ದೇಶ

ಮತಾಂತರವಾದರೆ ಎಲ್ಲಾ ಸಮಸ್ಯೆಗಳು ಮಾಯ ಎಂದು ಹಿಂದೂ ದೇವತೆಗಳಿಗೆ ಅಪಮಾನ! 18 ವರ್ಷದ ಯುವಕನ ದೂರಿನ ಮೇರೆಗೆ 22 ಮಹಿಳೆಯರ ವಿರುದ್ಧ FIR

ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಭುಗಿಲೆದ್ದ ಮತಾಂತರ ವಿವಾದ: ಮತಾಂತರವಾದರೆ, ಅನಾರೋಗ್ಯ ಗುಣವಾಗುತ್ತೆ ಎಲ್ಲಾ ಸಮಸ್ಯೆಗಳು ಮಾಯ ಎಂದಿದ್ದ ಮಹಿಳೆಯರು. ನಿರಾಕರಿಸಿದಾಗ ಹಿಂದೂ ದೇವತೆಗಳಿಗೆ ನಿಂದನೆಯ ಆರೋಪದಲ್ಲಿ 22 ಮಹಿಳೆಯರ ವಿರುದ್ಧ ಎಫ್‌ಐಆರ್ ದಾಖಲು.

ಮತಾಂತರವಾದರೆ ಎಲ್ಲಾ ಸಮಸ್ಯೆಗಳು ಮಾಯ ಎಂದು ಹಿಂದೂ ದೇವತೆಗಳಿಗೆ ಅಪಮಾನ! 18 ವರ್ಷದ ಯುವಕನ ದೂರಿನ ಮೇರೆಗೆ 22 ಮಹಿಳೆಯರ ವಿರುದ್ಧ FIR
ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಮತಾಂತರ ಆರೋಪ — Online Desk
Published On :

ಪಾಲ್ಘರ್‌ (ಮಹಾರಾಷ್ಟ್ರ): ಮತಾಂತರ ಅನ್ನೋದು ಭಾರತದ ಸಂವಿಧಾನ ಕೊಟ್ಟಿರೊ ಹಕ್ಕು. ಅದರಂತೆ, ಯಾರು ಯಾವುದೇ ಧರ್ಮಕ್ಕಾದರೂ ಮತಾಂತರವಾಗಬಹುದು ಅಥವಾ ಪಾಲಿಸಬಹುದು; ಆದರೆ, ಇದನ್ನೇ ಅಕ್ರಮವಾಗಿ ಬಳಸಿಕೊಳ್ಳುವ ಕೆಲವರು, ಸಮಾಜದಲ್ಲಿ ಬಲವಂತದ ಹಾಗೂ ಆಮಿಷದ ಮತಾಂತರಕ್ಕೆ ಮುಂದಾಗುತ್ತಾರೆ. ಇದು ಅಪರಾಧ ಅಂತ ಗೊತ್ತಿದ್ದರೂ ಕೂಡ ಇದನ್ನು ಯಾವುದೇ ಎದರಿಕೆ ಇಲ್ಲದೆ ಮಾಡುತ್ತಾರೆ, ಹೀಗೆಯೇ, ಆಮಿಷವೊಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿಸಲು ಪ್ರಯತ್ನಿಸಿದ ಆರೋಪದ ಮೇಲೆ ಮಹಾರಾಷ್ಟ್ರ ಪೊಲೀಸರು ಬರೋಬ್ಬರಿ 22 ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಷ್ಟಕ್ಕೂ ಆ ದಿನ ಆ ಗ್ರಾಮದಲ್ಲಿ ನಡೆದದ್ದೇನು, ಈ ವಿವಾದದ ಹಿಂದಿರುವ ಸತ್ಯಾಸತ್ಯತೆಗಳೇನು ಎಂಬ ವರದಿ ಇಲ್ಲಿದೆ:

ಏನಿದು ಘಟನೆ?

ಆಗಸ್ಟ್ 21ರ ಶುಕ್ರವಾರ ಮಧ್ಯಾಹ್ನ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮೊಖಾಡಾ ತಾಲೂಕಿನ ವಾಕಡ್‌ಪಾಡಾ ಗ್ರಾಮದಲ್ಲಿ, 18 ವರ್ಷದ ಯುವಕನ ಮನೆಗೆ ಮಹಿಳೆಯರ ಗುಂಪೊಂದು ಭೇಟಿ ನೀಡಿತ್ತು. ಅವರಲ್ಲಿದ್ದ ಪ್ರಮುಖ ಮಹಿಳೆಯೊಬ್ಬರು ಯುವಕನಿಗೆ ನ್ಯೂ ಟೆಸ್ಟಮೆಂಟ್' (New Testament) ಸೇರಿದಂತೆ ಕೆಲವು ಕ್ರಿಶ್ಚಿಯನ್ ಧಾರ್ಮಿಕ ಪುಸ್ತಕಗಳನ್ನು ಉಚಿತವಾಗಿ ನೀಡಲು ಮುಂದಾಗಿದ್ದರು. ಈ ಧಾರ್ಮಿಕ ಪುಸ್ತಕಗಳನ್ನು ಓದುವುದರಿಂದ ಆತನ ಅನಾರೋಗ್ಯ ಮತ್ತು ಎಲ್ಲಾ ರೀತಿಯ ದೈಹಿಕ ಸಮಸ್ಯೆಗಳು ಸಂಪೂರ್ಣವಾಗಿ ಗುಣವಾಗುತ್ತವೆ ಎಂದು ನಂಬಿಸಲು ಯತ್ನಿಸಿದ್ದಾರೆ.

ಇದೇ ವೇಳೆ,  ಆ ವಿದ್ಯಾರ್ಥಿಯು ಅವರು ನೀಡಿದ ಪುಸ್ತಕಗಳನ್ನು ಸ್ವೀಕರಿಸಲು ನಿರಾಕರಿಸಿದಾಗ, ಆರೋಪಿ ಮಹಿಳೆಯರು ಹಿಂದೂ ದೇವತೆಗಳು ಮತ್ತು ಧಾರ್ಮಿಕ ನಂಬಿಕೆಗಳ ವಿರುದ್ಧ ನಿಂದನಾತ್ಮಕ ಮಾತುಗಳನ್ನಾಡಿದರು ಎನ್ನಲಾಗಿದೆ. ಅಲ್ಲದೆ, ಹಿಂದೂ ದೇವರ ಪೂಜೆ ನಿಲ್ಲಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿದರು ಎಂದು ದೂಷಿಸಲಾಗಿದೆ. ಇನ್ನು, ವಿದ್ಯಾರ್ಥಿಯು ಈ ವಿಷಯವನ್ನು ತಕ್ಷಣವೇ ಸ್ಥಳೀಯ ಗ್ರಾಮಸ್ಥರಿಗೆ ತಿಳಿಸಿದಾಗ, ಸಾರ್ವಜನಿಕರು ಒಟ್ಟಾಗಿ ಆ ಮಹಿಳೆಯರ ಗುಂಪನ್ನು ತಡೆದು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದರು.

ಮುಂದುವರೆದು, ಪೊಲೀಸರು ಗುರುತಿಸಿರುವಂತೆ ಥಾಣೆ ಜಿಲ್ಲೆಯ ಉಲ್ಹಾಸನಗರದ ನಿವಾಸಿ ಸತ್ಯವತಿ ಬಾಲಕೃಷ್ಣ ಕುಂಚೆ (46) ಮತ್ತು ಸ್ಥಳೀಯ ನಿವಾಸಿ ಕುಸುಮ್ ಶಿವರಾಮ್ ಕಾಂಬ್ಡಿ ಈ ಪ್ರಕರಣದ ಪ್ರಮುಖ ಇಬ್ಬರು ಸಂಶಯಾಸ್ಪದ ಆರೋಪಿಗಳಾಗಿದ್ದು, ಧಾರ್ಮಿಕ ಚಟುವಟಿಕೆಯ ಕಾರಣದಿಂದ ಕೆಲವು ಮಹಿಳೆಯರು ಹೈದರಾಬಾದ್‌ನಿಂದ ಬಂದಿದ್ದರು ಎಂಬ ಮಹತ್ವದ ಅಂಶ ಬೆಳಕಿಗೆ ಬಂದಿದೆ. ಸದ್ಯ ಮೊಖಾಡಾ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಅಜಿತ್ ಸಾಬ್ಳೆ ನೀಡಿರುವ ಮಾಹಿತಿಯಂತೆ, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS)ಯ ಸೆಕ್ಷನ್ 299 ( ಉದ್ದೇಶಪೂರ್ವಕವಾಗಿ ಮತ್ತೊಂದು ಧರ್ಮದ ಭಾವನೆಗಳನ್ನು ಕೆರಳಿಸುವುದು ಮತ್ತು ಅಪಮಾನ ಮಾಡುವುದು) ಹಾಗೂ ಸೆಕ್ಷನ್ 3(5) (ಸಾಮಾನ್ಯ ಉದ್ದೇಶದೊಂದಿಗೆ ಗುಂಪಾಗಿ ಅಪರಾಧ ಎಸಗುವುದು) ಅಡಿಯಲ್ಲಿ ಪ್ರಕರಣ ದಾಖಲಿಸದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.