ದೇಶ

'ತಮಿಳುನಾಡು ದೆಹಲಿಯನ್ನು ಸೋಲಿಸಿದೆ, ಏಪ್ರಿಲ್ 23ರಂದು ದೆಹಲಿಯ ಅಹಂಕಾರ, ಅದನ್ನು ಬೆಂಬಲಿಸುವ ಗುಲಾಮರನ್ನೂ ಒಟ್ಟಾಗಿ ಸೋಲಿಸುತ್ತೇವೆ': MK Stalin

ತಮಿಳುನಾಡು ದೆಹಲಿಯನ್ನು ಸೋಲಿಸಿದೆ! ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಚುನಾವಣೆಯಲ್ಲಿಯೂ ಬಿಜೆಪಿಯನ್ನು ಹಾಗೂ ಎಐಎಡಿಎಂಕೆಯನ್ನೂ ಸೋಲಿಸಲು ಹೋರಾಟ ಮುಂದುವರಿಸೋಣ ಎಂದು ಕರೆ ನೀಡಿದರು.

'ತಮಿಳುನಾಡು ದೆಹಲಿಯನ್ನು ಸೋಲಿಸಿದೆ, ಏಪ್ರಿಲ್ 23ರಂದು ದೆಹಲಿಯ ಅಹಂಕಾರ, ಅದನ್ನು ಬೆಂಬಲಿಸುವ ಗುಲಾಮರನ್ನೂ ಒಟ್ಟಾಗಿ ಸೋಲಿಸುತ್ತೇವೆ': MK Stalin
ಎಂ ಕೆ ಸ್ಟಾಲಿನ್
Published On :

ಚೆನ್ನೈ: ಸಂಸತ್ತಿನ ಕೆಳ ಸದನ ಲೋಕಸಭೆಯಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆ ಸೋಲಿನ ಬಳಿಕ ತಕ್ಷಣವೇ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇದನ್ನು ತಮಿಳುನಾಡಿನ ಗೆಲುವು ಎಂದು ಬಣ್ಣಿಸಿದ್ದಾರೆ.

ತಮಿಳುನಾಡು ದೆಹಲಿಯನ್ನು ಸೋಲಿಸಿದೆ!” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಚುನಾವಣೆಯಲ್ಲಿಯೂ ಬಿಜೆಪಿಯನ್ನು ಹಾಗೂ ಎಐಎಡಿಎಂಕೆಯನ್ನೂ ಸೋಲಿಸಲು ಹೋರಾಟ ಮುಂದುವರಿಸೋಣ ಎಂದು ಕರೆ ನೀಡಿದರು. ಏಪ್ರಿಲ್ 23ರಂದು ದೆಹಲಿಯ ಅಹಂಕಾರವನ್ನೂ, ಅದನ್ನು ಬೆಂಬಲಿಸುವವರನ್ನೂ ನಾವು ಒಟ್ಟಾಗಿ ಸೋಲಿಸೋಣ ಎಂದು ಅವರು ಹೇಳಿದರು.

ತಮಿಳುನಾಡಿನ ಡಿಎಂಕೆ ಸಂಸದರು ಮತ್ತು ಪಶ್ಚಿಮ ಬಂಗಾಳ, ಕೇರಳ, ಕರ್ನಾಟಕ ಹಾಗೂ ತೆಲಂಗಾಣದಂತಹ ರಾಜ್ಯಗಳಲ್ಲಿ ಬಿಜೆಪಿಗೆ ವಿರೋಧಿಗಳಾದ ನಾಯಕರು ಮಸೂದೆಯ ವಿರುದ್ಧ ಒಟ್ಟಾಗಿ ಮತ ಚಲಾಯಿಸಿದರು.

ಮತ್ತೊಂದು ಪೋಸ್ಟ್‌ನಲ್ಲಿ, ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣ ಜಾರಿಗೆ ತರಬೇಕೆಂದು ತಾನು ಬಯಸಿದ್ದೇನೆ, ಆದರೆ ಆತಂಕ ಕ್ಷೇತ್ರ ಮರುವಿಂಗಡಣೆಯ ಕುರಿತದ್ದಷ್ಟೇ ಎಂದು ಸ್ಟಾಲಿನ್ ಹೇಳಿದರು. ಡಿಲಿಮಿಟೇಶನ್ ನ್ಯಾಯಸಮ್ಮತವಾಗಿರಲು, ವಿಶೇಷವಾಗಿ ದಕ್ಷಿಣ ರಾಜ್ಯಗಳಿಗೆ, ಸೂಕ್ಷ್ಮವಾಗಿ ಚಿಂತನೆ ಅಗತ್ಯ. ನಾವು ಸಲಹೆ, ಸ್ಪಷ್ಟತೆ ಮತ್ತು ಒಪ್ಪಿಗೆಯನ್ನು ಕೇಳಿದ್ದೇವೆ. ಕನಿಷ್ಠ ಮಟ್ಟದಲ್ಲಿ ಮಸೂದೆಯನ್ನು ಬೇರ್ಪಡಿಸಿ ಜಾರಿಗೆ ತರಬಹುದಿತ್ತು ಎಂದು ಅವರು ಹೇಳಿದರು.

ಆದರೆ ಎನ್‌ಡಿಎ ಸರ್ಕಾರ ಅದನ್ನು ಬೇರ್ಪಡಿಸಿ ಜಾರಿಗೆ ತರಲಿಲ್ಲ. ಇದು ನ್ಯಾಯವಲ್ಲ. ಇದು ಕೇವಲ ಪ್ರದರ್ಶನ ಎಂದು ಹೇಳಿ, ತಮಿಳುನಾಡಿನ ಮಹಿಳೆಯರು ಇದನ್ನು ಅರ್ಥಮಾಡಿಕೊಂಡಿದ್ದಾರೆ ಎಂದರು. ಭಾರತದ ಮಹಿಳೆಯರು ಮತ ಬ್ಯಾಂಕ್ ಅಲ್ಲ. ಅವರು ಗಮನಿಸುತ್ತಿದ್ದಾರೆ ಎಂದರು.

ಸತ್ಯ ಸರಳವಾಗಿತ್ತು — ಬಿಜೆಪಿ ಇದನ್ನು ಮಾಡಬಹುದಿತ್ತು, ಆದರೆ ಮಾಡಲಿಲ್ಲ ಎಂದು ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.