ದೇಶ

'ರಾಹುಲ್ ಗಾಂಧಿ' ಕಾರಣಕ್ಕೆ ₹40 ಲಕ್ಷ ಪ್ಯಾಕೇಜ್, ಹ್ಯಾಂಡ್‌ಸಮ್ ಹುಡುಗನನ್ನೇ ರಿಜೆಕ್ಟ್ ಮಾಡಿದ ಯುವತಿ!

ಇತ್ತೀಚೆಗೆ ನನಗೆ ಮದುವೆಯ ಪ್ರಸ್ತಾಪ ಬಂದಿತು. ಆ ವ್ಯಕ್ತಿ ಸುಂದರವಾಗಿದ್ದನು ಮತ್ತು ವರ್ಷಕ್ಕೆ ₹40 ಲಕ್ಷ ರೂಪಾಯಿ ಆಕರ್ಷಕ ಪ್ಯಾಕೇಜ್ ಹೊಂದಿದ್ದನು.

'ರಾಹುಲ್ ಗಾಂಧಿ' ಕಾರಣಕ್ಕೆ ₹40 ಲಕ್ಷ ಪ್ಯಾಕೇಜ್, ಹ್ಯಾಂಡ್‌ಸಮ್ ಹುಡುಗನನ್ನೇ ರಿಜೆಕ್ಟ್ ಮಾಡಿದ ಯುವತಿ!
ಆರೂಹಿ ರೆಡ್ಡಿ - ರಾಹುಲ್ ಗಾಂಧಿ
Published On :

ಇತ್ತೀಚಿನ ದಿನಗಳಲ್ಲಿ ಮದುವೆ ನಿಶ್ಚಯಿಸುವಾಗ ಕೇವಲ ಜಾತಿ, ಜಾತಕ ಮತ್ತು ಹುಡುಗನ ಆದಾಯವಷ್ಟೇ ಅಲ್ಲದೆ, ರಾಜಕೀಯ ಸಿದ್ಧಾಂತಗಳು ಸಹ ಪ್ರಮುಖ ಪಾತ್ರ ವಹಿಸುತ್ತಿವೆ ಎಂಬುದಕ್ಕೆ ಇಲ್ಲೊಂದು ವಿಚಿತ್ರ ಹಾಗೂ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ.

ಹೌದು, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ತಾನು ಮದುವೆಯಾಗುತ್ತಿರುವ ಹುಡುಗನ 'ರೋಲ್ ಮಾಡೆಲ್' ಎಂಬ ಒಂದೇ ಕಾರಣಕ್ಕೆ ಯುವತಿಯೊಬ್ಬಳು, ವರ್ಷಕ್ಕೆ 40 ಲಕ್ಷ ರೂಪಾಯಿ ದುಡಿಯುವ, ಸುಂದರವಾಗಿದ್ದ ವರನನ್ನು ತಿರಸ್ಕರಿಸಿದ್ದಾಳೆ.

ಈ ಕುರಿತು ಸ್ವತಃ ಆರೂಹಿ ರೆಡ್ಡಿ ಎಂಬ ಯುವತಿಯೇ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

ಇತ್ತೀಚೆಗೆ ನನಗೆ ಮದುವೆಯ ಪ್ರಸ್ತಾಪ ಬಂದಿತು. ಆ ವ್ಯಕ್ತಿ ಸುಂದರವಾಗಿದ್ದನು ಮತ್ತು ವರ್ಷಕ್ಕೆ ₹40 ಲಕ್ಷ ರೂಪಾಯಿ ಆಕರ್ಷಕ ಪ್ಯಾಕೇಜ್ ಹೊಂದಿದ್ದನು. ಅಲ್ಲದೆ ಒಳ್ಳೆಯ ಕುಟುಂಬದಿಂದ ಬಂದವನು. ಆದರೆ, ಕೇವಲ ಒಂದೇ ಒಂದು ಕಾರಣಕ್ಕಾಗಿ ನಾನು ಆತನನ್ನು ರಿಜೆಕ್ಟ್ ಮಾಡಿದೆ ಆರೂಹಿ ಬರೆದುಕೊಂಡಿದ್ದಾರೆ.

ಅದೇನೆಂದರೆ, ಆತನ ಇನ್‌ಸ್ಟಾಗ್ರಾಮ್ ಪ್ರೊಫೈಲ್ ನೋಡಿದಾಗ, ಆತ ರಾಹುಲ್ ಗಾಂಧಿಯನ್ನು ತನ್ನ ರೋಲ್ ಮಾಡೆಲ್ ಎಂದು ಹಾಕಿಕೊಂಡಿದ್ದ. ಸತತವಾಗಿ ಸೋಲುವ ವ್ಯಕ್ತಿಯನ್ನು ರೋಲ್ ಮಾಡೆಲ್ ಎಂದು ಪರಿಗಣಿಸುವವರ ಐಕ್ಯೂ (IQ) ಮಟ್ಟ ಎಷ್ಟಿರಬಹುದು ಎಂದು ಊಹಿಸುವುದು ಕಷ್ಟವೇನಲ್ಲ. ಅಂತಹವರು ತಮ್ಮ ಮಕ್ಕಳಿಗೆ ಗುಲಾಮಗಿರಿ, ದೇಶವಿರೋಧಿ ಮತ್ತು ಹಿಂದೂ ವಿರೋಧಿ ಮನಸ್ಥಿತಿಯನ್ನು ಬಿಟ್ಟು ಇನ್ನೇನು ಕಲಿಸಲು ಸಾಧ್ಯ?'

ಮುಂದುವರಿದು, 'ನನ್ನ ಪಾಲಿಗೆ ಹಣ, ಆಕರ್ಷಕ ರೂಪ ಅಥವಾ ದೊಡ್ಡ ವೃತ್ತಿಜೀವನಕ್ಕಿಂತ ನನ್ನ ದೇಶ ಮತ್ತು ನನ್ನ ಸನಾತನ ಧರ್ಮವೇ ಮುಖ್ಯ. ಒಬ್ಬ ಹೆಮ್ಮೆಯ ರಾಷ್ಟ್ರವಾದಿ ಹಿಂದೂ ಆಗಿ, ಇಂಥವರನ್ನು ನನ್ನ ಜೀವನ ಸಂಗಾತಿಯಾಗಿ ಎಂದಿಗೂ ಸ್ವೀಕರಿಸಲು ಸಾಧ್ಯವಿಲ್ಲ' ಎಂದು ಆಕೆ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.