತ ಬಂದಾಗ ಎಲ್ಲಾ ರಾಜ್ಯಗಳು ಟೀಮ್ ಇಂಡಿಯಾವಾಗಿ ಮುಂದುವರೆದರೆ, ಪರಿಹರಿಸಲಾಗದ ಯಾವುದು ಸಮಸ್ಯೆ ಇಲ್ಲ ಎಂದು ಅಮಿತ್ ಶಾ ಹೇಳಿದರು. ಈ ವರ್ಷ ಇಲ್ಲಿಯವರೆಗೆ ವಿವಿಧ ರಾಜ್ಯಗಳ ನಡುವೆ ಸಹಿ ಹಾಕಲಾದ ನಾಲ್ಕನೇ ನೀರಿನ ಒಪ್ಪಂದ ಇದಾಗಿದ್ದು, ಇದು ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಕುಡಿಯುವ ನೀರಿಗೆ ನೀರಿನ ಲಭ್ಯತೆಯನ್ನು ಹೆಚ್ಚಿಸುತ್ತದೆ ಎಂದು ಶಾ ಹೇಳಿದರು.
ಬಿಹಾರ ಮತ್ತು ಜಾರ್ಖಂಡ್ ನಡುವಿನ ಸುಮಾರು 25 ವರ್ಷಗಳಷ್ಟು ಹಳೆಯದಾದ ನೀರಿನ ವಿವಾದವನ್ನು ಪರಿಹರಿಸುವ ಇಂದಿನ ಒಪ್ಪಂದವು ಸಹಕಾರಿ ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಯಲ್ಲಿ ಯಾವುದೇ ಸಮಸ್ಯೆಯನ್ನು ಸಂವಾದದ ಮೂಲಕ ಪರಿಹರಿಸಬಹುದು ಎಂಬುದಕ್ಕೆ ಒಂದು ಉದಾಹರಣೆಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಇಂದು, ಎರಡೂ ರಾಜ್ಯಗಳಲ್ಲಿನ ದೊಡ್ಡ ಭೌಗೋಳಿಕ ಪ್ರದೇಶ, ರೈತರು, ಗ್ರಾಮೀಣ ಪ್ರದೇಶಗಳು ಮತ್ತು ಕುಡಿಯುವ ನೀರಿನ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



