ಆಗಸ್ಟ್ 15ಕ್ಕೆ ಉಗ್ರ ದಾಳಿಗೆ ಪಾಕ್ ಸಂಚು; ಪಂಜಾಬ್ ಪೊಲೀಸರಿಂದ BKI ಏಜೆಂಟ್ ಬಂಧನ; ಚೀನಾದ 86-P ಗ್ರೆನೇಡ್ ವಶಕ್ಕೆ
ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ವೇಳೆ ಅತಿ ದೊಡ್ಡ ಉಗ್ರ ದಾಳಿಗೆ ಪಾಕಿಸ್ತಾನದ ISI ಪ್ರಾಯೋಜಿತ ಬಾಬರ್ ಖಾಲ್ಸಾ ಇಂಟರ್ನ್ಯಾಷನಲ್ ಉಗ್ರಗಾಮಿ ಸಂಘಟನೆ ಸಂಚು ರೂಪಿಸಿತ್ತು. ಆದರೆ, ಪಂಜಾಬ್ ಪೊಲೀಸರು ಆ ಸಂಚನ್ನು ಯಶಸ್ವಿಯಾಗಿ ಹತ್ತಿಕ್ಕಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಜಲಂಧರ್ (ಪಂಜಾಬ್): ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಈ ವೇಳೆ ಅತಿ ದೊಡ್ಡ ಉಗ್ರ ದಾಳಿಗೆ ಪಾಕಿಸ್ತಾನದ ISI ಪ್ರಾಯೋಜಿತ ಬಾಬರ್ ಖಾಲ್ಸಾ ಇಂಟರ್ನ್ಯಾಷನಲ್ (BKI) ಉಗ್ರಗಾಮಿ ಸಂಘಟನೆ ಸಂಚು ರೂಪಿಸಿತ್ತು. ಆದರೆ ಪಂಜಾಬ್ ಪೊಲೀಸರು, ಪಾಪಿ ಪಾಕಿಸ್ತಾನದ ಆ ಸಂಚನ್ನು ಯಶಸ್ವಿಯಾಗಿ ಹತ್ತಿಕ್ಕಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಆಗಸ್ಟ್ 15ರ ವೇಳೆಗೆ ಪಂಜಾಬ್‌ನ ವಿವಿಧೆಡೆ ಸಾರ್ವಜನಿಕ ಸ್ಥಳಗಳು ಹಾಗೂ ಸರ್ಕಾರಿ ಕಚೇರಿಗಳನ್ನು ಗುರಿಯಾಗಿಸಿ ದೊಡ್ಡ ಮಟ್ಟದ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು, ಜಂಟಿ ಕಾರ್ಯಾಚರಣೆ ನಡೆಸಿ, ವಿದೇಶಿ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದ ಪ್ರಮುಖ ಉಗ್ರಗಾಮಿ ಏಜೆಂಟ್ ಒಬ್ಬನನ್ನು ಬಂಧಿಸಿದ್ದಾರೆ. ಈತನಿಂದ ಚೀನಾದ ಅತ್ಯಂತ ಅಪಾಯಕಾರಿ 86-P ಮಾದರಿಯ ಹ್ಯಾಂಡ್ ಗ್ರೆನೇಡ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಮುಂದುವರೆದು, ಉಗ್ರಗಾಮಿಗಳು ಮತ್ತು ಅವರ ವಿದೇಶಿ ಮಾಲೀಕರು ನೇರವಾಗಿ ಮುಖಾಮುಖಿ ಭೇಟಿಯಾಗದೆ, ನಿರ್ದಿಷ್ಟ ರಹಸ್ಯ ಜಾಗದಲ್ಲಿ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟು ಸಂವಹನ ನಡೆಸುವ DLB ವಿಧಾನದ ಮೂಲಕ ಈ ಹ್ಯಾಂಡ್ ಗ್ರೆನೇಡ್ ಅನ್ನು ಪಂಜಾಬ್‌ಗೆ ತಲುಪಿಸಲಾಗಿತ್ತು ಎನ್ನಲಾಗಿದೆ.
ಏತನ್ಮಧ್ಯೆ, ಬಂಧಿತ ಆರೋಪಿಯು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಬೆಂಬಲಿತ, ಅಮೆರಿಕ, ಯುಕೆ ಮತ್ತು ಯುರೋಪ್ ದೇಶಗಳಲ್ಲಿ ತಲೆಮರೆಸಿಕೊಂಡಿರುವ ಬಾಬರ್ ಖಾಲ್ಸಾ ಇಂಟರ್ನ್ಯಾಷನಲ್ ಉಗ್ರಗಾಮಿ ಸಂಘಟನೆಯ ನಾಯಕರೊಂದಿಗೆ ನೇರ ಸಂಪರ್ಕದಲ್ಲಿದ್ದು, ಆಗಸ್ಟ್ 15ರ ಸಂದರ್ಭದಲ್ಲಿ ದೇಶದಲ್ಲಿ ಶಾಂತಿ ಕದಡಲು ಮತ್ತು ಭಯದ ವಾತಾವರಣ ಸೃಷ್ಟಿಸಲು ಮಾಸ್ಟರ್ ಪ್ಲಾನ್ ರೂಪಿಸಿದ್ದ. ಇನ್ನು, ಪಂಜಾಬ್ ಪೊಲೀಸರು ಬಂಧಿತ ಉಗ್ರನ ವಿರುದ್ಧ BNS ಮತ್ತು ಸ್ಫೋಟಕ ಪದಾರ್ಥಗಳ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



