ಬಾಡಿಗೆ ಬಾಯ್ಫ್ರೆಂಡ್ ನಕಲಿ ಪ್ರೀತಿಗೆ ಬೀಳಬೇಡಿ; ಯುವತಿಯರೇ.. ಎಚ್ಚರತಪ್ಪಿದರೆ ಬರಿಗೈ ಮಾತ್ರವಲ್ಲ, ಮಾನವೂ ಹರಾಜು!
ಯುವತಿಯರೇ ಎಚ್ಚರ! ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂಟಿತನ ದೂರ ಮಾಡಲು ಆಕರ್ಷಕ ಯುವಕರು ಬಾಡಿಗೆಗೆ ಸಿಗುತ್ತಾರೆ ಅಂದ್ರೆ, 'ಬಾಡಿಗೆ ಸ್ನೇಹಿತ' (Rent a Friend) ಹೆಸರಿನಲ್ಲಿ ಯುವತಿಯರನ್ನು ಗುರಿಯಾಗಿಸಿಕೊಂಡು ಪೋಸ್ಟರ್‌ಗಳನ್ನು ಹಾಕಿ ಹೊಸ ಮಾದರಿಯ ವಂಚನೆಗಳು (Dating Trap) ನಡೆಯುತ್ತಿದೆ

ಹೈದರಾಬಾದ್: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂಟಿತನ ದೂರ ಮಾಡಲು ಆಕರ್ಷಕ ಯುವಕರು ಬಾಡಿಗೆಗೆ ಸಿಗುತ್ತಾರೆ ಅಂದ್ರೆ, 'ಬಾಡಿಗೆ ಸ್ನೇಹಿತ' (Rent a Friend) ಹೆಸರಿನಲ್ಲಿ ಯುವತಿಯರನ್ನು ಗುರಿಯಾಗಿಸಿಕೊಂಡು ಪೋಸ್ಟರ್‌ಗಳನ್ನು ಹಾಕಿ ಹೊಸ ಮಾದರಿಯ ವಂಚನೆಗಳು (Dating Trap) ನಡೆಯುತ್ತಿದೆ ಎಂದು ಪೊಲೀಸ್ ಕಮೀಷನರ್ ವಿ.ಸಿ. ಸಜ್ಜನರ್ ಯುವತಿಯರಿಗೆ ಎಚ್ಚರಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಇನ್‌ಸ್ಟಾಗ್ರಾಮ್, ಟೆಲಿಗ್ರಾಮ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಒಂಟಿತನ ದೂರ ಮಾಡಲು ಆಕರ್ಷಕ ಯುವಕರು ಬಾಡಿಗೆಗೆ ಸಿಗುತ್ತಾರೆ ಎಂದು ಜಾಹೀರಾತುಗಳನ್ನು ಬಿಡಲಾಗುತ್ತಿದೆ. ನಿಮ್ಮೊಂದಿಗೆ ಸಮಯ ಕಳೆಯಲು, ಸಿನಿಮಾಗೆ ಹೋಗಲು ಅಥವಾ ಶಾಪಿಂಗ್ ಮಾಡಲು ಸುಂದರ ಯುವಕರು ಲಭ್ಯವಿದ್ದು, ಕೊಡುಗೆಯಾಗಿ ಶೇ.50 ರಿಯಾಯಿತಿ ನೀಡಲಾಗುತ್ತಿದೆ ಎಂದು ವಂಚಕರು ಯುವತಿಯರನ್ನು ಆಕರ್ಷಿಸುತ್ತಿದ್ದಾರೆ ಎಂದು ಹೈದರಾಬಾದ್ನ ಪೊಲೀಸ್ ಕಮೀಷನರ್ ವಿ.ಸಿ. ಸಜ್ಜನರ್ ತಿಳಿಸಿದ್ದಾರೆ. ಈ ಹಿಂದೆ ಇದೇ ಮಾದರಿಯ ಬಾಡಿಗೆ ಸ್ನೇಹಿತ ಟ್ರೆಂಡ್ ಬೆಂಗಳೂರಿನಲ್ಲೂ ನಡೆದಿತ್ತು ಎನ್ನುವುದು ಗಮನಾರ್ಹ.
ವಂಚನೆ ನಡೆಯುವುದು ಹೇಗೆ?
ಆಕರ್ಷಕ ಜಾಹೀರಾತುಗಳು: ಒಂಟಿತನ ಕಾಡುತ್ತಿದೆಯೇ? ಕಾಫಿ ಡೇಟ್, ಸಿನಿಮಾ ಅಥವಾ ಶಾಪಿಂಗ್ ಹೋಗಲು ಹ್ಯಾಂಡ್ಸಮ್ ಹುಡುಗರು ಬೇಕೆ? 50% ರಿಯಾಯಿತಿ ಇದೆ ಎಂಬಂತಹ ಆಕರ್ಷಕ ಆಫರ್‌ಗಳ ಪೋಸ್ಟರ್‌ಗಳನ್ನು ಹರಿಬಿಡಲಾಗುತ್ತದೆ.
ದರ ಪಟ್ಟಿ: ಕೇವಲ ₹499 ರಿಂದ ₹4,499 ರವರೆಗೆ (ಕಾಫಿ ಮೀಟಿಂಗ್‌ನಿಂದ ಹಿಡಿದು ಇಡೀ ದಿನದ ಪ್ಯಾಕೇಜ್‌ವರೆಗೆ) ದರ ನಿಗದಿಪಡಿಸಿ ಯುವತಿಯರನ್ನು ಸೆಳೆಯಲಾಗುತ್ತದೆ.
ನಕಲಿ ಪ್ರೊಫೈಲ್‌ಗಳು: ಜಾಹೀರಾತಿನಲ್ಲಿ ಬಳಸುವ ಯುವಕರ ಫೋಟೋಗಳು ಒಂದೋ ಇಂಟರ್ನೆಟ್‌ನಿಂದ ಕದ್ದಿರುತ್ತವೆ ಅಥವಾ AI ಬಳಸಿ ಸೃಷ್ಟಿಸಿದ ನಕಲಿ ಚಿತ್ರಗಳಾಗಿರುತ್ತವೆ.
ಹಣ ವಸೂಲಿ ಮತ್ತು ಬ್ಲ್ಯಾಕ್‌ಮೇಲ್: ಯುವತಿಯರು ಇವರನ್ನು ಸಂಪರ್ಕಿಸಿದಾಗ ಮೊದಲು ಆಡ್ವಾನ್ಸ್ ಬುಕಿಂಗ್ ಶುಲ್ಕ ಅಥವಾ ಸೆಕ್ಯೂರಿಟಿ ಡಿಪಾಸಿಟ್ ಹೆಸರಿನಲ್ಲಿ ಕ್ಯೂಆರ್ ಕೋಡ್ (QR Code) ಮೂಲಕ ಹಣ ಪೀಕುತ್ತಾರೆ. ಹಣ ಪಡೆದ ನಂತರ ನಂಬರ್ ಬ್ಲಾಕ್ ಮಾಡುತ್ತಾರೆ. ಕೆಲವು ಪ್ರಕರಣಗಳಲ್ಲಿ, ಚಾಟಿಂಗ್ ವೇಳೆ ಪಡೆದ ಯುವತಿಯರ ಖಾಸಗಿ ಫೋಟೋಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



