ತೃತೀಯಲಿಂಗಿಯಂತೆ ನಟಿಸಿ ಮನೆಗೆ ನುಗ್ಗಿದ ಪಾಪಿ; ದೃಷ್ಟಿ ದೋಷ ನಿವಾರಣೆ ನೆಪದಲ್ಲಿ 25 ವರ್ಷದ ಏರ್ ಹೋಸ್ಟೆಸ್ ಮೇಲೆ ಅತ್ಯಾಚಾರ
ತೃತೀಯಲಿಂಗಿಯಂತೆ ನಟಿಸಿ ಮನೆಗೆ ನುಗ್ಗಿ ಏರ್‌ಲೈನ್ಸ್ ಗಗನಸಖಿ ಮೇಲೆ ಅತ್ಯಾಚಾರ ಎಸಗಿರುವ ಭೀಕರ ಘಟನೆ ಮುಂಬೈನ ಪವಾಯಿ ಪ್ರದೇಶದಲ್ಲಿ ನಡೆದಿದೆ. ಆ ಕುರಿತ ವರದಿ ಇಲ್ಲಿದೆ:

ಮುಂಬೈ (ಮಹಾರಾಷ್ಟ್ರ): ತೃತೀಯಲಿಂಗಿಯಂತೆ ನಟಿಸಿ ಮನೆಗೆ ನುಗ್ಗಿ ಏರ್‌ಲೈನ್ಸ್ ಗಗನಸಖಿ ಮೇಲೆ ಅತ್ಯಾಚಾರ ಎಸಗಿರುವ ಭೀಕರ ಘಟನೆ ಮುಂಬೈನ ಪವಾಯಿ ಪ್ರದೇಶದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಸೀರೆ ಧರಿಸಿ, ತಾನು ತೃತೀಯಲಿಂಗಿ ಎಂದು ನಟಿಸಿ ದೃಷ್ಟಿ ದೋಷ ನಿವಾರಿಸುವುದಾಗಿ ಹೇಳಿ 25 ವರ್ಷದ ವಿಮಾನ ಸಿಬ್ಬಂದಿ (ಏರ್ ಹೋಸ್ಟೆಸ್) ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ. ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಅನಿಲ್ ಶಿಂದೆ (28) ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಆರೋಪಿ ಅನಿಲ್ ಶಿಂದೆ ಸೀರೆ ಧರಿಸಿ, ತೃತೀಯಲಿಂಗಿಯಂತೆ ವೇಷ ಬದಲಿಸಿಕೊಂಡು ಪವಾಯಿ ಪ್ರದೇಶದಲ್ಲಿದ್ದ ಏರ್ ಹೋಸ್ಟೆಸ್ ಯುವತಿಯ ಮನೆಗೆ ಬಂದಿದ್ದಾನೆ. ಈ ವೇಳೆ, ಯುವತಿಯ ಮುಖದಲ್ಲಿ ಮತ್ತು ಜೀವನದಲ್ಲಿ ದೊಡ್ಡ ದೃಷ್ಟಿ ದೋಷ ಇದೆ ಎಂದು ನಂಬಿಸಿದ್ದಾನೆ. ಜೊತೆಗೆ, ಆಸ್ಪತ್ರೆಯಲ್ಲಿದ್ದ ಸಂತ್ರಸ್ತೆಯ ಪತಿ ಮತ್ತು ಕುಟುಂಬದ ಮೇಲಿರುವ 'ದುಷ್ಟ ದೃಷ್ಟಿ' (ದೃಷ್ಟಿ ದೋಷ)ವನ್ನು ತಕ್ಷಣವೇ ನಿವಾರಿಸದಿದ್ದರೆ ಭವಿಷ್ಯದಲ್ಲಿ ಭಾರಿ ತೊಂದರೆಯಾಗುತ್ತದೆ ಎಂದು ಹೆದರಿಸಿದ್ದು, ದೃಷ್ಟಿ ತೆಗೆಯುವ ವಿಧಿವಿಧಾನಗಳನ್ನು ಮಾಡುವ ನೆಪದಲ್ಲಿ ಯುವತಿಯನ್ನು ನಂಬಿಸಿ ಮನೆಗೆ ನುಗ್ಗಿದ್ದಾನೆ. ತದನಂತರ ಯುವತಿಯ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ಇದರೊಂದಿಗೆ, 2000 ರೂಪಯಿ ಪಡೆದು ಎಸ್ಕೇಪ್ ಆಗಿದ್ದಾನೆ.
ಆದರೆ, ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ಸಂತ್ರಸ್ತೆ ತಕ್ಷಣವೇ ಪವಾಯಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ, ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ತಾಂತ್ರಿಕ ದಾಖಲೆಗಳು ಮತ್ತು ಸಿಕ್ಕ ಸುಳಿವುಗಳ ಆಧಾರದ ಮೇಲೆ ಆರೋಪಿ ಅನಿಲ್ ಶಿಂದೆಯನ್ನು ಪತ್ತೆಹಚ್ಚಿ ಕಂಬಿಹಿಂದೆ ತಳ್ಳಿದ್ದಾರೆ.
ಕುಟುಂಬದ ಕೆಲಸವೇ ಟ್ರಾನ್ಸ್ಜೆಂಡರ್ ನಟನೆ!
ತನಿಖೆಯ ವೇಳೆ, ಶಿಂಧೆ ಕುಟುಂಬವು ಟ್ರಾನ್ಸ್ಜೆಂಡರ್ ವ್ಯಕ್ತಿಗಳು ಮತ್ತು ಭಿಕ್ಷುಕರಂತೆ ನಟಿಸುತ್ತಾ ಭಿಕ್ಷೆ ಬೇಡುವುದರಲ್ಲಿ ತೊಡಗಿತ್ತು ಎಂದು ಪೊಲೀಸರು ಕಂಡುಕೊಂಡರು. ಅಪರಾಧಗಳನ್ನು ಮಾಡುವಾಗ ಅವರು ಈ ಹಿಂದೆ ಇದೇ ರೀತಿಯ ವೇಷಗಳನ್ನು ಬಳಸಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




