ಜಂತರ್ ಮಂತರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು Gen Zಗಳೇ ಅಲ್ಲ; 'ಶಬಾನಾ ಅಜ್ಮಿಯಂತವರೇ' ಹೆಚ್ಚು: ಕಂಗನಾ
"ಜನರೇಷನ್ ಗಟರ್" ಹೇಳಿಕೆ ನೀಟ್-ಯುಜಿ ಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟಿಸುತ್ತಿರುವ ನಿರ್ಧಿಷ್ಟ ಗುಂಪನ್ನು ಗುರಿಯಾಗಿರಿಸಿಕೊಂಡಿದೆಯೇ ಹೊರತು ಒಟ್ಟಾರೆಯಾಗಿ ಜೆನ್ ಝಿಯನ್ನು ಟಾರ್ಗೆಟ್ ಮಾಡಿಲ್ಲ ಎಂದು ಕಂಗನಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೊಮ್ಮೆ ಜೆನ್ ಝಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದು, ತಮ್ಮ "ಜನರೇಷನ್ ಗಟರ್" ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ "ಶಬಾನಾ ಅಜ್ಮಿಯಂತಹ ಜನರೇ" ಹೆಚ್ಚಾಗಿ ಭಾಗವಹಿಸಿದ್ದರು. ಜೆನ್ ಝಿಗಲೇ ಇರಲ್ಲಿಲ್ಲ. ಇತರೆ ವಯೋಮಾನದ ಜನ ಭಾಗವಹಿಸಿದ್ದ ಪ್ರತಿಭಟನೆಯನ್ನು ಜೆನ್ ಝಿ ಪ್ರತಿಭಟನೆ ಎಂದು ಹೇಗೆ ಹೇಳುತ್ತೀರಾ? ಎಂದು ನಟಿ-ರಾಜಕಾರಣಿ ಪ್ರಶ್ನಿಸಿದ್ದಾರೆ.
"ಜನರೇಷನ್ ಗಟರ್" ಹೇಳಿಕೆ ನೀಟ್-ಯುಜಿ ಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟಿಸುತ್ತಿರುವ ನಿರ್ಧಿಷ್ಟ ಗುಂಪನ್ನು ಗುರಿಯಾಗಿರಿಸಿಕೊಂಡಿದೆಯೇ ಹೊರತು ಒಟ್ಟಾರೆಯಾಗಿ ಜೆನ್ ಝಿಯನ್ನು ಟಾರ್ಗೆಟ್ ಮಾಡಿಲ್ಲ ಎಂದು ಕಂಗನಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಸಂಬಂಧ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಕಂಗನಾ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ಈ ದೇಶದ ಯುವಕರ ಬಗ್ಗೆ ಮಾತನಾಡುತ್ತಿದ್ದೀರಾ? ಜೆನ್ ಜಿ (Gen Z) ಜನಸಂಖ್ಯೆ ಸುಮಾರು 30ರಿಂದ 35 ಕೋಟಿ ಇದೆ. ಆದರೆ ದೆಹಲಿಯ ಜಂತರ್ ಮಂತರ್‌ನಲ್ಲಿ ನೆರೆದಿದ್ದ 10 ಸಾವಿರ ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಶಬಾನಾ ಆಜ್ಮಿ ವಯಸ್ಸಿನವರಾಗಿದ್ದರು. ಅಲ್ಲಿ ವಿವಿಧ ವಯೋಮಾನದ ಜನರಿದ್ದರು. ಕೇವಲ 2 ಸಾವಿರದಷ್ಟು ಮಾತ್ರ ಜೆನ್ ಜಿ ಯುವಕರಿದ್ದರು. ಹಾಗಿರುವಾಗ ಇದನ್ನು ಇಡೀ ದೇಶದ ಜೆನ್ ಜಿ ನಡೆಸಿದ ಪ್ರತಿಭಟನೆ ಎಂದು ಹೇಗೆ ಕರೆಯುತ್ತೀರಾ?’ ಎಂದು ಪ್ರಶ್ನಿಸಿದ್ದಾರೆ.
ನಾನು ಯುವಕರ ವಿರೋಧಿ ಅಲ್ಲ
ಮುಂದುವರಿದು ಮಾತನಾಡಿದ ಕಂಗನಾ ರಣಾವತ್ ಅವರು, ‘ನಾನು ಅಲ್ಲಿ ನೆರೆದಿದ್ದ ನಿರ್ದಿಷ್ಟ ಗುಂಪನ್ನು ಉದ್ದೇಶಿಸಿ ಮಾತ್ರ ಹೇಳಿಕೆ ನೀಡಿದ್ದೆ. ಇಡೀ ಯುವ ಪೀಳಿಗೆಯನ್ನು ನಿಂದಿಸಿರುವ ಒಂದೇ ಒಂದು ಸಾಲನ್ನು ತೋರಿಸಿ ಎಂದು ನಿಮಗೆ ಬಹಿರಂಗ ಸವಾಲು ಹಾಕುತ್ತೇನೆ. ನನ್ನ ವಿರುದ್ಧ ಅನಗತ್ಯ ಅಜೆಂಡಾ ಚಲಾಯಿಸಬೇಡಿ, ನಾನು ಕೂಡ ಯುವತಿಯಾಗಿದ್ದು, ಯುವಕರ ವಿರುದ್ಧವಿಲ್ಲ’ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



