ದೇಶ

ಇಸ್ಲಾಂ ತ್ಯಜಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಸಯಾಲಿ ನಾಪತ್ತೆ; ಪೋಷಕರು ಹೇಳಿದ್ದೇನು?

ಸಾರ್ವಜನಿಕವಾಗಿ ಹಿಂದೂ ಧರ್ಮಕ್ಕೆ ಮರಳಿದ್ದ ಸಯಾಲಿ ಅವರು ತಮ್ಮ ಪತಿಯ ವಿರುದ್ಧ ದೌರ್ಜನ್ಯ ಮತ್ತು 'ಲವ್ ಜಿಹಾದ್' ಆರೋಪ ಮಾಡಿದ್ದರು.

ಇಸ್ಲಾಂ ತ್ಯಜಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಸಯಾಲಿ ನಾಪತ್ತೆ; ಪೋಷಕರು ಹೇಳಿದ್ದೇನು?
ಸಯಾಲಿ ಹಾಗೂ ಪತಿ ಅತಿಫ್
Published On :

ಪುಣೆ: ಇತ್ತೀಚಿಗಷ್ಟೇ ಇಸ್ಲಾಂ ತ್ಯಜಿಸಿ ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡಿದ್ದ 2019ರ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ ಅವರು ಪುಣೆಯ ಪಿಂಪ್ರಿ-ಚಿಂಚ್‌ವಾಡ್‌ನಿಂದ ನಾಪತ್ತೆಯಾಗಿದ್ದಾರೆ.

ಸಾರ್ವಜನಿಕವಾಗಿ ಹಿಂದೂ ಧರ್ಮಕ್ಕೆ ಮರಳಿದ್ದ ಸಯಾಲಿ ಅವರು ತಮ್ಮ ಪತಿಯ ವಿರುದ್ಧ ದೌರ್ಜನ್ಯ ಮತ್ತು 'ಲವ್ ಜಿಹಾದ್' ಆರೋಪ ಮಾಡಿದ್ದರು.

ಸಯಾಲಿ ಮತ್ತು ಅವರ ನಾಲ್ವರು ಮಕ್ಕಳನ್ನು ಅಪಹರಿಸಿದ್ದಾರೆ ಎಂದು ಆಕೆಯ ಪೋಷಕರು ಆರೋಪಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೈಮಾನಿಕ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮಾಡೆಲ್ ಸಾಯಾಲಿ ಅವರು, ಮೇಲ್ನೋಟಕ್ಕೆ ಎಲ್ಲವನ್ನೂ ಹೊಂದಿದ್ದ ಮಹಿಳೆಯಾಗಿದ್ದಳು ಮತ್ತು ಒಂದು ವಾರದ ಹಿಂದಷ್ಟೇ ತಮ್ಮ ಹೆಸರನ್ನು ಆದ್ಯ ಸುರ್ವೆ ಎಂದು ಬದಲಾಯಿಸಿಕೊಂಡಿದ್ದರು. ಅದ್ಧೂರಿ ಸಮಾರಂಭದೊಂದಿಗೆ ಹಿಂದೂ ಧರ್ಮಕ್ಕೆ ಸಾರ್ವಜನಿಕವಾಗಿ ಮರಳುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಭಾರಿ ಸುದ್ದಿಯಾಗಿದ್ದರು.

ತಮ್ಮ ಮುಸ್ಲಿಂ ಪತಿ ಹಲವು ವರ್ಷಗಳಿಂದ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದ ಸಯಾಲಿ ಈಗ ತನ್ನ ನಾಲ್ಕು ಮಕ್ಕಳೊಂದಿಗೆ ನಾಪತ್ತೆಯಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಏನಿದು ಪ್ರಕರಣ? ಗಂಡ ಯಾರು?

ಕುಟಂಬದ ವಿರೋಧದ ನಡುವೆಯೂ ಸಯಾಲಿ ಅವರು ಮೀರಾ-ಭಾಯಂದರ್ ಮೂಲದ ಮುಸ್ಲಿಂ ಉದ್ಯಮಿ ಅತಿಫ್ ತಾಸೆ ಎಂಬಾತನನ್ನು ಪ್ರೀತಿಸಿ ಮದುವೆ ಆಗಿದ್ದರು. ಮದುವೆ ಆಗುವುದಕ್ಕಾಗಿ ತನ್ನ ಹಿಂದೂ ಧರ್ಮವನ್ನು ತೊರೆದು, ಅತೀಜಾ ತಾಸೆ ಹೆಸರಿನಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದರು.

ಅತಿಫ್​ರನ್ನು ಮದುವೆ ಆಗಿದ್ದೇ ನನ್ನ ಜೀವನದಲ್ಲಿ ನಾನು ಮಾಡಿದ ಒಂದು ದೊಡ್ಡ ತಪ್ಪು ಎಂದು ಸಯಾಲಿ ಹೇಳಿದ್ದಾರೆ. ಮದುವೆಯಾದ ಬಳಿಕ ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ, ಕೆಲವೇ ತಿಂಗಳುಗಳಲ್ಲಿ ನನ್ನ ಶೋಷಣೆ ಆರಂಭವಾಯಿತು ಎಂದು ಮಾಧ್ಯಮದವರಿಗೆ ಸಯಾಲಿ ತಿಳಿಸಿದ್ದಾರೆ.

ನನಗೆ ನಾಲ್ಕು ಮಕ್ಕಳಿದ್ದಾರೆ. ಅವರಿಗಾಗಿ ಎಲ್ಲ ಹಿಂಸೆಯನ್ನು ಹಲವು ವರ್ಷಗಳವರೆಗೆ ಸಹಿಸಿಕೊಂಡೆ. ನನ್ನದು ಯಾವುದೇ ತಪ್ಪಿಲ್ಲದಿದ್ದರೂ ದಿನದ 24 ಗಂಟೆಯೂ ನಿಂದನೆ ಮತ್ತು ಹಲ್ಲೆಯನ್ನು ಅನುಭವಿಸುತ್ತಿದ್ದೆ. ಮೊದಲು ಅಸಹಜವೆನಿಸುತ್ತಿದ್ದ ವಿಷಯಗಳು ಕ್ರಮೇಣ ಸಾಮಾನ್ಯ ಎನಿಸಲು ಶುರುವಾಯಿತು. ಇದಿಷ್ಟೇ ಅಲ್ಲದೆ, ನನ್ನ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರಲಾಗಿತ್ತು. ನಿರಂತವಾಗಿ ಅನುಭವಿಸುತ್ತಿದ್ದ ಕಿರುಕುಳದ ಬಗ್ಗೆ ಪೊಲೀಸರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೆ, ತನ್ನ ಪ್ರಕರಣವನ್ನು ತಾವೇ 'ಲವ್ ಜಿಹಾದ್' ಎಂದು ಕರೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.