ಕಾನ್ಪುರ: ಕಸದ ರಾಶಿಯಲ್ಲಿ ಅವಧಿ ಮೀರಿದ ಚಾಕೊಲೇಟ್‌ಗಳಿಗೆ ಮುಗಿಬಿದ್ದ ಜನ; Viral Video
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಜನರು ಕಸದ ರಾಶಿಯಲ್ಲಿ ಹುಡುಕಿ ಪ್ಯಾಕ್ ಮಾಡಲಾದ ಚಾಕಲೇಟ್ ಗಳನ್ನು ಸಂಗ್ರಹಿಸುತ್ತಿರುವುದು ಇದರಲ್ಲಿ ಕಾಣಿಸುತ್ತದೆ.

ಕಾನ್ಪುರದ ಪಂಕಿ ಪ್ರದೇಶದಲ್ಲಿ ಜನರ ವರ್ತನೆ ಆತಂಕ ಮತ್ತು ಕಳವಳ ಹುಟ್ಟಿಸಿದ್ದು ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಅವಧಿ ಮುಗಿದ (Expired) ಕಾರಣಕ್ಕೆ ತ್ಯಾಜ್ಯದ ಗುಡ್ಡಕ್ಕೆ ಎಸೆಯಲಾಗಿದ್ದ ಟಾಫಿ ಹಾಗೂ ಚಾಕೊಲೇಟ್‌ಗಳನ್ನು ಜನರು ಹೆಕ್ಕಿ ತೆಗೆದುಕೊಂಡು ಹೋಗುತ್ತಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಜನರು ಕಸದ ರಾಶಿಯಲ್ಲಿ ಹುಡುಕಿ ಪ್ಯಾಕ್ ಮಾಡಲಾದ ಚಾಕಲೇಟ್ ಗಳನ್ನು ಸಂಗ್ರಹಿಸುತ್ತಿರುವುದು ಇದರಲ್ಲಿ ಕಾಣಿಸುತ್ತದೆ.
ಈ ಸಿಹಿತಿಂಡಿಗಳನ್ನು ಎಸೆದುಹೋದ ಸಂದರ್ಭ ಹಾಗೂ ವಿಡಿಯೋದಲ್ಲಿರುವ ಜನರ ಗುರುತನ್ನು ಅಧಿಕೃತ ವರದಿಗಳಿಂದ ಸ್ವತಂತ್ರವಾಗಿ ದೃಢೀಕರಿಸಲು ಸಾಧ್ಯವಾಗಿಲ್ಲವಾದರೂ, ಕಸದ ರಾಶಿಯಿಂದ ಸಂಗ್ರಹಿಸಿದ ಆಹಾರವನ್ನು ಸೇವಿಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಈ ದೃಶ್ಯಗಳು ಗಂಭೀರ ಪ್ರಶ್ನೆಗಳನ್ನು ಎತ್ತಿವೆ.
ಕಾನ್ಪುರ ಪ್ರದೇಶದಲ್ಲಿ ಆಹಾರ ಭದ್ರತಾ ಇಲಾಖೆಯು ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸುತ್ತಿರುವ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ. ಇತ್ತೀಚೆಗೆ ಹಬ್ಬದ ಋತುವಿನಲ್ಲಿ ಆಹಾರ ಭದ್ರತಾ ಅಧಿಕಾರಿಗಳು ದಾಳಿ ನಡೆಸಿ, ಕಲಬೆರಕೆ ಹಾಗೂ ಅಸುರಕ್ಷಿತ ಆಹಾರ ಪದಾರ್ಥಗಳನ್ನು ನಾಶಪಡಿಸುತ್ತಿದ್ದಾರೆ. ಇತ್ತೀಚಿನ ಒಂದು ಕಾರ್ಯಾಚರಣೆಯಲ್ಲಿ, ಅಧಿಕಾರಿಗಳು ಅತಿಯಾದ ಕೃತಕ ಬಣ್ಣ ಬೆರೆಸಿದ ಭಾರಿ ಪ್ರಮಾಣದ ಸಿಹಿತಿಂಡಿಗಳನ್ನು ನಾಶಪಡಿಸಿದ್ದರು. ಹಾಗೆಯೇ ಇತರ ತಪಾಸಣೆಗಳಲ್ಲೂ ಆರೋಗ್ಯಕ್ಕೆ ಕಂಟಕವಾಗುವಂತಹ ಆಹಾರ ಪದಾರ್ಥಗಳು ಪತ್ತೆಯಾಗಿದ್ದವು.
ಅವಧಿ ಮುಗಿದ ಆಹಾರ ಪದಾರ್ಥಗಳ ಗುಣಮಟ್ಟ ಕುಸಿಯುತ್ತದೆ, ಅವುಗಳನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಅಥವಾ ಕಸದ ವಾತಾವರಣಕ್ಕೆ ತೆರೆದುಕೊಂಡರೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಹೀಗಾಗಿ, ವೈರಲ್ ವಿಡಿಯೋವು ಆಹಾರ ಭದ್ರತೆಯ ಬಗ್ಗೆ ಮತ್ತೊಮ್ಮೆ ಜಾಗೃತಿ ಮತ್ತು ಎಚ್ಚರಿಕೆಯ ಅಗತ್ಯವನ್ನು ನೆನಪಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


