'ಮೌನಗೊಳಿಸಲಾಗಿದೆ, ಆದರೆ ಸೋತಿಲ್ಲ': ರಾಜ್ಯಸಭೆ ಉಪನಾಯಕ ಸ್ಥಾನದಿಂದ ಕೆಳಗಿಳಿಸಿದ ಬಳಿಕ ರಾಘವ್ ಚಡ್ಡಾ ಪ್ರತಿಕ್ರಿಯೆ
ಗುರುವಾರ ಆಮ್ ಆದ್ಮಿ ಪಕ್ಷವು ರಾಜ್ಯಸಭಾ ಕಾರ್ಯದರ್ಶಿಗೆ ಪತ್ರ ಬರೆದು, ಚಡ್ಡಾ ಅವರನ್ನು ರಾಜ್ಯಸಭೆಯಲ್ಲಿನ ಉಪನಾಯಕನ ಸ್ಥಾನದಿಂದ ತೆಗೆದುಹಾಕುವಂತೆ ಕೋರಿತ್ತು.

ನವದೆಹಲಿ: ರಾಜ್ಯಸಭೆಯಲ್ಲಿನ ಉಪನಾಯಕನ ಸ್ಥಾನದಿಂದ ಆಮ್ ಆದ್ಮಿ ಪಕ್ಷವು (AAP) ರಾಘವ್ ಚಡ್ಡಾ ಅವರನ್ನು ಕೆಳಗಿಳಿಸಿದ್ದು, ಸಂಸದ ರಾಘವ್ ಚಡ್ಡಾ ಅವರು ಶುಕ್ರವಾರ ತಮ್ಮ ಮೊದಲ ಪ್ರತಿಕ್ರಿಯೆಯಾಗಿ, 'ಆಮ್ ಆದ್ಮಿ'ಯನ್ನು ಉದ್ದೇಶಿಸಿ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ.
'ನನ್ನನ್ನು ಮೌನಗೊಳಿಸಲಾಗಿದೆ, ಆದರೆ ಸೋತಿಲ್ಲ' ಇದು ಆಮ್ ಆದ್ಮಿಗೆ ನನ್ನ ಸಂದೇಶ ಎಂದು ಚಡ್ಡಾ X ನಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ.
'ಸಾರ್ವಜನಿಕ ಸಮಸ್ಯೆಗಳನ್ನು ಎತ್ತುವುದು ಅಪರಾಧವೇ? ನಾನು ಮಾಡಿದ್ದು ತಪ್ಪೇ? ನಾನು ಏನಾದರೂ ತಪ್ಪು ಮಾಡಿದ್ದೇನೆಯೇ? ನಾನು ಮಾತನಾಡುವಾಗಲೆಲ್ಲ, ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡಿದ್ದೇನೆ. ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಗಳನ್ನು ಮಾತನಾಡುವುದನ್ನು ಮತ್ತು ಎತ್ತುವುದನ್ನು ಯಾರಾದರೂ ಏಕೆ ತಡೆಯುತ್ತಾರೆ' ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.
'ನೀವು ಯಾವಾಗಲೂ ಇರುವಂತೆಯೇ ನನ್ನೊಂದಿಗೆ ನಿಲ್ಲುವಂತೆ' ನಾನು ಮನವಿ ಮಾಡುತ್ತೇನೆ. ನನ್ನ ಮೌನವನ್ನು ಶರಣಾಗತಿ ಎಂದು ತಪ್ಪಾಗಿ ಭಾವಿಸಬೇಡಿ. ನಾನು ಈಗ ಶಾಂತ ನದಿಯಾಗಿದ್ದೇನೆ. ಆದರೆ, ಪ್ರವಾಹದ ವಿರುದ್ಧ ಹೇಗೆ ಈಜಬೇಕೆಂಬುದು ನನಗೆ ತಿಳಿದಿದೆ' ಎಂದು ಅವರು ಹೇಳಿದರು.
ಗುರುವಾರ ರಾಘವ್ ಚಡ್ಡಾ ಅವರು ಸದನದಲ್ಲಿ ಪಕ್ಷದ ಉಪ ನಾಯಕನಾಗಿ ತಾವು ಎತ್ತಿರುವ ವಿಷಯಗಳನ್ನು ಎತ್ತಿ ತೋರಿಸುವ ಒಂದು ಸಂಚಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಕೆಲವೇ ಗಂಟೆಗಳ ನಂತರ ಈ ವಿಡಿಯೋ ಸಂದೇಶ ಬಂದಿದೆ.
ಮಧ್ಯಮ ವರ್ಗದ ಮೇಲಿನ ತೆರಿಗೆ ಹೊರೆ, ಡೇಟಾ ಮುಕ್ತಾಯ ಸಮಸ್ಯೆ, ಭಾರತದಲ್ಲಿ ಪಿತೃತ್ವ ರಜೆ ಒಂದು ಹಕ್ಕು ಮತ್ತು ವಿಮಾನ ನಿಲ್ದಾಣಗಳಲ್ಲಿ ಹೆಚ್ಚುವರಿ ಬ್ಯಾಗೇಜ್ ಶುಲ್ಕಗಳಂತಹ ಕಳವಳಗಳನ್ನು ಅದರಲ್ಲಿ ಉಲ್ಲೇಖಿಸಲಾಗಿದೆ.
ಗುರುವಾರ ಆಮ್ ಆದ್ಮಿ ಪಕ್ಷವು ರಾಜ್ಯಸಭಾ ಕಾರ್ಯದರ್ಶಿಗೆ ಪತ್ರ ಬರೆದು, ಚಡ್ಡಾ ಅವರನ್ನು ರಾಜ್ಯಸಭೆಯಲ್ಲಿನ ಉಪನಾಯಕನ ಸ್ಥಾನದಿಂದ ತೆಗೆದುಹಾಕುವಂತೆ ಕೋರಿತ್ತು. ಈ ಸ್ಥಾನವನ್ನು ಪಂಜಾಬ್ ಸಂಸದ ಅಶೋಕ್ ಮಿತ್ತಲ್ ಅವರಿಗೆ ನೀಡಿದೆ.
ಮೂಲಗಳ ಪ್ರಕಾರ, ಪಂಜಾಬ್‌ನ ರಾಜ್ಯಸಭಾ ಸದಸ್ಯರಾಗಿರುವ ಚಡ್ಡಾ ಅವರಿಗೆ ಪಕ್ಷದ ಕೋಟಾದಿಂದ ಸದನದಲ್ಲಿ ಮಾತನಾಡಲು ಸಮಯ ನೀಡಬಾರದು ಎಂದೂ ಪತ್ರದಲ್ಲಿ ತಿಳಿಸಲಾಗಿದೆ.

ಆಮ್ ಆದ್ಮಿ ದನಿಯಾಗಿದ್ದ ರಾಘವ್ ಚಡ್ಡಾಗೆ AAP ಶಾಕ್: ರಾಜ್ಯಸಭೆ ಉಪನಾಯಕ ಸ್ಥಾನದಿಂದ ವಜಾ; ಮಾತನಾಡದಂತೆ ನಿರ್ಬಂಧ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


