ದೇಶ

ಭಾರತದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ: ಮುಂದಿನ ತಿಂಗಳು ಭಾರತಕ್ಕೆ ಬರಲಿದೆ S-400 ಕ್ಷಿಪಣಿ 4ನೇ ಘಟಕ!

ಕ್ಷಿಪಣಿಯ ಐದನೇ ಘಟಕವನ್ನು ನವೆಂಬರ್ ವೇಳೆಗೆ ತಲುಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಇದು ಭಾರತದ ರಕ್ಷಣಾ ವ್ಯವಸ್ಥೆಗೆ ದೊಡ್ಡ ಶಕ್ತಿ ನೀಡಲಿದೆ.

ಭಾರತದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ: ಮುಂದಿನ ತಿಂಗಳು ಭಾರತಕ್ಕೆ ಬರಲಿದೆ S-400 ಕ್ಷಿಪಣಿ 4ನೇ ಘಟಕ!
ರಷ್ಯಾದ ಎಸ್ 400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆ
Published On :

ನವದೆಹಲಿ: ದೇಶದ ವಾಯು ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮುಂದಿನ ತಿಂಗಳ ಮೊದಲ ವಾರದಲ್ಲಿ ರಷ್ಯಾದಿಂದ S-400 ಟ್ರಯಂಫ್ ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಯ ನಾಲ್ಕನೇ ಘಟಕವನ್ನು ಭಾರತ ಸ್ವೀಕರಿಸುವ ಸಾಧ್ಯತೆ ಇದೆ.

ಇದು ಭಾರತೀಯ ವಾಯುಪಡೆ(IAF)ಯ ವಾಯು ರಕ್ಷಣಾ ಕಾರ್ಯವಿಧಾನವನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಭದ್ರತಾ ಸಂಸ್ಥೆಯ ಮೂಲಗಳು ಮಂಗಳವಾರ ತಿಳಿಸಿವೆ.

ಅಕ್ಟೋಬರ್ 2018 ರಲ್ಲಿ, ಐದು ಕ್ಷಿಪಣಿ ವ್ಯವಸ್ಥೆಗಳ ಘಟಕಗಳನ್ನು ಖರೀದಿಸಲು ಭಾರತ, ರಷ್ಯಾದೊಂದಿಗೆ ಐದು ಬಿಲಿಯನ್ ಅಮೆರಿಕನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿತು ಮತ್ತು ಅವುಗಳಲ್ಲಿ ಮೂರು ಈಗಾಗಲೇ ಭಾರತ ಸ್ವೀಕರಿಸಿದೆ.

ಕ್ಷಿಪಣಿಯ ಐದನೇ ಘಟಕವನ್ನು ನವೆಂಬರ್ ವೇಳೆಗೆ ತಲುಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಇದು ಭಾರತದ ರಕ್ಷಣಾ ವ್ಯವಸ್ಥೆಗೆ ದೊಡ್ಡ ಶಕ್ತಿ ನೀಡಲಿದೆ.

ಆಪರೇಷನ್ ಸಿಂದೂರ್ ಸಮಯದಲ್ಲಿ S-400 ಕ್ಷಿಪಣಿ ವ್ಯವಸ್ಥೆಗಳು ನಿರ್ಣಾಯಕ ಪಾತ್ರ ವಹಿಸಿದ್ದವು. ಪಾಕಿಸ್ತಾನದ ಕ್ಷಿಪಣಿಗಳನ್ನು ಹೊಡೆದುರುಳಿಸಿತ್ತು.

ಕಳೆದ ತಿಂಗಳು, ಕೇಂದ್ರ ಸರ್ಕಾರ, ರಷ್ಯಾದಿಂದ ಮತ್ತೆ ಐದು S-400 ಕ್ಷಿಪಣಿ ವ್ಯವಸ್ಥೆಗಳ ಹೊಸ ಬ್ಯಾಚ್ ಖರೀದಿಗೆ ಅನುಮೋದನೆ ನೀಡಿದ್ದು, ಇದು ಒಟ್ಟು ಕ್ಷಿಪಣಿಗಳ ಸಂಖ್ಯೆಯನ್ನು 10ಕ್ಕೆ ಹೆಚ್ಚಿಸಿದೆ.

ಕ್ಷಿಪಣಿ ವ್ಯವಸ್ಥೆಯ ನಾಲ್ಕನೇ ಘಟಕವನ್ನು ಈಗಾಗಲೇ ರವಾನಿಸಲಾಗಿದೆ ಮತ್ತು ಮುಂದಿನ ಕೆಲವು ದಿನಗಳಲ್ಲಿ ಅದು ಭಾರತವನ್ನು ತಲುಪುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

ಅಮೆರಿಕದಿಂದ ನಿರ್ಬಂಧದ ಭೀತಿ

ಒಪ್ಪಂದದೊಂದಿಗೆ ಮುಂದುವರಿಯುವುದು ಅಮೆರಿಕದ ನಿರ್ಬಂಧಗಳನ್ನು ಆಹ್ವಾನಿಸಬಹುದು ಎಂದು ಟ್ರಂಪ್ ಆಡಳಿತ ಎಚ್ಚರಿಸಿದ ಹೊರತಾಗಿಯೂ ಅಕ್ಟೋಬರ್ 2018ರಲ್ಲಿ, S-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳ ಐದು ಘಟಕಗಳನ್ನು ಖರೀದಿಸಲು ಭಾರತವು ರಷ್ಯಾದೊಂದಿಗೆ USD 5 ಶತಕೋಟಿ ಒಪ್ಪಂದಕ್ಕೆ ಸಹಿ ಹಾಕಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.