ಬಳಕೆದಾರರ ವಯಸ್ಸು ದೃಢೀಕರಣಕ್ಕೆ ಮುಂದಾದ WhatsApp; ಯಾರು ಮಾಡಬೇಕು ಏಜ್ ವೆರಿಫಿಕೇಶನ್?
ಭಾರತದ 85 ಕೋಟಿ ಜನರು ವಾಟ್ಸಾಪ್ ಬಳಕೆ ಮಾಡುತ್ತಾರೆ. ಆದ್ರೆ, ಹೀಗೆ ಬಳಕೆ ಮಾಡೋ ಅದೆಷ್ಟೋ ಜನ ಹದಿಹರೆಯದವರು ಇದ್ದಾರೆ. ಹಾಗಾಗಿ, ವಾಟ್ಸಾಪ್ ತನ್ನ ಬಳಕೆದಾರರ ವಯಸ್ಸನು ತಳಿಯಲು ಮುಂದಾಗಿದೆ. ಅದರಂತೆ, ಭಾರತದಲ್ಲಿ ಏಜ್ ವೆರಿಫಿಕೇಶನ್ ಫೀಚರ್ ಅನ್ನು ಪರೀಕ್ಷಿಸುತ್ತಿದೆ. ಆ ಕುರಿತ ಮಾಹಿತಿ ಇಲ್ಲಿದೆ:

ನವದೆಹಲಿ: ವಯಸ್ಸಿನ ಅಂತರವಿಲ್ಲದೆ ಭಾರತದ 85 ಕೋಟಿ ಜನರು ವಾಟ್ಸಾಪ್ ಬಳಕೆ ಮಾಡುತ್ತಾರೆ. ಆದ್ರೆ, ಹೀಗೆ ಬಳಕೆ ಮಾಡೋ ಅದೆಷ್ಟೋ ಜನ ಹದಿಹರೆಯದವರು ಇದ್ದಾರೆ. ಹಾಗಾಗಿ, ವಾಟ್ಸಾಪ್ ಒಡೆತನದ ಮೆಟಾ ತನ್ನ ಬಳಕೆದಾರರ ವಯಸ್ಸನು ತಳಿಯಲು ಮುಂದಾಗಿದೆ. ಅದರಂತೆ, ವಾಟ್ಸಾಪ್ ಭಾರತದಲ್ಲಿ ಏಜ್ ವೆರಿಫಿಕೇಶನ್ (ವಯಸ್ಸು ದೃಢೀಕರಣ) ಫೀಚರ್ ಅನ್ನು ಪರೀಕ್ಷಿಸುತ್ತಿದೆ. ಆ ಕುರಿತ ಮಾಹಿತಿ ಇಲ್ಲಿದೆ:
ಏಜ್ ವೆರಿಫಿಕೇಶನ್ ಯಾಕೆ?
ವಾಟ್ಸಾಪ್ ಭಾರತದಲ್ಲಿ ವಯಸ್ಸು ಪರಿಶೀಲನೆ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಅಂದರೆ, ಇದು ಬಳಕೆದಾರರಿಗೆ ತಮ್ಮ ಜನ್ಮ ದಿನಾಂಕವನ್ನು ಕೇಳುತ್ತದೆ. ಇದಕ್ಕೆ ಪ್ರಮುಖ ಕಾರಣ ಕೇಂದ್ರ ಸರ್ಕಾರ ಜಾರಿ ಮಾಡಿರುವ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ (DPDP) ಕಾಯ್ದೆ.
ಹೌದು, ಈ DPDP ಕಾಯ್ದೆಯ ಮಕ್ಕಳ ಸುರಕ್ಷತೆಯ ನಿಯಮಗಳಿಗೆ ಅನುಗುಣವಾಗಿ ಈ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಯಾಕಂದ್ರೆ, ಈ ಕಾಯ್ದೆಯ ಪ್ರಕಾರ, ಆನ್‌ಲೈನ್ ಕಂಪನಿಗಳು 18 ವರ್ಷದೊಳಗಿನ ಅಪ್ರಾಪ್ತ ಮಕ್ಕಳ ವೈಯಕ್ತಿಕ ಡೇಟಾವನ್ನು ಬಳಸುವಾಗ ತಂದೆ-ತಾಯಿ ಅಥವಾ ಪೋಷಕರ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಹಾಗಾಗಿಯೇ, ಬಳಕೆದಾರರಲ್ಲಿ ಯಾರು 18 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಯಾರು ಅಪ್ರಾಪ್ತರು ಎಂಬುದನ್ನು ಪತ್ತೆಹಚ್ಚಲು ವಾಟ್ಸಾಪ್ ಈ ಪರೀಕ್ಷೆ ನಡೆಸುತ್ತಿದೆ.
ಹಾಗಾದ್ರೆ, ಏನಿದು DPDP?
DPDP ಅಂದರೆ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ (Digital Personal Data Protection Act). ಇದು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ನಾಗರಿಕರ ಆನ್‌ಲೈನ್ ಮಾಹಿತಿ ಸುರಕ್ಷತೆಯ ಕಾನೂನು. ಅದ್ರಂತೆ, ಕಂಪನಿಗಳು ಬಳಕೆದಾರರ ಅನುಮತಿಯಿಲ್ಲದೆ ಹೆಸರು, ಫೋನ್ ನಂಬರ್, ಅಥವಾ ಇಮೇಲ್ ಐಡಿಯನ್ನು ಬಳಸುವಂತಿಲ್ಲ. ಹಾಗಾಗಿ, ಕಂಪನಿಗಳು ನಿಮ್ಮಿಂದ ಪಡೆದ ಮಾಹಿತಿಯನ್ನು ಯಾವ ಉದ್ದೇಶಕ್ಕೆ ಕೇಳಿದ್ದವೋ ಅದಕ್ಕೆ ಮಾತ್ರ ಬಳಸಬೇಕು. ಇದರೊಂದಿಗೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಡೇಟಾವನ್ನು ಸಂಗ್ರಹಿಸಲು ಪೋಷಕರ ಒಪ್ಪಿಗೆ ಕಡ್ಡಾಯ. ಜೊತೆಗೆ ಮಕ್ಕಳನ್ನು ಗುರಿಯಾಗಿಸಿಕೊಂಡು ಅವರ ಮನಸ್ಸಿನ ಮೇಲೆ ಪ್ರಭಾವ ಬೀರುವ ಜಾಹೀರಾತುಗಳನ್ನು ತೋರಿಸುವಂತಿಲ್ಲ.
ಏತನ್ಮಧ್ಯೆ, DPDP ಪರೀಕ್ಷೆಯ ಸಮಯದಲ್ಲಿ ವಯಸ್ಸಿನ ವಿವರ ನೀಡುವುದು ಸಂಪೂರ್ಣವಾಗಿ ನಿಮಗೆ ಬಿಟ್ಟಿದ್ದು, ಇದನ್ನು ನೀಡದಿದ್ದರೂ ಆ್ಯಪ್ ಬಳಸಲು ಯಾವುದೇ ತೊಂದರೆಯಾಗುವುದಿಲ್ಲ. ಹಾಗಾಗಿ, ಕೇವಲ ಕೆಲವೇ ಕೆಲವು ಬಳಕೆದಾರರಿಗೆ ಮಾತ್ರ ವಯಸನ್ನು ಕೇಳುತ್ತಿರುವ ಸೂಚನೆ ಕಾಣಿಸಿಕೊಳ್ಳುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



